ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಹೈಕಮಾಂಡ್ ಗೆ  ಪಕ್ಷದ ಇತಿಹಾಸದಲ್ಲೇ ಹಿಂದೆಂದು ಇಷ್ಟೊಂದು ಕಷ್ಟಕರವಾಗಿರಲಿಲ್ಲವೇನೋ ಅನ್ನಿಸುತ್ತೆ.ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಂಡಿದೆ.ಯತ್ನಾಳ್ ಬಣದ ಬೇಡಿಕೆಯಂತೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಬೇಕೋ, ಬಿವೈ ವಿಜಯೇಂದ್ರ ಅವರನ್ನೇ ಮುಂದುವರೆಸಬೇಕೋ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.ಇದೆಲ್ಲದರ ನಡುವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಎಲ್ಲವನ್ನು ಸರಿದೂಗಿಸಬಲ್ಲ ಕೆಪಾಸಿಟಿ ಇರುವ ಲೀಡರ್ಸ್ ಗಳು ಯಾರೆನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಇರುವ ಕೆಲವೇ ಕೆಲವು ಹೆಸರುಗಳಲ್ಲಿ ಸಿ.ಟಿ ರವಿ,ಅರವಿಂದ ಬೆಲ್ಲದ್ ಮುಂಚೂಣಿಯಲ್ಲಿವೆ … Read more

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

*****ಆಯಕಟ್ಟಿನ ಹುದ್ದೆ  ಭರವಸೆ ಈಡೇರಿಸುವ ಭರಾಟೆಯಲ್ಲಿ  ನಿಯಮ ಗಾಳಿಗೆ ತೂರಿತಾ ಸಿದ್ದರಾಮಯ್ಯ ಸರ್ಕಾರ.. *****ಅಧ್ಯಕ್ಷರಾಗಲು ಬೇಕಿರುವುದು ಬಿಇ( ಪರಿಸರ ವಿಜ್ನಾನ)-ನರೇಂದ್ರಸ್ವಾಮಿ ಓದಿರುವುದು ಬಿ.ಇ( ಸಿವಿಲ್) ಅಂತೆ.. ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿಯ ವಾಸ್ತುವೇ ಸರಿ ಇಲ್ಲ ಎನಿಸುತ್ತದೆ.ಯಾರೇ ಹೊಸದಾಗಿ ಅಧ್ಯಕ್ಷರಾಗಿ ಬಂದರೂ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಲೇ ಇರುತ್ತದೆ.ಹೊಸ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ಶಾಸಕ ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಎದುರಾಗಿರುವ ಗೊಂದದ  ಹಿನ್ನಲೆಯಲ್ಲಿ ಇಂತದ್ದೊಂದು ಪ್ರಶ್ನೆ ಕಾಡುವುದು ಸಹಜ..ಆದರೆ ಇದು … Read more

“ವಿಸ್ತಾರ” ಪುನರಾಂಭಕ್ಕೆ ದೊಡ್ಡ ಹಿನ್ನಡೆ..!! “ಚಾನೆಲ್” ಮಾಲೀಕತ್ವದ ಕಂಪೆನಿಯ ಸ್ವತ್ತುಗಳು ಜಪ್ತಿ..!?

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ವಿಸ್ತಾರ ನ್ಯೂಸ್ ಚಾನೆಲ್ ನ ನಿರ್ದೇಶಕರಲ್ಲಿ ಒಬ್ಬರೆನ್ನಲಾಗಿದ್ದ ಹರಿಪ್ರಕಾಶ್ ಕೋಣೆಮನೆ ವಿರುದ್ಧ ಮಾಹಿತಿ ಮತ್ತು  ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರೂ ಆಗಿರುವ ಮೈಸೂರು ಮರ್ಕಂಟೈಲ್  ಕಂಪೆನಿಯ  ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರು ದೂರು ನೀಡಿದ್ದಾರೆನ್ನಲಾಗಿದ್ದು,ಅನುಮತಿ ಇಲ್ಲದೆ ಕಂಪೆನಿಯ ಷೇರುಗಳನ್ನು ಹಸ್ತಾಂತರಿಸಿದ್ದಾರೆನ್ನುವುದು ಕೋಣೆಮನೆ ಮೇಲೆ ಕೇಳಿಬಂದಿರುವ ಆಪಾದನೆ. ಅನುಮತಿ ಇಲ್ಲದೆ ಷೇರುಗಳನ್ನು ಇನ್ನೊಬ್ಬರಿಗೆ ಮಾರಬಾರದೆನ್ನುವುದು ಕಂಪೆನಿ ರೂಲ್ಸ್.ಆದರೆ … Read more

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ಯಾಂಪಸ್ ನಲ್ಲಿ ಇವತ್ತು ಒಂದೇ ವಿಷಯದ ಬಗ್ಗೆ ಚರ್ಚೆ..ಅದು ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಕಚೇರಿ ಮೇಲೆ ನಡೆದ ಇ.ಡಿ ರೇಡ್.. ಬಹುಷಃ  ಬಿಬಿಎಂಪಿಯಲ್ಲೇ ಪ್ರಹ್ಲಾದ್ ಅವರಷ್ಟು ಪ್ರಭಾವಶಾಲಿ ಅಧಿಕಾರಿ ಇನ್ನೊಬ್ಬನಿರಲಾರರೇನೋ..?!.ಅಂಥಾ ಅಧಿಕಾರಿಗೇನೆ ಇ.ಡಿ ತೋಡಿದ ಖೆಡ್ಡಾಕ್ಕೆ ಕೇವಲ ಬಿಬಿಎಂಪಿಯಷ್ಟೇ ಅಲ್ಲ, ಸರ್ಕಾರವೇ ಒಂದ್ ಕ್ಷಣ ಅದುರೋಗಿದೆ.ಏಕಂದ್ರೆ ಎಲ್ಲರಿಗು ಗೊತ್ತಿರುವಂತೆ ಪ್ರಹ್ಲಾದ್  ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿ. ನಿಮಗೆ ಗೊತ್ತಿರಲಿ ಅಂಥಾ ಹೇಳುತ್ತೇವೆ ಕೇಳಿ, … Read more

ಪಿಯು ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರನ್ನೇ ದಾರಿ ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ ಹಿತಾಸಕ್ತಿಗಳಿವೆಯಾ?

ನಿಜಕ್ಕೂ ದುರ್ಬಳಕೆ ಆಗುತ್ತಿದೆಯಾ.. ದಕ್ಷ-ಪ್ರಾಮಾಣಿಕ ಐಎಎಸ್ ಅಧಿಕಾರಿ ಸಿಂಧೂ ರೂಪೇಶ್ ಅವರ ಒಳ್ಳೆಯತನ? ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 18ನೇ ತಿರುವಿನಲ್ಲಿರುವ  ಪದವಿ ಪೂರ್ವ ಶಿಕ್ಷಣ ಇಲಾಖೆ (DEPARTMENT OF SCHOOL EDUCATION-PRE UNIVERSITY) ಗೆ  ಶೈಕ್ಷಣಿಕವಾಗಿ ತನ್ನದೇ ಆದ ಹಿನ್ನಲೆಯಿದೆ.ಭವ್ಯ ಇತಿಹಾಸವಿದೆ. ನಿರ್ದೇಶಕರಾಗಿ ಬರುವ ಅಧಿಕಾರಿಗಳು ತಮ್ಮದೇ ಕನಸು-ಆಶಯ-ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದಿದ್ದಾರೆ.ಶೈಕ್ಷಣಿಕವಾಗಿ ಅನುಕೂಲವಾಗಬಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬಲ್ಲ  ಒಂದಷ್ಟು ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ನಿಟ್ಟಿನಲ್ಲಿ ಈಗಿನ ನಿರ್ದೇಶಕರ ಪ್ರಯತ್ನ ಮುಂದುವರೆದಿದ್ದರೂ ಅವರನ್ನು … Read more

Deepavali bumper: KSRTC ಗೆ 18 ಕೋಟಿ ಗಳಿಕೆ, ಒಂದೇ ದಿನ ಸಾರ್ವಕಾಲಿಕ ದಾಖಲೆಯ ಟಿಕೆಟ್ ಬುಕ್ಕಿಂಗ್

ಬೆಂಗಳೂರು: ನಷ್ಟದ ಹೊರೆಗೆ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KARNATAKA STATE ROAD TRANSPORT CORPORATION) ಗೆ ದೀಪಾವಳಿ ಹಬ್ಬ(DEEPAWALI FESTIAVL) ಸ್ವಲ್ಪ ಮಟ್ಟದ ಚೇತರಿಕೆ ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದ ಎನ್ನಬಹುದಾದ(ಆದರೆ ಸಾರ್ವಕಾಲಿಕ ದಾಖಲೆಯಲ್ಲ) ಗಳಿಕೆಯನ್ನು ಕೆಎಸ್ ಆರ್ ಟಿಸಿ ಮಾಡಿದೆ. ಗಳಿಕೆಯಲ್ಲಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆ ಮತ್ತು ಅವತಾರ್ ನಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲೂ ಹೊಸ ವಿಕ್ರಮವನ್ನೇ ಸಾಧಿಸಿದೆ. ದೀಪಾವಳಿ ಹಬ್ಬದಾಚರಣೆಯ ಹಿಂದೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಸಾಲು ಸಾಲು ರಜೆಗಳು ಬರುವುದರಿಂದ … Read more

Deepavali pollution Decrease! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ಮಾಲಿನ್ಯ ಆಗಿಲ್ವಂತೆ!?

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(POLLUTION CONTROLE BOARD) ಕೊಟ್ಟಿರುವ ವಿವರಣೆಯನ್ನು ನಂಬಬೇಕೋ..ಬಿಡಬೇಕೋ ಗೊತ್ತಾಗ್ತಿಲ್ಲ. ವಾಯುಮಾಲಿನ್ಯ(AIR POLLUTION) ಹಾಗೂ ಶಬ್ದ ಮಾಲಿನ್ಯ(NOISE POLLUTION) ವನ್ನು ಮಾನಿಟರ್ ಮಾಡುವ ಯಂತ್ರಗಳೇ ತಾಂತ್ರಿಕವಾಗಿ ಹಾಳಾಗಿವೆಯೇ..? ಅಥವಾ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ..? ಅಥವಾ ದೋಷಪೂರಿತವಾದ ಮಾಹಿತಿ ಕೊಡುತ್ತಿವೆಯೋ..ಒಂದೂ ಗೊತ್ತಾಗ್ತಿಲ್ಲ.ಏಕೆಂದರೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ  ಬೆಂಗಳೂರಲ್ಲಿ ಪಟಾಕಿ(CRACKERS) ಸಿಡಿಸಲಾಗಿದ್ದರೂ  ವಾಯುಮಾಲಿನ್ಯ ಕಳೆದ ಬಾರಿಗಿಂತ ಬಹುತೇಕ ಈ ಬಾರಿ ಕಡಿಮೆಯಾಗಿದೆಯಂತೆ.ಇದನ್ನು ಸ್ವತಹ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳ್ತಿದೆ. ಪಟಾಕಿ ಸಿಡಿಸುವ ಮುನ್ನ … Read more

ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!

“ಗುರು ಒಬ್ಬ ವ್ಯಸನಿ….ಆತನಲ್ಲಿ ಸೃಜನಶೀಲತೆಯೇ ಸತ್ತೋಗಿತ್ತು..ನನ್ನಿಂದ ಕೆಟ್ಟ ಸಿನೆಮಾ ಮಾಡಿಸಿದಾತ..ಎಂದು ಹೇಳಿದ್ದ ಜಗ್ಗೇಶ್.”ಸಾವನ್ನು ಯಾರೂ‌ ಸಂಭ್ರಮಿಸಬಾರದು..ಸತ್ತವರ ಬಗ್ಗೆ ಅವರ ನೆಗೆಟಿವ್ಸ್ ಏನೇ ಇರಲಿ ಅದನ್ನು ಪರಾಮರ್ಷೆ ಮಾಡಿ,ಹೀಯಾಳಿಸಬಾರದು ಎನ್ನುತ್ತಾರೆ ಹಿರಿಯರು ಹಾಗೂ ಅನುಭಾವಿಗಳು.. ಅವರ ಮಾತನ್ನು ಪರಿಗಣಿಸುವುದೇ ಆದಲ್ಲಿ,ಜಗ್ಗೇಶ್ ಅವರಂಥ ಹಿರಿಯ ನಟರ ಬಾಯಲ್ಲಿ ಇಂಥಾ ಮಾತುಗಳು ಬರಬಾರದಿತ್ತು..ಹೀಗೆ ನನಗಷ್ಟೇ ಅಲ್ಲ,ನನ್ನಂತ ಎಷ್ಟೋ ಜ‌ನರಿಗೆ ಎನ್ನಿಸಿದರೂ ತಪ್ಪಿಲ್ಲ.. ಕನ್ನಡದ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಮೊದಲು ಚಾನೆಲ್ ಗಳು ಮಾತನಾಡಿಸಿದ್ದೇ ನಟ ಜಗ್ಗೇಶ್ ಅವರನ್ನು..ಆರಂಭದಲ್ಲಿ … Read more

BGS ಆಸ್ಪತ್ರೆಗೆ ಕೊಲೆ ಆರೋಪಿ ದರ್ಶನ್‌ ಅಡ್ಮಿಟ್ -ಎಡಗಾಲಿನ ಸ್ಪರ್ಷ ಕುಂಠಿತ, 2 ದಿನ‌ ಚಿಕಿತ್ಸೆ

ಬೆಂಗಳೂರು: 131 ದಿನಗಳ ಬಳಿಕ ಜೈಲ್‌ ನಿಂದ ಬಿಡುಗಡೆಯಾದರೂ ಅದೇಕೋ ನಟ ದರ್ಶನ್‌( ACTOR DARSHAN) ಗೆ ಚಾಲೆಂಜಸ್‌ ಗಳು ತಪ್ಪಿಲ್ಲ ಎನ್ನಿಸುತ್ತದೆ.ಜೈಲ್‌ ನಿಂದ ಬಿಡುಗಡೆಯಾಗಿ ಮಗ ವಿನೀಶ್‌ ( SON VINEESH) ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದನ್ನು ಬಿಟ್ಟರೆ ಕಾನೂನಿನ ಕುಣಿಕೆ ದರ್ಶನ್‌ ನೆಮ್ಮದಿಯಾಗಿ ಇರೊಕ್ಕೆ ಬಿಡ್ತಿಲ್ಲ ಎನ್ನಿಸುತ್ತದೆ.ದರ್ಶನ್‌ ಗೆ ಬೇಲ್‌ ಸಿಕ್ಕಿರುವುದನ್ನು ಸುಪ್ರಿಂ ಕೋರ್ಟ್‌ ನಲ್ಲಿ ಪ್ತಶ್ನಿಸಲು ಪೊಲೀಸ್‌ ಇಲಾಖೆ ನಿರ್ದರಿಸಿದೆ ಎನ್ನುವ ಸುದ್ದಿ ಪಸರ್‌ ಆಗುತ್ತಿದ್ದಂತೆ ದರ್ಶನ್‌ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿನ ಕೆಂಗೇರಿಯಲ್ಲಿರುವ … Read more

Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ನಟಿ ಹೇಮಾ ಚೌಧರಿ, ಪವಾಡ ಭಂಜಕ ಖ್ಯಾತಿಯ ಹುಲಿಕಲ್ ನಟರಾಜ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಶಿಲ್ಪಿ ಅರುಣ್ ಯೋಗಿರಾಜ್, ಪ್ರೊ. ಟಿ.ವಿ. ರಾಮಚಂದ್ರ ಅವರಿಗೆ ಪ್ರಶಸ್ತಿ                     ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯ ಹಿನ್ನಲೆಯಲ್ಲಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ … Read more