advertise here

Search

“ಮನೆ” ನಿರ್ಮಾಣಕ್ಕೆ ಅಲೆಯುವಂಗಿಲ್ಲ..ಲಂಚಕೊಡುವಂಗಿಲ್ಲ..ಅಪ್ಲೈ ಮಾಡಿದ 3-4ದಿನಗಳಲ್ಲೇ “ಮನೆಬಾಗಿಲಿಗೆ ಪ್ಲ್ಯಾನ್ (ನಕ್ಷೆ)” ಭಾಗ್ಯ..


50*80 ವಿಸ್ತೀರ್ಣದವರೆಗಿನ  ಸ್ವತ್ತುದಾರರಿಗೆ ಮನೆ ನಿರ್ಮಿಸಲು ಸರ್ಕಾರದ ಬೊಂಬಾಟ್ “ಪ್ಲ್ಯಾನ್”.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)
                                                                                                             (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಎಲ್ಲಾ ರೀತಿಯ ಸಮರ್ಪಕ ದಾಖಲೆ ಇದ್ಯಾಗ್ಯೂ ಮನೆ ಕಟ್ಟಿಸೊಕ್ಕೆ  ಪ್ಲ್ಯಾನ್ ಪಡೆಯಲು ಬಿಬಿಎಂಪಿ ಕಚೇರಿಗೆ ಅಲೆದಲೆದು ಸುಸ್ತಾಗಿದಿರಾ..? ಪ್ಲ್ಯಾನ್  ನೀಡಲು ಬಿಬಿಎಂಪಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರಾ..? ಇಲ್ಲದ ಸಬೂಬು  ನೀಡಿ ಚಪ್ಪಲಿ ಸವೆಸುವಂತೆ ಮಾಡ್ತಿದಾರ…? ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾರಾ..?..ಇನ್ಮುಂದೆ ಹಾಗೆಲ್ಲಾ ಆಗೊಕ್ಕೆ ಸಾಧ್ಯನೇ ಇಲ್ಲ ಬಿಡಿ…ಏಕೆಂದರೆ ಕುಳಿತಲ್ಲೇ  ನಿಮ್ಮ ಕೈ ಬೆರಳುಗಳಲ್ಲಿ ಪ್ಲ್ಯಾನ್ ಪಡೆಯುವ ದಿನಗಳು ಹತ್ತಿರವಿಲ್ಲ..ಇಂತಹದೊಂದು ಅತ್ಯದ್ಭುತ ಪರಿಕಲ್ಪನೆ ಜಾರಿಗೊಳಿಸ್ಲಿಕ್ಕೆ ಬಿಬಿಎಂಪಿ ಮುಂದಾಗಿದೆ.ಅಂದ್ಹಾಗೆ ಈ ಅತ್ಯದ್ಭುತ ಕಾನ್ಸೆಪ್ಟೇ “ನಿಮ್ಮ ಮನೆಬಾಗಿಲಿಗೆ ಪ್ಲ್ಯಾನ್(ನಕ್ಷೆ) ಭಾಗ್ಯ”

ರಾಜಧಾನಿ ಬೆಂಗಳೂರಲ್ಲಿ ಇಂಚು ಜಾಗಕ್ಕೆ ಮಾಲೀಕರಾಗೋದೇ ಕಷ್ಟ ಅನ್ನುವಂತ ಮಾತಿದೆ.ಅಂತದ್ದರಲ್ಲಿ ಮನೆ ನಿರ್ಮಿಸುವುದೆಂದರೆ ಅದು ಅಸಾಧ್ಯದ ಮಾತೇ ಸರಿ..ಎಲ್ಲಾ ಇದ್ದು ಮನೆ ನಿರ್ಮಿಸೋಣ ಎಂದರೆ ಬಿಬಿಎಂಪಿ ಅಧಿಕಾರಿಗಳ ಕಾಟ..ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮನೆ ನಿರ್ಮಿಸಬೇಕಾದ ವಾತಾವರಣವಿದೆ..ಒಂದ್ವೇಳೆ ಹಾಗೇನಾದ್ರೂ ಆಗದಿದ್ರೆ ಮನೆ ನಿರ್ಮಿಸಿದವನನ್ನು ನಕ್ಷತ್ರಿಕನಂತೆ ಕಾಡಲಾರಂಭಿಸ್ತಾರೆ ಬಿಬಿಎಂಪಿ ಅಧಿಕಾರಿಗಳು.ಇದೆಲ್ಲಾ ಅಸಹನೀಯ…ಆಕ್ಷೇಪಾರ್ಹ ..ಅಮಾನವೀಯ ಎಂದೆನಿಸಿದ್ರೂ ಸಹಿಸಿಕೊಳ್ಳದೆ ವಿಧಿಯಿಲ್ಲ.

(ಪ್ರಾತಿನಿಧಿಕ ಚಿತ್ರ)
(ಪ್ರಾತಿನಿಧಿಕ ಚಿತ್ರ)

ಇದೆಲ್ಲವನ್ನು ಯಾಕೆ ಹೇಳಲಾಗ್ತಿದೆ ಎನ್ನೋದಕ್ಕೆ ಕಾರಣ ಗೊತ್ತಾಗಿರ್ಬೋದು ಅಂಥ ಭಾವಿಸುತ್ತೇವೆ.ಇವತ್ತು ಮನೆ ನಿರ್ಮಿಸುವುದು ಅಷ್ಟೊಂದು ಕಷ್ಟ ಎನ್ನುವಂತಾಗಿದೆ.ಆದರೆ…ಆದರೆ ಈ ಎಲ್ಲಾ ಸಮಸ್ಯೆಯನ್ನು ಮನಗಂಡಿಯೇ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸೊಕ್ಕೆ ಅತ್ಯಗತ್ಯ-ಅನಿವಾರ್ಯವಾಗಿರುವ ಪ್ಲ್ಯಾನ್ ಪಡೆಯೊಕ್ಕೆ ಎದುರಾಗುತ್ತಿರುವ ಸಂಕಷ್ಟ-ಕ್ಲಿಷ್ಟ ಸಮಸ್ಯೆಗಳಿಗೆ ಇತಿಶ್ರೀ ಹಾಡೊಕ್ಕೆ ಮುಂದಾಗಿದೆ.ಪ್ಲ್ಯಾನ್ ಪಡೆಯೊಕ್ಕೆ ಇದ್ದ ಸವಾಲನ್ನು ಅನಾಯಾಸಗೊಳಿಸಿದೆ.

ಪ್ಲ್ಯಾನ್ ಪಡೆಯೋದು ಇನ್ಮುಂದೆ ಅನಾಯಾಸವಾಗಬೇಕೆನ್ನುವ ನಿಟ್ಟಿನಲ್ಲಿ ಜಾರಿಗೊಳಿಸಲಿಕ್ಕೆ ಮುಂದಾಗಿರುವ ಯೋಜನೆಯೇ “ನಿಮ್ಮ ಮನೆಬಾಗಿಲಿಗೆ ಪ್ಲ್ಯಾನ್(ನಕ್ಷೆ) ಭಾಗ್ಯ”  ಅಂದ್ಹಾಗೆ ಈ ಯೋಜನೆ ಕೇವಲ “ಎ”  ಖಾತಾಗಳಿಗೆ ಮಾತ್ರ ಅನ್ವಯಿಸಲಿರುವ ಯೋಜನೆ. ಯಾವುದೇ ಕಾರಣಕ್ಕೂ ಇದು ಬಿ ಖಾತೆಗಳಿಗೆ ಅನ್ವಯಿಸುವುದಿಲ್ಲ ಎನ್ನುವುದನ್ನು ಸ್ಪಷ್ಟಗೊಳಿಸಲಾಗಿದೆ.80*50 ವಿಸ್ತೀರ್ಣದವರೆಗಿನ ನಿವೇಶಗಳಿಗೆ ನಕ್ಷೆ ಮಂಜೂರಾತಿ ಕೈಬೆರಳುಗಳಲ್ಲೇ ಸಿಗಲಿದೆ.ಅದು ಕೂಡ ಬೆರಳೆಣಿಕೆ ದಿನಗಳಲ್ಲಿ.ಯೋಜನೆಯ ಪ್ರಯೋಜನ ಶೀಘ್ರವೇ ಬೆಂಗಳೂರಿಗರಿಗೆ ಲಭ್ಯವಾಗಲಿದೆ.ಇದಕ್ಕೆ ಪೂರಕವಾಗಿ ರೂಪಿಸಿರುವ ಬ್ಲ್ಯೂಪ್ರಿಂಟ್ ಗೆ ಸಂಬಂಧಿಸಿದ ಒಂದಷ್ಟು ಮಾಹಿತಿಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಏನೆಲ್ಲಾ ದಾಖಲೆ ಅಪ್ ಲೋಡ್ ಮಾಡಬೇಕು ಗೊತ್ತಾ.

-ಖಾತಾ ಎಕ್ಸ್ ಟ್ರ್ಯಾಕ್ಟ್

-ಬೆಟರ್ ಮೆಂಟ್ ಚಾರ್ಜ್ ಪಾವತಿಸಿರುವ ರಸೀದಿ

-ಯಾವುದೇ ಉಲ್ಲಂಘನೆ ಇಲ್ಲದಿರುವುದನ್ನು ದೃಢೀಕರಿಸುವ ದಾಖಲೆ್

-ಉಲ್ಲಂಘನೆ ಇರದಿರುವುದನ್ನು ದೃಢೀಕರಿಸಿದ ಆರ್ಕಿಟೆಕ್ಟ್ ಪತ್ರ

-ಬಿಲ್ಡಿಂಗ್ ಪ್ಲ್ಯಾನ್

-ವಿವಿಧ ಇಲಾಖೆಗಳ ನಿರಪೇಕ್ಷಣಾ ದಾಖಲೆಗಳು

-ಕಂದಾಯ ದಾಖಲೆಗಳು ಹಾಗೂ ಇತರೆ ದಾಖಲೆಗಳು

 ಡಿಕೆಶಿವಕುಮಾರ್ ಮಹತ್ವಾಕಾಂಕ್ಷೆಯ ಯೋಜನೆ: 80*50 ವಿಸ್ತೀರ್ಣದವರೆಗಿನ  ಎ ಖಾತೆಯ ನಿವೇಶನಗಳಲ್ಲಿ ಮನೆ ನಿರ್ಮಿಸುವುದು ಇನ್ಮುಂದೆ ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಹೊಸದೊಂದು ಪ್ಲ್ಯಾನ್ ಮಾಡಲಾಗಿದೆ.ಮನೆ ನಿರ್ಮಾಣಕ್ಕೆ ಅತ್ಯವಶ್ಯಕವಾಗಿರುವ “ನಕ್ಷೆ ಮಂಜೂರಾತಿ”ಗೆ ಬಿಬಿಎಂಪಿ ಕಚೇರಿಗೆ ಅರ್ಜಿ ಹಾಕಿ ಅಲೆದಾಡುವುದು, ಅದಕ್ಕಾಗಿ ಸಮಯ ವ್ಯಯಮಾಡುವುದು,ಅಧಿಕಾರಿಗಳ ಸಬೂಬು-ನೆವದ ಮಾತುಗಳನ್ನು ಕೇಳಿಕೊಂಡು ಬರಿಗೈಯಲ್ಲಿ ವಾಪಸ್ಸಾಗುವುದು..ಸತಾಯಿಸುವ ಅಧಿಕಾರಿಗಳ ಮನವೊಲಿಕೆಗೆ ಕೈ ಬೆಚ್ಚಗೆ ಮಾಡುವಂಥ ಯಾವುದೇ  ಪ್ರಮೇಯಗಳು  ಪುನರಾವರ್ತನೆಯಾಗಬಾರದೆನ್ನುವ ಉದ್ದೇಶದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಅಪ್ಲೈ ಮಾಡಿದ ಮೂರ್ನಾಲ್ಕು ದಿನಗಳಲ್ಲೆ ಪ್ಲ್ಯಾನ್ ಕೈ ಸೇರಬೇಕೆನ್ನುವ ಉದ್ದೇಶದಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ್ ಮಾಡಿರುವ ಬೊಂಬಾಟ್ ಪ್ಲ್ಯಾನ್ ಇದು ಎನ್ನಲಾಗ್ತಿದೆ.ಇದಕ್ಕಾಗಿ ನಗರಯೋಜನೆ ಇಲಾಖೆಯ ಆಡಳಿತವನ್ನು ಬಳಸಿಕೊಂಡಿದ್ದು ಯೋಜನೆ ಅನುಷ್ಟಾನಕ್ಕೆ ಎಲ್ಲಾ ರೀತಿಯ ಸಿದ್ದತೆ ಮುಗಿದಿದೆ.ಯೋಜನೆ ಜಾರಿಗೊಳಿಸುವುದೊಂದೇ ಬಾಕಿಯಿದ್ದು ಅದಕ್ಕು ಕೂಡ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

“ಪ್ಲ್ಯಾನ್” ಹೇಗೆ ಅಪ್ರೂವಲ್ ಆಗಲಿದೆ.

ಎಲ್ಲಾ ವಿವರಗಳನ್ನು ಒಳಗೊಂಡ  ದಾಖಲೆಗಳನ್ನು ಪ್ಲ್ಯಾನ್ ಪಡೆಯಲಿಕ್ಕೆಂದೇ ಇರುವ ವೆಬ್ ಆಫ್ ನಲ್ಲಿ ಅಥವಾ ಸಾಫ್ಟ್ ವೇರ್ ನಲ್ಲಿ ಅಪ್ ಲೋಡ್ ಮಾಡಬೇಕು.ಆ ದಾಖಲೆಗಳನ್ನೆಲ್ಲಾ ಟೌನ್ ಪ್ಲ್ಯಾನಿಂಗ್ ವಿಭಾಗದ ಅಧಿಕಾರಿಗಳು ವೆರಿಫಿಕೇಷನ್ ಮಾಡಲಿದ್ದಾರೆ.ಅವೆಲ್ಲವನ್ನು ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಲಾಗುತ್ತದೆ.ಸಾಲದ್ದಕ್ಕೆ ಸೈಟ್ ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಮೇಲೆ 3-4 ದಿನಗಳೊಳಗೆ ಪ್ಲ್ಯಾನ್ ರೆಡಿಯಾಗಿ ಮಾಲೀಕರ ಕೈ ಸೇರುತ್ತದೆ

ಮನೆ ಬಾಗಿಲಿಗೆ ಸರ್ಕಾರ-ಇರಲಿ ನಿಮ್ಮ ಸಹಕಾರವೇ ಮನೆಬಾಗಿಲಿಗೆ ಪ್ಲ್ಯಾನ್(ನಕ್ಷೆ) ಭಾಗ್ಯ ಯೋಜನೆ: ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿ ವಿಧಾನಸಭಾ ಕ್ಷೇತ್ರವಾರು ಆರಂಭಿಸಿದ ಯೋಜನೆ ಮನೆ ಬಾಗಿಲಿಗೆ ಸರ್ಕಾರ-ಇರಲಿ ನಿಮ್ಮ ಸಹಕಾರಕ್ಕೆ ಅಪಾರ ಜನಮನ್ನಣೆ ದೊರೆತಿದೆ.ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡು ಆನ್ ದಿ ಸ್ಪಾಟ್ ನಲ್ಲೇ ಪರಿಹಾರ ಪಡೆಯುತ್ತಿರುವ ಯೋಜನೆಯ ರೂವಾರಿ ಡಿಕೆಶಿವಕುಮಾರ್. ತೀರಾ  ಬ್ಯುಸಿಯಾಗಿರುವ  ಮುಖ್ಯಮಂತ್ರಿಯವರಿಂದ ಆಗೊಲ್ಲ ಎನ್ನುವ ಕಾರಣಕ್ಕೆ ತಾವೇ ಹೊಣೆ ಹೊತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಡಿಕೆಶಿವಕುಮಾರ್ ಮಾಡುತ್ತಿದ್ದಾರೆ.

ಮನೆ ಬಾಗಿಲಿಗೆ ಪ್ಲ್ಯಾನ್(ನಕ್ಷೆ) ಎನ್ನುವ ಕಾನ್ಸೆಪ್ಟ್ ಪ್ರಾರಂಭಿಸಲಿಕ್ಕೆ ಕಾರಣವೂ ಇದೇ ಮನೆ ಬಾಗಿಲಿಗೆ ಸರ್ಕಾರ-ಇರಲಿ ನಿಮ್ಮ ಸಹಕಾರ ಕಾರ್ಯಕ್ರಮ ಎನ್ನುವ ಮಾತುಗಳಿವೆ.ಮೇಲ್ಕಂಡ ಕಾರ್ಯಕ್ರಮದಲ್ಲಿ ಬಹುತೇಕ ಜನರು ಹೇಳಿಕೊಂಡ ಸಮಸ್ಯೆಯೇ ಪ್ಲ್ಯಾನ್ ಗೆ ಸಂಬಂಧಿಸಿದ್ದು.ಡಿಕೆಶಿವಕುಮಾರ್ ಮುಂದೆ ಬಹುತೇಕ ನಾಗರಿಕರು ಪ್ಲ್ಯಾನ್ ಪಡೆಯೊಕ್ಕೆ ಅನುಭವಿಸುತ್ತಿರುವ ಪಡಿಪಾಟಿಲುಗಳ ಬಗ್ಗೆ ಅಳಲು ತೋಡಿಕೊಂಡಿದ್ದರು.ಅಲೆದಾಟಕ್ಕೆ-ಲಂಚದಾಟಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿಕೊಂಡಿದ್ರು.ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಕೆಶಿವಕುಮಾರ್ ಅವರು ಗಂಭೀರವಾಗಿ ಚಿಂತನೆ ನಡೆಸಿ,ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅನುಷ್ಟಾನಗೊಳ್ಳಲೇಬೇಕೆನ್ನುವ ಹಠಕ್ಕೆ ಬಿದ್ದು ಜಾರಿಗೆ ತರುತ್ತಿರುವ ಯೋಜನೆಯೇ ಮನೆಬಾಗಿಲಿಗೆ ಖಾತೆ ಎನ್ನುವುದು ಮೂಲ ಹುಡುಕುತ್ತಾ ಹೋದಾಗ ಗೋಚರವಾಗುವ ಸತ್ಯ.

ಅಂದ್ಹಾಗೆ ಯೋಜನೆ ಅನುಷ್ಟಾನಕ್ಕೆ ಎಲ್ಲಾ ರೀತಿಯ ಸಿದ್ದತೆ ಪೂರ್ಣಗೊಂಡಿದೆ ಎನ್ನಲಾಗಿದೆ.ಇದಕ್ಕೆಂದೇ ಪ್ರತ್ಯೇಕ ಸಾಫ್ಟ್ ವೇರ್ ಅಥವಾ ಆ್ಯಪ್ ನ್ನು ಸಿದ್ದಮಾಡಲಾಗಿದೆ ಎನ್ನಲಾಗುತ್ತಿದೆ.ಈ ಆಪ್ ನಲ್ಲಿ ಒಂದಷ್ಟು ನಿರ್ದಿಷ್ಟ ದಾಖಲೆಗಳು ಅಂದರೆ ಖಾತಾ,ಬೆಟರ್ ಮೆಂಟ್ ಚಾರ್ಜ್ ಪಾವತಿಸಿರುವ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಿದರೆ ಅಧಿಕಾರಿಗಳು ಅದನ್ನು ಪರಿಶೀಲಿಸಿ ಸ್ಪಾಟ್ ವಿಸಿಟ್ ಮಾಡಿದ ಮೇಲೆ ಎಲ್ಲಾ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಂತೆ ತಡಮಾಡದೆ ಪ್ಲ್ಯಾನ್ ನೀಡುವ ಕೆಲಸ ಮಾಡಲಿದ್ದಾರೆ.ಅದೇನೇ ಆಗಲಿ“ನಿಮ್ಮ ಮನೆಬಾಗಿಲಿಗೆ ಪ್ಲ್ಯಾನ್(ನಕ್ಷೆ) ಭಾಗ್ಯ ”ಪರಿಕಲ್ಪನೆ “ಎ” ಖಾತಾದಾರರು ಮನೆ ನಿರ್ಮಿಸೊಕ್ಕೆ ಎದುರಿಸುತ್ತಿದ್ದ ಎಲ್ಲಾ ರೀತಿಯ ಸವಾಲುಗಳಿಗೆ ಬೆರಳ ತುದಿಯಲ್ಲಿ ಪರಿಹಾರ ನೀಡಲಿದೆ ಎನ್ನುವುದಂತೂ ನಿಸ್ಸಂದೇಹ.


Scroll to Top