GREAT INSULT TO VATAAL NAGARAJAJ…:”VATAAL MANIA” ENDS..?!.. ಇದು ವಾಟಾಳ್ ಹೋರಾಟಗಳ “ಯುಗಾಂತ್ಯ”ದ ಮುನ್ಸೂಚನೆನಾ..?! ಜೀವಮಾನದಲ್ಲೇ “ಮಹಾನ್ ಮುಖಭಂಗ..ಮುಜುಗರ” !!
ಅದೊಂದು ಜಮಾನ ಇತ್ತು.ನಿಜ..ವಾಟಾಳ್ ಗುಡುಗಿದರೆ ವಿಧಾನಸೌಧ ನಡುಗುತ್ತೆ.ಅವರು ಬಂದ್ ಕರೆ ಕೊಟ್ಟರೆ ಕರ್ನಾಟಕವೇ ಸ್ಥಬ್ಧಗೊಳ್ಳುತ್ತೆನ್ನುವ ಸನ್ನಿವೇಶವಿತ್ತು.ಅದಕ್ಕೆ ಇತಿಹಾಸವೇ ಸಾಕ್ಷಿಯಿದೆ.ಆದರೆ ಹೋರಾಟಗಳು ಗಂಭೀರತೆ ಕಳೆದುಕೊಂಡವೋ..ವಿದೂಷಕನಂತೆ ಪ್ರತಿಭಟನೆಗಳನ್ನು ಮಾಡೊಕ್ಕೆ ಶುರುಮಾಡಿಕೊಂಡ್ರೋ ಆಗಲೇ ಅವರ ವ್ಯಕ್ತಿತ್ವವೂ ಘನತೆ ಕಳೆದುಕೊಳ್ತು. ಮಾತು ಬೆಲೆ ಕಳೆದುಕೊಳ್ತು.ಹೋರಾಟಗಳೂ ಅರ್ಥಹೀನ ಎನ್ನಲಾರಂಭಿಸಿದ್ವು