ಬೆಂಗಳೂರು:ಸುದ್ದಿ ಬಿತ್ತರಿಸುವ ಆತುರಕ್ಕೆ ಸಿಲುಕಿ ರಿಪಬ್ಲಿಕ್ ಕನ್ನಡ ವಾಹಿನಿ ಯಡವಟ್ಟು ಮಾಡಿಕೊಂಡಿದೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಬಿತ್ತರಿಸಿತೆನ್ನಲಾದ ಸುಳ್ಳು ವರದಿ ಸಂಬಂಧ ಸಲ್ಲಿಸಲಾದ ದೂರನ್ನು ಆಧರಿಸಿ ಎಸ್ ಜೆ ಪಾರ್ಕ್ ಪೊಲೀಸರು ರಿಪಬ್ಲಿಕ್ ಸುದ್ದಿಸಂಸ್ಥೆ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಕನ್ನಡದ ಸುದ್ದಿ ಸಂಪಾದಕ ನಿರಂಜನ್ ವಿರುದ್ಧ FIR  ದಾಖಲಿಸಲಾಗಿದೆ.ಎಫ್ ಐ ಆರ್ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಎಕ್ಸ್ ಕ್ಲ್ಯೂಸಿವ್ ಆಗಿ ಲಭ್ಯವಾಗಿದೆ.

ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ  ರವೀಂದ್ರ ಎಂ.ವಿ ಮತ್ತು  ಬಾಬಾ ಸಾಹೇಬ ಪಾಟೀಲ್ ಅವರು  ಎಸ್ ಜೆ ಪಾರ್ಕ್ ಠಾಣೆಗೆ 27-03-2024 ರಂದು ಸಲ್ಲಿಸಿರುವ ದೂರಿನಲ್ಲಿ 27-03-2024 ರಂದು ಸಂಜೆ 7>15 ಕ್ಕೆ ರಿಪಬ್ಲಿಕ್ ಸುದ್ದಿ ವಾಹಿನಿ ಸುಳ್ಳು ಸುದ್ದಿ ಮಾಡಿದೆ ಎಂದು ಆಪಾದಿಸಿದ್ದರು.ರಿಪಬ್ಲಿಕ್ ಕನ್ನಡ ಸುದ್ದಿವಾಹಿನಿಯಲ್ಲಿ  ಮೇಲ್ಕಾಣಿಸಿದ ದಿನದಂದು ಸಂಜೆ 7:15ರ ಸಮಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಂಚರಿಸುವ ಸಂಬಂಧ ವಾಹನಗಳ ಸಂಚಾರ ತಡೆಹಿಡಿಯಲಾಗಿತ್ತು.ಅಂಬುಲೆನ್ಸ್ ನ್ನು ಕೂಡ ತಡೆಹಿಡಿಯಲಾಗಿತ್ತು.ಅಂಬುಲೆನ್ಸ್ ಗೆ ದಾರಿ ಮಾಡಿಕೊಡದೆ ಅದಕ್ಕೆ ತಡೆ ಒಡ್ಡಲಾಗಿದೆ ಎಂದು ಸುದ್ದಿ ಪ್ರಸಾರ ಮಾಡಲಾಗಿತ್ತು.

ಇಂತಹದೊಂದು ಗಂಭೀರ ವಿಷಯವನ್ನು ಬಿತ್ತರಿಸುವ ವೇಳೆ ಸುದ್ದಿಯ ಸತ್ಯಾಸತ್ಯತೆ ಅರಿತುಕೊಳ್ಳಬೇಕಿದ್ದುದು ಜವಾಬ್ದಾರಿಯುತ ಮಾದ್ಯಮವೊಂದರ ಕೆಲಸ.ಆದರೆ ವೀಡಿಯೋದ ಪೂರ್ವಾಪರ ಅವಲೋಕಿಸದೆ ಮುಖ್ಯಮಂತ್ರಿಗಳನ್ನು ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸುವ ಕೆಲಸ ಮಾಡಿದ್ದಾರೆ.ಅದ್ರೆ ವಾಸ್ತವದಲ್ಲಿ ಘಟನೆ ನಡೆಯಿತೆನ್ನಲಾದ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಇರಲೇ ಇಲ್ಲ.ಅವರು ಆ ಸನ್ನಿವೇಶದಲ್ಲಿ ಮೈಸೂರಿನಲ್ಲಿದ್ದರು.ಇಂತಹದೊಂದು ಸುದ್ದಿ ಪ್ರಸಾರ ಮಾಡುವ ಮೊದಲು ಅದನ್ನು ಕ್ರಾಸ್ ಚೆಕ್ ಮಾಡದೇ ಸುದ್ದಿ ಬಿತ್ತರಿಸುವ ಮೂಲಕ ಸಿಎಂ ಅವರ ತೇಜೋವಧೆ ಮಾಡಲಾಗಿದೆ.ರಿಪಬ್ಲಿಕ್ ಕನ್ನಡದವರ ಮನಸ್ಥಿತಿ ಹಿಂದೆ ಮುಖ್ಯಮಂತ್ರಿಗಳ ಮಾನಹರಣದ ದುರುದ್ದೇಶ ಅಡಗಿರುವುದು ಸ್ಪಷ್ಟವಾದಂತಿದೆ ಎಂದು ದೂರಿನಲ್ಲಿ ಆಪಾದಿಸಿದ್ದರು.

ಮುಖ್ಯಮಂತ್ರಿಗಳ ವಿಚಾರದಲ್ಲಿ ಸತ್ಯಾಸತ್ಯತೆ ಅರಿಯದೆ ಸುಳ್ಳು ಸುದ್ದಿ ಬಿತ್ತರಿಸುವ ಮೂಲಕ ಮುಖ್ಯಮಂತ್ರಿಗಳ ತೇಜೋವಧೆಗೆ ಪ್ರಯತ್ನ ನಡೆದಿದೆ.ರಿಪಬ್ಲಿಕಲ್ ಕನ್ನಡದಂಥ ಜವಾಬ್ದಾರಿಯುತ ಸುದ್ದಿವಾಹಿನಿಯಿಂದ ಇಂತದ್ದೊಂದು ಕೃತ್ಯ ನಡೆದಿರುವುದು ಸರಿಯಲ್ಲ.ಹಾಗಾಗಿ ಸುದ್ದಿವಾಹಿನಿ ಮುಖ್ಯಸ್ಥರು ಹಾಗೂ ಸಂಪಾದಕರ ವಿರುದ್ಧ ಕಲಂ ೫೦೫(೧)ರ ಅನ್ವಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರು.ದೂರನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಜೆ ಪಾರ್ಕ್ ಪೊಲೀಸರು ಸುದ್ದಿಸಂಸ್ಥೆಯ ಮಾಲೀಕ ಅರ್ನಾಬ್ ಗೋಸ್ವಾಮಿ ಮತ್ತು ಸ್ಥಳೀಯ ಸುದ್ದಿಸಂಪಾದಕ ನಿರಂಜನ್ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

27-03-2024 ರಂದು ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ  ರವೀಂದ್ರ ಎಂ.ವಿ ಮತ್ತು  ಬಾಬಾ ಸಾಹೇಬ ಪಾಟೀಲ್ ಅವರು ಕೊಟ್ಟ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿರುವುದು ಮಾದ್ಯಮ ಸ್ವಾತಂತ್ರ್ಯದ ನೈತಿಕತೆಯನ್ನೇ ಪ್ರಶ್ನಿಸಿದೆ.ಈ ಬೆಳವಣಿಗೆ ಇತರೆ ಮಾದ್ಯಮಗಳಿಗೊಂದು ಎಚ್ಚರಿಕೆ ಕರೆ ಗಂಟೆಯಾಗಿದೆ.ಸುದ್ದಿ ಪ್ರಸಾರದ ಆತುರಕ್ಕೆ ಬಿದ್ದು ವಾಸ್ತವ ಅರ್ಥ ಮಾಡಿಕೊಳ್ಳದೆ ಏಕಾಏಕಿ ಸುದ್ದಿ ಪ್ರಸಾರ ಮಾಡಿದ್ರೆ ಏನಾಗುತ್ತೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗುತ್ತೆ.

ಸುದ್ದಿ ಸಿಕ್ಕಾಕ್ಷಣ ಅದನ್ನು ಎಕ್ಸ್ ಕ್ಲ್ಯೂಸಿವ್ ಆಗಿ ಪ್ರಸಾರ ಮಾಡಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳಬೇಕು ಎನ್ನುವ ಧಾವಂತದಲ್ಲಿ ನಾವೇ ಮೊದಲು..ನಮ್ಮಲ್ಲೇ ಮೊದಲು;; ಎಂದು ಬೊಂಬಡಾ ಬಜಾಯಿಸಿಕೊಳ್ಳುವ ಮಾದ್ಯಮಗಳಿಗೂ ರಿಪಬ್ಲಿಕ್ ಕನ್ನಡದ ಮೇಲೆ ಆಗಿರುವ FIR  ಒಂದು ಪಾಠವಾಗಬೇಕಿದೆ.

Spread the love

Leave a Reply

Your email address will not be published. Required fields are marked *