- ಮೇ ೪-೫ ಕ್ಕೆ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಸೆಲ್ಪ್ ಕಿಡ್ನ್ಯಾಪ್ ಪ್ಲ್ಯಾನ್..!?
- ೬ಕ್ಕೆ ಪ್ರತ್ಯಕ್ಷ-೭ಕ್ಕೆ ಜೆಡಿಎಸ್ ಸಮಾವೇಶದಲ್ಲಿ ಕಿಡ್ನ್ಯಾಪ್ ಚರ್ಚೆ-ವರಿಷ್ಟರಿಂದ ರಾಜಕೀಯ ಎದುರಾಳಿಗಳ ವಿರುದ್ದ ವಾಗ್ದಾಳಿ..?!
- ೧೦ ಲಕ್ಷಕ್ಕೆ ಕಿಡ್ನ್ಯಾಪ್ ಡೀಲ್ ಫೈನಲ್..೨-೫ ಲಕ್ಷ ಅಡ್ವಾನ್ಸ್..?!
- ಸೆಲ್ಪ್ ಕಿಡ್ನ್ಯಾಪ್ ಪ್ಲ್ಯಾನ್ ಮೂಲಕ ಸಹಾನುಭೂತಿ ಗಳಿಕೆ ಸ್ಕೆಚ್-?!
- ಕಿಡ್ನ್ಯಾಪ್ ಕಳಂಕವನ್ನು ರಾಜಕೀಯ ವಿರೋಧಿಗಳಿಗೆ ಮೆತ್ತಲು ಪ್ಲ್ಯಾನ್..!!
- ಯಲಹಂಕ ತುಂಬೆಲ್ಲಾ ಸ್ಪೋಟಕ ಮಾಹಿತಿಗಳನ್ನೊಳಗೊಂಡ ವೀಡಿಯೋ ವೈರಲ್..?!
ಬೆಂಗಳೂರು:ರಾಜ್ಯರಾಜಕಾರಣದ ಮಟ್ಟಿಗೆ ಇದೊಂದು ಸ್ಪೋಟಕ ಸುದ್ದಿಯೇ ಸರಿ..ಬಹುಷಃ ಇತ್ತೀಚಿನ ದಿನಗಳಲ್ಲಿ ಚುನಾವಣಾ ರಾಜಕಾರಣದಲ್ಲಿ ಇಂತದ್ದೊಂದು ಘಟನೆ ನಡೆದಿರಲು ಸಾಧ್ಯವೇ ಇಲ್ಲವೇನೋ..? ರಾಜಕೀಯದಲ್ಲಿ ಹೀಗೆಲ್ಲಾ ನಡೆಯಬಹುದಾ..? ಇಂಥಾ ಹೀನ-ನೀಚ ಮಟ್ಟಕ್ಕೆ ವ್ಯಕ್ತಿ ತನ್ನನ್ನು ತಗ್ಗಿಸಿಕೊಳ್ಳುತ್ತಾನಾ ಎಂದೆನಿಸದೆ ಇರೊಲ್ಲ..ಆ ಇಂಟರೆಸ್ಟಿಂಗ್ ಸ್ಟೋರಿ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಕಂಪ್ಲೀಟ್ ಡೀಟೈಲ್ಸ್ ಓದಲೇಬೇಕು..
ಒಂದ್ವೇಳೆ ಇದು ನಿಜವೇ ಆಗಿದ್ದಲ್ಲಿ ಯಲಹಂಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿರುದ್ದ ಬಹುತೇಕ ಕ್ರಿಮಿನಲ್ ಪ್ರಕರಣ ದಾಖಲಾ ಗೋದು ಖಚಿತ ಎನ್ಸುತ್ತೆ.ಏಕಂದ್ರೆ ಅವರು ನಡೆಸಿದ್ದಾರೆನ್ನಲಾದ ಕುತಂತ್ರ,ರೂಪಿಸಿದ್ದಾರೆನ್ನಲಾದ ಷಡ್ಯಂತ್ರ ಎಂಥವರನ್ನೂ ಕ್ಷಣ ಬೆಚ್ಚಿಬೀಳಿಸುತ್ತೆ.ಕಿಡ್ನ್ಯಾಪ್ ಮಾಡೋದು ನೋಡಿದ್ದೇವೆ..ಆದರೆ ಈ ಪ್ರಕರಣದಲ್ಲಿ ಅಭ್ಯರ್ಥಿಯೇ ಕಿಡ್ನ್ಯಾಪ್ ಮಾಡಿಸಿಕೊಳ್ಳುವಂತ ಪ್ಲ್ಯಾನ್ ನ್ನು ರೂಪಿಸ್ತಾನೆ.ಅದರ ಜವಾಬ್ದಾರಿಯನ್ನು ಅದೇ ಕಸುಬುದಾರಿಕೆಯಲ್ಲಿರುವವರಿಗೆ ಕೊಡ್ತಾನೆ..ಎಂದ್ರೆ ನಂಬಲಿಕ್ಕಾಗುತ್ತಾ..? ಅಷ್ಟಕ್ಕೂ ತಮ್ಮನ್ನು ತಾವೇ ಕಿಡ್ನ್ಯಾಪ್ ಮಾಡಿಸಿಕೊಳ್ಳು ವಂಥ ಕೆಟ್ಟ ಖಯಾಲಿ ಅವರಿಗೇಕೆ ಬಂದಿರ್ಬೋದು ಎನ್ನೋದನ್ನು ನೋಡಿದ್ರೆ ತಿಳಿದುಬರೋದು ಚುನಾವಣಾ ಭಯ..
ತನ್ನನ್ನು ಕಿಡ್ನ್ಯಾಪ್ ಮಾಡಿಸಿದರೆನ್ನುವ ಕಥೆ ಕಟ್ಟಿ ಅದನ್ನು ರಾಜಕೀಯ ವಿರೋಧಿಗಳ ಮೇಲೆ ಹಾಕೋ ಪ್ಲ್ಯಾನ್ ರೂಪಿಸಲಾಗ್ತದೆ ಎಂದ್ರೆ, ಮೇಲ್ನೋಟಕ್ಕೆ ಅದರ ಹಿಂದೆ, ಏನಾದ್ರು ರಾಜಕೀಯ ಲಾಭ ಪಡೆಯಬಹುದಾ..? ಸಹಾನುಭೂತಿ ಪಡೆದುಕೊಳ್ಳಬಹುದಾ..? ಅದು ಮತಗಳಾಗಿ ಕನ್ವರ್ಟ್ ಆಗಿ ಗೆದ್ದುಬಿಡಬಹುದೆನ್ನುವ ದುರಾಲೋಚನೆ ಇರುವಂತೆ ಭಾಸವಾಗುತ್ತದೆ. ಅಂದ್ಹಾಗೆ ಈ ಎಕ್ಸ್ ಕ್ಲ್ಯೂಸಿವ್ ಆದ ವಿವರಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿವೆ.ಅಂದ್ಹಾಗೆ ಇದು ಈ ಬಾರಿಯ ಚುನಾವಣೆಯಲ್ಲಿ ಬಯಲಾಗುತ್ತಿರುವ ಅತ್ಯಂತ ಸ್ಪೋಟಕ ನ್ಯೂಸ್ ಇರ್ಬೇಕೇನೋ ಅನ್ಸುತ್ತೆ.
17 ನಿಮಿಷಗಳ ಆ ಕ್ಲಿಪ್ಪಿಂಗ್ ನಲ್ಲಿ ಮುನೇಗೌಡರನ್ನು ಕಿಡ್ನ್ಯಾಪ್ ಮಾಡಿ ನಂತ ಕರೆತರುವ ಬಗ್ಗೆಯೇ ಚರ್ಚೆಗಳಿ ದ್ದವೆನಿಸ್ತು.ಮೇ.4ಕ್ಕೆ ಅವರನ್ನು ಬೆಂಗಳೂರಿನಿಂದ 4-6 ಜನರ ತಂಡ ಕಾರಿನಲ್ಲಿ ಕಿಡ್ನ್ಯಾಪ್ ಟೈಪ್ ನಾಟಕ ರೂಪಿಸಿ, ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ,ಅಲ್ಲಿಂದ ತಮಿಳ್ನಾಡಿನ ಹೊಸೂರಿಗೆ ತಲುಪಿ ಅಲ್ಲಿರುವ ಡೆಂಕನಕೋಟೆಯಲ್ಲಿ ಅವರನ್ನು ಮೇ5 ರವರೆಗೆ ಇರಿಸಿ ಪುನಃ 6ಕ್ಕೆ ಕರೆತಂದು ಬಿಡುವ ಗೇಮ್ ಪ್ಲ್ಯಾನ್ ಮಾಡುವ ಸಂಗತಿಗಳಿದ್ವು.
ಕಿಡ್ನ್ಯಾಪ್ ಆಗಿದ್ದಾರೆನ್ನುವ ಸುದ್ದಿಯನ್ನು ಹೇಗೋ ಪಸರ್ ಮಾಡಿ,ಅದರಿಂದ ಯಲಹಂಕದ ಶಾಂತಿ ಸುವ್ಯವಸ್ಥೆಗೆ ಹದಗೆಡಿಸಿ,ದೊಂಬಿ ಎಬ್ಬಿಸಿ,ಯಲಹಂಕ ಬಂದ್ ಗೂ ಕರೆ ನೀಡುವ ಬಗ್ಗೆ ಮಾತನಾಡುವ ದೃಶ್ಯಗಳಿವೆ.ಕಿಡ್ನ್ಯಾಪ್ ನಾಟಕದ ಮೂಲಕ ಇಡೀ ಯಲಹಂಕದಲ್ಲಿ ಮಾದ್ಯಮಗಳನ್ನು ಬಳಸಿಕೊಂಡು ಅದಕ್ಕೊಂದು ಬೃಹತ್ ಪ್ರಚಾರ ನೀಡಿಸಿ,ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಬಗ್ಗೆ ಮಾತನಾಡುವ ಸನ್ನಿವೇಶಗಳಿವೆ.
ಮೇ.7ರಂದು ಯಲಹಂಕದಲ್ಲಿ ಜೆಡಿಎಸ್ ಸಮಾವೇಶವಿದೆ.ಆ ಸಮಾವೇಶದಲ್ಲಿ ಮುನೇಗೌಡರನ್ನು ನಿಲ್ಲಿಸಿ ಅವರ ಕಿಡ್ನ್ಯಾಪ್ ವಿಚಾರವನ್ನೇ ಹೈಲೈಟ್ ಮಾಡುವ ಪ್ರಸ್ತಾಪದ ದೃಶ್ಯಗಳಿವೆ.ವರಿಷ್ಟರು ಆ ಸಮಾವೇಶದಲ್ಲಿ ತಮ್ಮ ಅಭ್ಯರ್ಥಿಯನ್ನು ಕಿಡ್ನ್ಯಾಪ್ ಮಾಡಿ ಇಡಲಾಗಿತ್ತು. ಎಲೆಕ್ಷನ್ ನಲ್ಲಿ ಪಾಲ್ಗೊಳ್ಳದಂ ತೆ ಅವರನ್ನು ಎತ್ತಾಕಿಕೊಂಡು ಹೋಗಲಾಗಿತ್ತು.ಎಲೆಕ್ಷನ್ ಅಖಾಡದಲ್ಲಿದ್ದರೂ ಸಕ್ರೀಯವಾಗಿ ಇರೊಲ್ಲ ಎನ್ನುವ ಷರತ್ತಿಗೆ ಒಪ್ಪಿದ ಮೇಲೆಯೇ ಅವರನ್ನು ಕರೆತಂದು ಬಿಡಲಾಗಿದೆ.ಇದರಲ್ಲಿ ವಿರೋಧಿಗಳ ಕೈವಾಡ ಇದೆ ಎಂದು ಘಟನೆಯನ್ನು ರಾಜಕೀಯಗೊಳಿಸುವ ಖತರ್ನಾಕ್ ಪ್ಲ್ಯಾನ್ ಬಗ್ಗೆ ಪ್ರಸ್ತಾಪವಿದೆ.
ದೃಶ್ಯಗಳಲ್ಲಿರುವಂತೆ ಈ ಕಿಡ್ನ್ಯಾಪ್ ಪ್ಲ್ಯಾನ್ ನ ಒಟ್ಟಾರೆ ಡೀಲ್, ಕಾರು ಸೇರಿದಂತೆ 10 ಲಕ್ಷ….2-5 ಲಕ್ಷ ಅಡ್ವಾನ್ಸ್ ಕೊಡಬೇಕು. ಪ್ಲ್ಯಾನ್ ನಂತೆ ಮೇ.4ಕ್ಕೆ ಕಿಡ್ನ್ಯಾಪ್ ಮಾಡಿಕೊಂಡು ಹೋಗಲಾಗುತ್ತೆ.ಅದರಿಂದ ಸಂಚಲನ ಸೃಷ್ಟಿಸಿ ಅದರ ಹಿಂದೆ ರಾಜಕೀಯ ವಿರೋಧಿಗಳ ಕೈವಾಡ ಇರಬಹುದೆನ್ನುವ ಗುಲ್ಲನ್ನು ಹಬ್ಬಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಅದೆಲ್ಲಾ ಸರಿ, ಅಷ್ಟಕ್ಕೂ ಮುನೇಗೌಡರನ್ನು ಏಕೆ ಕಿಡ್ನ್ಯಾಪ್ ಮಾಡಿಸಲಾಗುತ್ತಿದೆ ಎನ್ನುವ ಪ್ರಶ್ನೆಗೆ ಅದೇ ವೀಡಿಯೋದಲ್ಲಿ ಉತ್ತರ ಸಿಗುತ್ತೆ.ಮುನೇಗೌಡರು ಜೆಡಿಎಸ್ ನಿಂದ ಕಣಕ್ಕಿಳಿದಿದ್ದರೂ ಅವರಿಗೆ ಸೋಲಿನ ಭೀತಿ ಎದುರಾಗಿದೆ ಎನ್ನುವ ಮಾತುಗಳಿವೆ.ಅದು ಮುನೇಗೌಡರ ಗಮನಕ್ಕೂ ಬಂದಿದೆಯಂತೆ.ಹಾಗಾಗಿ ಬೇರೆ ಯಾವುದಾದ್ರೂ ಮಾರ್ಗಗಳಲ್ಲಿ ಚುನಾವಣೆ ಮಾಡೊಕ್ಕೆ ಸಾಧ್ಯನಾ ಎಂದು ಆಲೋಚಿಸಿದಾಗ ಅವರು ಸೇರಿದಂತೆ ಅವರ ಬೆಂಬಲಿಗರೆ ನ್ನಲಾದವರಿಗೆ ಬಂದ ಖತರ್ನಾಕ್ ಐಡ್ಯಾನೇ ಸೆಲ್ಪ್ ಕಿಡ್ನ್ಯಾಪ್ ಇರಬಹುದೇನೋ..?. ಮುನೇಗೌಡರನ್ನು ನಾವೇ ಕಿಡ್ನ್ಯಾಪ್ ಮಾಡಿಸಿ,ಅದನ್ನು ರಾಜಕೀಯ ಎದುರಾಳಿಗಳ ತಲೆಗೆ ಕಟ್ಟಿ,ಅದರಿಂದ ದುರ್ಲಾಭ ಪಡೆಯುವಂತದ್ದು ಈ ಪ್ಲ್ಯಾನ್ ನಲ್ಲಿ ಅಡಗಿದೆಯಾ ಎನ್ನುವುದು ಕೂಡ ವೀಡಿಯೋ ನೋಡಿದಾಗ ಗೊತ್ತಾಗುತ್ತೆ.
ಮುನೇಗೌಡರಂಥವರು ಅಥವಾ ಅವರ ತಲೆಗೆ ಇಂಥಾ ಕಿತ್ತೋದ ಐಡ್ಯಾಗಳನ್ನು ತುಂಬುವಂಥವರಿಂದ ಅಲ್ಟಿಮೇಟಾಗಿ ಡ್ಯಾಮೇಜ್ ಆಗೋದು ಜೆಡಿಎಸ್ ಗೆ.ಕಾಲಿಗೆ ಚಕ್ರ ಹಾಕ್ಕೊಂಡು ಪಕ್ಷವನ್ನು ಅಧಿಕಾರಕ್ಕೆ ತರೊಕ್ಕೆ ಯತ್ನಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರಯತ್ನಕ್ಕೆ ಇಂಥಾ ಐಡ್ಯಾಗಳು ತಣ್ಣೀರೆರಚುತ್ತವೆ.ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಕಾಮನ್..ತಾಕತ್ತಿರೋನು ಗೆಲ್ತಾನೆ.ಹಾಗಂತ ಗೆಲ್ಲೋರ ಪ್ರಯತ್ನವನ್ನು ಹಾಳು ಮಾಡೊಕ್ಕೆ ಇಂಥಾ ಪ್ಲ್ಯಾನ್ ರೂಪಿಸುವುದು ಸರಿನಾ..? ಮುನೇಗೌಡ ಹಾಗೂ ಟೀಮ್ ಮಾಡಿರೋ ಕುತಂತ್ರತನ ಅವರಿಗೇ ಮುಳುವಾಗುವಂಗೆ ಕಾಣ್ತಿದೆ.ಪಕ್ಷದ ಸಿದ್ದಾಂತ ಮತ್ತು ಶಿಸ್ತನ್ನೇ ಹಾಳು ಮಾಡುವಂತ ಬೆಳವಣಿಗೆ ಇದು..ಕುಮಾರಸ್ವಾಮಿ ಇದನ್ನು ಗಂಭೀರವಾಗಿ ಪರಿಗಣಿಸದೆ ಮೌನ ವಹಿಸಿದ್ರೆ ಅವರ ಪಕ್ಷದ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ರವಾನೆಯಾಗಬಹುದಲ್ಲವೇ..?
ಯಲಹಂಕ ತುಂಬೆಲ್ಲಾ ವೈರಲ್ ಆಗಿರುವ ಈ ವೀಡಿಯೋ ಕ್ಲಿಪ್ಪಿಂಗ್ ನ್ನು ಪೊಲೀಸರು ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದು ಸೂಕ್ತ.ಖತರ್ನಾಕ್ ಐಡ್ಯಾ ಮಾಡಿರೋದ್ರ ಹಿಂದಿರುವ ರಹಸ್ಯ ಬಹಿರಂಗಪಡಿಸುವುದು ಸೂಕ್ತ..ರಾಜಕೀಯ ವಿರೋಧಿಗಳ ನಡುವೆ ಜಿದ್ದಾಜಿದ್ದಿ ಬೇರೆಯದೇ ಸ್ವರೂಪ ಪಡೆಯುವ ಆತಂಕವಿದೆಯಾ ಎಂದು ಅವಲೋಕಿಸುವುದು ಒಳ್ಳೇದೆನಿಸುತ್ತೆ… ಇಲ್ಲವಾದಲ್ಲಿ ಖತರ್ನಾಕ್ ಗಳ ಕಿಡ್ನ್ಯಾಪ್ ಐಡ್ಯಾ ವರ್ಕೌಟ್ ಆಗಿಬಿಡಬಹುದು..?ಹೀಗೇನಾದ್ರೂ ನಡುದ್ರೆ ಅದು ಪ್ರಜಾಪ್ರಭುತ್ವಕ್ಕೆ ಆದ ಅವಮಾನವಲ್ಲವೇ..?