ಬೆಂಗಳೂರು: ವಿಶ್ವ ಮಟ್ಟದಲ್ಲಿ ಏನೆಲ್ಲಾ ಖ್ಯಾತಿ-ಹೆಗ್ಗಳಿಕೆ ಹೊಂದಿರುವ ನಮ್ಮ ರಾಜಧಾನಿ ಬೆಂಗಳೂರು ಸಣ್ಣ ಮಳೆಗೂ ಅದುರಿ ಹೋಗುತ್ತೆ.ದೊಡ್ಡ ರಾದ್ದಾಂತಗಳೇ ಸೃಷ್ಟಿಯಾಗುತ್ತದೆ.ಜೀವ ಬಲಿಗಳಂತು ಇತ್ತೀಚೆಗೆ ಕಾಮನ್ ಆಗೋಗಿವೆ.ಇದಕ್ಕೆ ಭಾನುವಾರ ನಡೆದ ದುರಂತವೂ ಹೊರತಾಗಿಲ್ಲ.ಭಾನುವಾರ ಸುರಿದಿದ್ದು ಒಂದರ್ದ ಗಂಟೆ ಮಳೆಯಷ್ಟೆ.ಆದ್ರೆ ಸಂಭವಿಸಿದ ದುರಂತ ಅಘಾತಕಾರಿ.ಇದಕ್ಕೆ ಕಾರಣವಾಗಿದ್ದು ಮೃತ್ಯುಕೂಪದಂತಿರುವ ಅಂಡರ್ ಪಾಸ್ ಗಳು.ಅಂದ್ಹಾಗೆ ರಾಜಧಾನಿಯಲ್ಲಿರುವ ಅಂಡರ್ ಪಾಸ್ ಗಳ ಸ್ಥಿತಿ ಹೇಗಿದೆ.ಘಟನೆ ನಡೆದ ಬೆನ್ನಲ್ಲಿ ಬದಲಾಗಿದೆಯೇ..ಅಥವಾ ಹಾಗೆಯೇ ಮುಂದುವರೆದಿದಿಯೇ..? ಬಿಬಿಎಂಪಿ ಈ ವಿಚಾರದಲ್ಲಿ ಕಿತ್ತು ದಬಾಕುತ್ತಿರುವುದೇನು.? ಇದೆಲ್ಲದರ ವಾಸ್ತವ ಚಿತ್ರಣ ತೆರೆದಿಡುತ್ತಿದೆ ನಿಮ್ಮ ಕನ್ನಡ ಫ್ಲ್ಯಾಶ್‌ ನ್ಯೂಸ್.

ಸ್ಪಾಟ್-1 ಕೆ.ಆರ್ ಸರ್ಕಲ್ ಅಂಡರ್ ಪಾಸ್:‌

ಭಾನುವಾರ ನಡೆದ  ದುರಂತದ  ಮೇನ್ ಸ್ಪಾಟೇ ಈ  ಕೆ.ಆರ್ ಸರ್ಕಲ್ ಅಂಡರ್ ಪಾಸ್… ಅಮಾಯಕ ಯುವತಿಯೋರ್ವಳನ್ನು ಬಲಿ ತೆಗೆದುಕೊಂಡ ಅಂಡರ್ ಪಾಸ್ ಇದು..ಘಟನೆ ನಡೆದ ಮೇಲೆ,ಈ ಅಂಡರ್ ಪಾಸ್ ಪರಿಸ್ಥಿತಿ ಹೇಗಿದೆ..ಬಿಬಿಎಂಪಿ ದುರಂತದ ಬೆನ್ನಲ್ಲಿ ಎಚ್ಚತ್ತುಕೊಳ್ಳುವ ಪ್ರಯತ್ನ ನಡೆಸಿದೆಯಾ..? ನೀವೇ ನೋಡಿ

ಸ್ಪಾಟ್-2: ವಿಂಡ್ಸರ್ ಮ್ಯಾನರ್ ಅಂಡರ್ ಪಾಸ್:

ಇದು ಬೆಂಗಳೂರಿನ ಅತ್ಯಂತ ಹಳೆಯ ಅಂಡರ್ ಪಾಸ್ ನಲ್ಲೊಂದು.ಸುಗಮ ಸಂಚಾರಕ್ಕೆ ಅನುವಾಗಲೆಂದು ನಿರ್ಮಿಸಿದ ಅಂಡರ್ ಪಾಸ್ ಮಳೆ ಬಂತೆಂದ್ರೆ ಸಾವಿಗೆ ಆಹ್ವಾನ ನೀಡುವ ಮೃತ್ಯುಕೂಪವಾಗಿ ಪರಿಣಮಿಸಿಬಿಡುತ್ತೆ.ಏರ್ ಪೋರ್ಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಅಂಡರ್ ಪಾಸ್ ಪರಿಸ್ತಿತಿಯೂ ಬದಲಾಗಿಲ್ಲ.

 ಸ್ಪಾಟ್-3: ಕಾವೇರಿ ಜಂಕ್ಷನ್ ಅಂಡರ್ ಪಾಸ್:

ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿತೆನ್ನಲಾದ ಮೊದಲ ಅಂಡರ್ ಪಾಸ್ ಇದು..ಅತ್ಯಂತ ಅವೈಜ್ಞಾನಿಕವಾಗಿ ಇದನ್ನು ನಿರ್ಮಿಸಲಾಗಿದೆ ಎನ್ನುವ ಆಪಾದನೆ ಇದಕ್ಕಿದೆ.ಅಂದ್ಹಾಗೆ ಮಳೆ ಬಂತೆಂದ್ರೆ ಜಲಾವೃತ್ತವಾಗುವ ಈ ಅಂಡರ್ ಪಾಸ್ ನ ಚಿತ್ರಣ  ದುರಂತ ಸಂಭವಿಸಿದ ಮೇಲೂ ಬದಲಾಗದೆ ಹಾಗೆಯೇ ಇದೆ.

ಸ್ಪಾಟ್-4: ಕಿನೋ ಥಿಯೇಟರ್ ಅಂಡರ್ ಪಾಸ್..;

ಇದು ಕೂಡ ಅತ್ಯಂತ ಅಪಾಯಕಾರಿ ಅಂಡರ್ ಪಾಸ್ ಎನ್ನುವ ಕಳಂಕ ಹೊತ್ತಿದೆ. ಈ ಹಿಂದೆಲ್ಲಾ ಸಣ್ಣ ಮಳೆ ಬಂದರೂ ಈ ಅಂಡರ್ ಪಾಸ್ ತುಂಬಿ ಬಿಡುತ್ತಿತ್ತು.ಅಪಾಯ ಸೃಷ್ಟಿಸಿಬಿಡುತ್ತಿತ್ತು.ನಂತರದ ದಿನಗಳಲ್ಲಿ ದುರಸ್ತಿ ನಡೆಯಿತಾದ್ರೂ ಪರಿಸ್ತಿತಿ ಮಾತ್ರ ಬದಲಾಗಿಲ್ಲ.ಈಗಲೂ ಇಲ್ಲಿ ಮಳೆ ಬಂದರೆ ನೀರು ನಿಂತು ಕೆರೆಯಂತಾಬಿಡುತ್ತದೆ.

ಸ್ಪಾಟ್-5:ಮೆಜೆಸ್ಟಿಕ್ ಅಂಡರ್ ಪಾಸ್.

ಬೆಂಗಳೂರಿನ ಅತೀ ವಾಹನದಟ್ಟಣೆ ಒಳಗೊಂಡಿರುವ ಅಂಡರ್ ಪಾಸ್ ಇದು.ಮಳೆ ಬಂದ್ರೆ ಅಪಾಯಕಾರಿ ಮಟ್ಟಕ್ಕೆ ತಲುಪೋ ಅಂಡರ್ ಪಾಸ್ ಕೂಡ ಎನ್ನುವ ಕುಖ್ಯಾತಿಯಿದೆ.ಅಂದ್ಹಾಗೆ ಈ ಅಂಡರ್ ಪಾಸ್ ನ ಸ್ಥಿತಿಯೂ ಅಪಾಯದಿಂದ ಹೊರತಾಗಿಲ್ಲ.

ಬಹುತೇಕ ನಮ್ಮ ಅಂಡರ್ ಪಾಸ್ ಗಳ ಸ್ಥಿತಿ ಸ್ವಲ್ಪವೂ ಬದಲಾಗಿಲ್ಲ. .ಇವುಗಳ ನಿರ್ವಹಣೆಗೆ ಬಿಬಿಎಂಪಿ ಖರ್ಚು ಮಾಡ್ತಿರೋ ಕೋಟ್ಯಾಂತರ ಹಣ ಎಲ್ಲಿ ಹೋಗ್ತಿದೆ ಎನ್ನೋದು ಗೊತ್ತಾಗ್ತಿಲ್ಲ.ಮಳೆಯಿಂದ ಅಪಾಯ ಸಂಭವಿಸಿದ್ರಷ್ಟೆ ಎಚ್ಚೆತ್ತುಕೊಳ್ಳುವಂಥ ನಾಟಕ ವಾಡುತ್ತದೆ ಬಿಬಿಎಂಪಿ.ಸರ್ಕಾರ ಕೂಡ ಕಮಿಷನರ್ ಕೊಡುವ ಮಾಹಿತಿ ಪಡೆದು ಸುಮ್ಮನಾಗ್ತಾರೆ.ಆದರೆ ಪರಿಸ್ತಿತಿ ಸುಧಾರಣೆ ಆಗುವುದು ಯಾವಾಗ. ಅಂಡರ್ ಪಾಸ್ ಗಳಲ್ಲಿ ಜನ ಮಳೆ ಬಂದಾಗಲೂ ನಿರ್ಭಿತವಾಗಿ ಅಡ್ಡಾಡುವ ಸ್ತಿತಿ ನಿರ್ಮಾಣವಾಗುವುದು ಯಾವಾಗ…? ಆ ದೇವರೇ ಬಲ್ಲ..

Spread the love

Leave a Reply

Your email address will not be published. Required fields are marked *

You missed

Flash News