ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಮಳೆ ಬಂದಾಗ ದುರಂತ ಸಂಭವಿಸೋದೇ ಮೂರು ಕಾರಣಕ್ಕೆ.ಒಂದು ಅಂಡರ್ ಪಾಸ್..ಇನ್ನೊಂದು ಮರ..ಮತ್ತೊಂದು ರಾಜಕಾಲುವೆ..ದುರಂತ ನಡೆದು ಜೀವಬಲಿಯಾಗ್ತದೆ ಎಂದ್ರೆ ಇದಕ್ಕೆ ಪ್ರಮುಖ ಕಾರಣಗಳೇ ಇವು.ಅದರಲ್ಲೂ ಮಳೆ ಸುರಿಯುತ್ತಿದ್ದಂತೆ ಮೊದಲು ನೆಲಕ್ಕುರುಳುವುದೇ ಬೃಹತ್ ಮರಗಳು..ಅದೃಷ್ಟವಶಾತ್ ಮೊನ್ನೆಯಿಂದ ಸುರಿಯುತ್ತಿರುವ ಮಳೆಗೆ ಕೆಳಕ್ಕುರುಳಿದ ಮರಗಳಿಂದ ಯಾವುದೇ ಜೀವಹಾನಿಯಾಗಿಲ್ಲ..ಆದ್ರೆ ಮರಗಳು ಇಷ್ಟೊಂದು ಪ್ರಮಾಣದಲ್ಲಿ ಕೆಳಕ್ಕುರುಳುತ್ತಿರುವುದು ಆತಂಕದ ವಿಚಾರ.

ಬೆಂಗಳೂರಿನಲ್ಲಿ ಸಣ್ಣ ಮಳೆ ಬಂದ್ರೂ ಮರಗಳು ಧರಾಶಹಿಯಾಗುತ್ತವೆ.ಈ ಬಾರಿನೂ ಸಾಕಷ್ಟು ಮರಗಳು ಉರುಳಿಬಿದ್ದಿವೆ.ಅಚ್ಚರಿ ಅಂದ್ರೆ ಟೊಳ್ಳು ಮರಗಳಿಗಿಂತ ಗಟ್ಟಿಮುಟ್ಟಂತೆ ಕಾಣುವ ಮರಗಳೇ ಈ ಬಾರಿ ಧರಾಶಹಿಯಾಗಿವೆ.ಇದು ಆಶ್ಚರ್ಯದ ಜತೆಗೆ ಆತಂಕವನ್ನೂ ಸೃಷ್ಟಿಸಿದೆ.ಈ ಹಿನ್ನಲೆಯಲ್ಲಿ ಮೊದಲ ಶಂಕೆ ವ್ಯಕ್ತವಾಗುವುದೇ ಬಿಬಿಎಂಪಿ  ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ.ಇಲಾಖೆ  ಸರಿಯಾಗಿ ಕೆಲಸ ಮಾಡಿದ್ರೆ ಇವೆಲ್ಲಾ ಆಗ್ತಿತ್ತಾ ಎನ್ನುವ ಪ್ರಶ್ನೆ ಮೂಡೋದು ಕಾಮನ್.

“ಪ್ರತಿ ವಲಯಕ್ಕೂ ಒಬ್ಬೊಬ್ಬರಂತೆ  8 ಅರ್ ಎಫ್ ಓ ಗಳು ಬೇಕಾಗುತ್ತೆ.ಆದರೆ ಹಾಲಿ ಇರುವುದು ಕೇವಲ ಒಬ್ರು ಮಾತ್ರ.8 ವಲಯಗಳ ಕೆಲಸ ಮಾಡುವ ತಂಡಗಳ ಉಸ್ತುವಾರಿಗೆ  28 ಡೆಪ್ಯಟಿ ಆರ್ ಎಫ್ ಓ ಗಳು ಬೇಕಿದೆ.ಆದರೆ ಈಗ ಇರುವುದು ಕೇವಲ 14 ಅಧಿಕಾರಿಗಳು  243 ವಾರ್ಡ್ ಗಳಿಗೆ  ಕನಿಷ್ಟ ಒಬ್ಬೊಬ್ಬ ಫಾರೆಸ್ಟ್ ಗಾರ್ಡ್ ಬೇಕು.ಆದ್ರೆ ಒಬ್ನೇ ಒಬ್ಬ ಗಾರ್ಡ್ ಇಲ್ಲ.8 ವಲಯಗಳಿಗೆ ಮೇಲುಸ್ತುವಾರಿಗೆ ಆರ್ ಎಫ್ ಓ ಗಳು ಬೇಕು.ಈಗ ಇರೋದು ಒಬ್ಬರು ಮಾತ್ರ. ಇಂಥಾ ಪರಿಸ್ಥಿತಿಯಲ್ಲಿ ಹೇಗೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲಿಕ್ಕೆ ಆಗುತ್ತೆ ಹೇಳಿ..ನಾವು ನಿತ್ಯ ಮನೆಗೆ  ಹೋಗೋದು 3 ಗಂಟೆಯಾಗುತ್ತಿದೆ.ಬೆಳಗ್ಗೆ ಮತ್ತೆ 6 ಗಂಟೆಗೆ ಫೀಲ್ಡ್ ಗೆ ಹೋಗಬೇಕಾಗ್ತಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ತಾರೆ. -ಸರಿನಾ ಸಿಕ್ಕಲಿಗಾರ- ಬಿಬಿಎಂಪಿ ಅರಣ್ಯ ವಿಭಾಗದ  ಉಪ ಅರಣ್ಯ ಸಂರಕ್ಷಣಾಧಿಕಾರಿ.  

ಆದರೆ ವಾಸ್ತವವೇ ಬೇರೆಯಿದೆ.ಮಳೆ ಬಂದಾಗ ಬೀಳೋ ಮರಗಳ ತೆರವು ಕಾರ್ಯಾಚರಣೆ ಮಾಡೊಕ್ಕೆ ಇರುವ ಸಿಬ್ಬಂದಿ ವ್ಯವಸ್ಥೆನೇ ಶೋಚನೀಯವಾಗಿದೆ.ಪರಿಣಾಮಕಾರಿ ಎನ್ನುವಂತ ಸವಲತ್ತಗಳೆ ಇಲ್ಲವಾಗಿದೆ.243 ವಾರ್ಡ್ ಗಳ ಬೃಹತ್ ಬಿಬಿಎಂಪಿಯಲ್ಲಿರುವುದು ಕೇವಲ 28 ತಂಡಗಳು.ಈ ತಂಡಗಳೇ ಎಲ್ಲಾ ಕಡೆ ಅಡ್ಡಾಡಬೇಕಿದೆ.ಉಸ್ತುವಾರಿಗೆ ಸಿಬ್ಬಂದಿನೇ ಇಲ್ಲ..ಇದ್ಯಾವುದು ಸಾರ್ವಜನಿಕರಿಗೆ ಗೊತ್ತಾಗುವುದೇ ಇಲ್ಲ..ಮರದಿಂದ ಸಣ್ಣ ಸಮಸ್ಯೆಯಾದರೂ ಅದಕ್ಕೆ ಅರಣ್ಯ ಇಲಾಖೆಯನ್ನೇ ದೂಷಿಸಲಾಗುತ್ತಿದೆ.ಆದರೆ ಅರಣ್ಯ ಇಲಾಖೆಯ  ವಸ್ತುಸ್ತಿತಿ ಮಾತ್ರ ಅತ್ಯಂತ ಶೋಚನೀಯವಾಗಿರೋದಂತೂ ಸತ್ಯ.

 243 ವಾರ್ಡ್‌ ಗಳಲ್ಲಿ ಒಬ್ಬನೇ ಒಬ್ಬ ಗಾರ್ಡ್-ವಾಚರ್‌ ಇಲ್ಲ..ಹೇಗೆ ಕೆಲಸ ಮಾಡೋದು..?! ಬಿಬಿಎಂಪಿ ಅರಣ್ಯ ವಿಭಾಗದ  ಉಪ ಅರಣ್ಯ ಸಂರಕ್ಷಣಾಧಿ ಕಾರಿ  ಸರಿನಾ ಸಿಕ್ಕಲಿಗಾರ  ಅವರು ಹೇಳುವಂತೆ ಬಿಬಿಎಂಪಿಯಲ್ಲಿ ಸಧ್ಯ  ಅರಣ್ಯ ವಿಭಾಗದ ಮೂಲಕ  ಪವಾಡದ ರೀತಿಯಲ್ಲಿ ಕೆಲಸ ನಡೆಯುತ್ತಿದೆ.ಏಕಂದ್ರೆ ಸಿಬ್ಬಂದಿ ಕೊರತೆ ನಡುವೆಯೂ ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆಯಂತೆ. ಪ್ರತಿ ವಲಯಕ್ಕೂ ಒಬ್ಬೊಬ್ಬರಂತೆ  8 ಅರ್ ಎಫ್ ಓ ಗಳು ಬೇಕಾಗುತ್ತೆ.ಆದರೆ ಹಾಲಿ ಇರುವುದು ಕೇವಲ ಒಬ್ರು ಮಾತ್ರ.8 ವಲಯಗಳ ಕೆಲಸ ಮಾಡುವ ತಂಡಗಳ ಉಸ್ತುವಾರಿಗೆ  28 ಡೆಪ್ಯಟಿ ಆರ್ ಎಫ್ ಓ ಗಳು ಬೇಕಿದೆ.

ಆದರೆ ಈಗ ಇರುವುದು ಕೇವಲ 14 ಅಧಿಕಾರಿಗಳು .ಅವರ ಸೇವೆ ಕೂಡ ಸಂಪೂರ್ಣವಾಗಿ ಸಿಗುತ್ತಿಲ್ಲ.ಇನ್ನು ಪ್ರತಿ ವಾರ್ಡ್ ಗೂ ಕನಿಷ್ಟ ಒಬ್ಬೊಬ್ಬರಂತೆ ಗಾರ್ಡ್-ವಾಚರ್ಸ್ ಗಳು ಬೇಕಾಗುತ್ತದಂತೆ.ಆದರೆ ಒಬ್ಬನೇ ಒಬ್ಬ ಗಾರ್ಡ್ ವಾಚರ್ಸ್ ವಾರ್ಡ್ ಗಳಲ್ಲಿ ಇಲ್ಲವಂತೆ ಎಂದು ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿ ದುಸ್ಥಿತಿಯನ್ನುತೆರೆದಿಡ್ತಾರೆ ಸಕ್ಕಲಿಗಾರ

ಮೇ 20 ಹಾಗೂ 21 ರಂದು  ಸುರಿದ ಮಳೆಯಿಂದ 109 ಮರಗಳು ಧರಾಶಹಿಯಾಗಿವೆ.613 ಕೊಂಬೆ ಗಳು ಕೆಳಕ್ಕುರುಳಿಬಿದ್ದಿವೆ. ಸಮರೋಪಾದಿ ಯಲ್ಲಿ 28 ತಂಡಗಳು ಕೆಲಸ ಮಾಡುತ್ತಿವೆ. ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಖಾಸಗಿಯಾಗಿಯೂ ಕೆಲವು ತಂಡಗಳನ್ನು ಬಾಡಿಗೆಗೆ ಪಡೆದು ಕೆಲಸ ಮಾಡಲಾಗುತ್ತಿದೆ. ಮರಗಳಿಗೆ ಹಾನಿ ಉಂಟಾಗಿ ದ್ದಕ್ಕಿಂತ  ಪಕ್ಷಿಗಳಿಗೆ ಭಾರೀ ಹಾನಿಯಾಗಿದೆ. ಆಶ್ರಯ ವಿಲ್ಲದೆ  ಸಾಕಷ್ಟು ಪಕ್ಷಿಗಳು ಸಾವನ್ನಪ್ಪಿವೆ. –ಸರಿನಾ ಸಿಕ್ಕಲಿಗಾರ ಬಿಬಿಎಂಪಿ ಅರಣ್ಯ ವಿಭಾಗದ  ಉಪ ಅರಣ್ಯ ಸಂರಕ್ಷಣಾಧಿಕಾರಿ.  

ಸಾರ್ವಜನಿಕರು  ನಮ್ಮನ್ನು ಅಡಿಯಾಳುಗಳಂತೆ ನಡೆಸಿಕೊಳ್ಳುತ್ತಾರೆ: ಸಾರ್ವಜನಿಕರು ಸಣ್ಣ ಮರದ ಕೊಂಬೆ ಬಿದ್ದರೂ ಜನ ಅರಣ್ಯ ಇಲಾಖೆಗೆ ಕರೆ ಮಾಡ್ತಾರೆ.ಅದನ್ನು ಅವರೇ ಸ್ವಯಂಪ್ರೇರಿತವಾಗಿ ತೆರವು ಮಾಡುವ ಅವಕಾಶವಿದ್ದರೂ ಇಲಾಖೆಯವರೇ ಬಂದು ಮಾಡುವಂತೆ ತಾಕೀತು ಮಾಡುತ್ತಾರಂತೆ.ತುಂಬಾ ವಿನಮ್ರಪೂರ್ವಕವಾಗಿ ಮನವಿ ಮಾಡಿದ್ರೂ ನೀವೇಕ್ರಿ ಇರೋದು,ನಮ್  ಜೇಬಿನ ತೆರಿಗೆ ಹಣವನ್ನು ಸಂಬಳವಾಗಿ ಪಡೆಯೊಲ್ವಾ..? ಬಂದ್ ಕೆಲಸ ಮಾಡ್ರಿ..ಇಲ್ದಿದ್ರೆ ಮೇಲಿನವರಿಗೆ ಕಂಪ್ಲೆಂಟ್ ಮಾಡಬೇಕಾಗ್ತದೆ ಎಂದು ಕೆಲವರು ಎಚ್ಚರಿಸ್ತಾರೆ. ನಾವೂ ಕೂಡ ಮೈ ಚಳಿ ಬಿಟ್ಟು,ಮನೆ ಮಠವನ್ನು ತೊರೆದು ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿರುತ್ತೇವೆ.ಜನ ನಮ್ಮ ಪರಿಸ್ತಿತಿಯನ್ನು ಅರ್ಥ ಮಾಡಿಕೊಂಡು ನಮಗೆ ಸಹಕಾರ ಕೊಟ್ಟರೆ ಸಮಸ್ಯೆನೇ ಇರೊಲ್ಲ.ಅದನ್ನು ಬಿಟ್ಟು ಅವರ ಅಡಿಯಾಳುಗಳಂತೆ ನಡೆಸಿಕೊಳ್ಳುವುದು ಬೇಸರವಾಗುತ್ತೆ ಎನ್ನುತ್ತಾರೆ ವಲಯವೊಂದರ ಅರಣ್ಯಾಧಿಕಾರಿ.

ಹೌದು..ಖಂಡಿತಾ ನಾವು ಕೂಡ ನೀಡಲಾಗಿರುವ ಸೀಮಿತ ಸವಲತ್ತುಗಳ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ  ಅವರ ಪರಿಸ್ತಿತಿ ಅರ್ಥ ಮಾಡಿಕೊಳ್ಳಬೇಕು.ಸಣ್ಣ ಟೊಂಗೆ ಬಿದ್ದರೂ ಅವರೇ ಬಂದು ಎತ್ತಾಕಬೇಕು ಎಂದು ಆರ್ಡರ್ ಮಾಡುವ  ಸಾರ್ವಜನಿಕರು ಕೂಡ ಅಹಮಿಕೆ ಬಿಟ್ಟು ಕೈ ಜೋಡಿಸಿದ್ರೆ ಸಮಸ್ಯೆ ಇರೊದಿಲ್ವೇನೋ ಅಲ್ವಾ..?

ಅವ್ಯಾಹತವಾಗಿ ನಡೆಯುತ್ತಿರುವ ಕಾಮಗಾರಿಗಳಿಂದಲೇ ಮರಕ್ಕೆ ಕೊಡಲಿಪೆಟ್ಟು:ಬೆಂಗಳೂರಲ್ಲಿ ಮರ ಬಿದ್ದಾಕ್ಷಣ ಅದಕ್ಕೆ ಅರಣ್ಯ ಇಲಾಖೆಯನ್ನು ದೂರೋದು, ಅಧಿಕಾರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದರ ಬಗ್ಗೆ ಸರಿನಾ ಸಕ್ಕಲಿಗಾರ ಸ್ಪಷ್ಟನೆ ನೀಡೋದು ಹೀಗೆ.. ಮರಗಳು ಬೀಳುತ್ತಿರುವುದು ಗಾಳಿಯಿಂದಲೇ ಎನ್ನುವುದು ಶೇಕಡಾ 100 ರಷ್ಟು ಸತ್ಯವಲ್ಲ.ಟೊಳ್ಳದ ಟೊಂಗೆಗಳೇ ಬೀಳುತ್ತಿವೆ ಎನ್ನುವುದು ಕೂಡ ಸತ್ಯವಲ್ಲ..ರಾಜಧಾನಿ ಬೀಳುತ್ತಿರುವ ಬಹುತೇಕ ಮರಗಳಲ್ಲಿ ಗಟ್ಟಿಮುಟ್ಟಾದ ಮರಗಳೇ ಹೆಚ್ಚೆನ್ನುವುದು ನಮ್ಮ ಗಮನಕ್ಕೆ ಬಂದಿದೆ.ಜನ ಭಾವಿಸುವಂತೆ ನಡೆದಿದ್ದರೆ ಟೊಳ್ಳಾದ ಮರಗಳು ಬೀಳಬೇಕಿತ್ತಲ್ಲ..

ನಿಜವಾದ ಸಮಸ್ಯೆ ನಮ್ಮದಲ್ಲ, ವಿವಿಧ ಕಾಮಗಾರಿಗಳನ್ನು ನಡೆಸುತ್ತಿರುವ ಇಲಾಖೆಗಳದ್ದು,ಮರಗಳು ಗಟ್ಟಿಯಾಗಿ ಬೇರೂರಿರುವ ಸ್ಥಳದಲ್ಲಿ ಯಾವುದೇ ಪರ್ಮಿಷನ್ ಇಲ್ಲದೆ ಕಾಮಗಾರಿಗಾಗಿ ರಸ್ತೆ ಅಗೆಯಲಾಗುತ್ತಿದೆ.ಸಾಕಷ್ಟು ಆಳಕ್ಕೆ ಗುಂಡಿಗಳನ್ನು ತೋಡಲಾಗುತ್ತಿದೆ.ಸಾಕಷ್ಟು ಸಂದರ್ಭಗಳಲ್ಲಿ ಗುಂಡಿ ತೋಡುವಾಗ ಮರದ ಬೇರುಗಳು ಅಡ್ಡ ಬರುತ್ತವೆ ಎಂದು ಅವುಗಳನ್ನು ಕತ್ತರಿಸಲಾಗುತ್ತಿದೆ. ಬೇರುಗಳು ಯಾವಾಗ ಶಿಥಿಲವಾಗುತ್ತವೋ,ಆಗ ಸಹಜವಾಗಿಯೇ ಮರಗಳು ಕೆಳಗುರುಳುತ್ತವೆ. ನೋಡೊಕ್ಕೆ ಗಟ್ಟಿಮುಟ್ಟಾಗಿ ಕಾಣುವ ಬೃಹತ್ ಮರಗಳು ಸಣ್ಣ ಮಳೆಗೂ ಕೆಳಕ್ಕುರುಳುವುದಕ್ಕೆ ಕಾರಣವೇ ಕಾಮಗಾರಿಗಳು, ಅವ್ಯಾಹತವಾಗಿ ನಡೆಯುತ್ತಿರುವ ಕಾಮಗಾರಿಗಳು ಕಡಿಮೆಯಾದ್ರೆ,ಮರಗಳ ಬೇರುಗಳಿಗೆ ತೊಡಕಾಗದ ರೀತಿಯಲ್ಲಿ ನಡುದ್ರೆ ಮರಗಳು ಉರುಳುವ ಸಮಸ್ಯೆಗಳೇ ಇರೋದಿಲ್ಲ ಎನ್ನುತ್ತಾರೆ ಸಕ್ಕಲಿಗಾರ.

ಮೊದಲಿಂದಲೂ ಬಿಬಿಎಂಪಿ ಅರಣ್ಯ ಇಲಾಖೆ ಬಗ್ಗೆ ತಾತ್ಸಾರ ಧೋರಣೆಯನ್ನೇ ಅನುಸರಿಸಲಾಗುತ್ತಿದೆ.ಮಳೆ ಬಂದಾಗ, ಮಳೆ ಉರುಳಿದಾಗ ಮಾತ್ರ ನೆನಪಾಗುವ ಇಲಾಖೆಯನ್ನು ಸದೃಡಗೊಳಿಸುವ ಕೆಲಸವನ್ನೇ ಯಾರು ಮಾಡಲಿಲ್ಲ.ಮುಖ್ಯ ಆಯುಕ್ತ ತುಷಾರಗಿರಿನಾಥ್ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ರೆ ಇಲಾಖೆ ಪರಿಸ್ತಿತಿನು ಸುಧಾರಿಸಬಹುದು..ಹಾಗೆಯೇ ಬೆಂಗಳೂರಿನಲ್ಲಿ ಮರಗಳಿಂದ ಉಂಟಾಗುತ್ತಿರುವ ಸಮಸ್ಯೆಗೂ ಬ್ರೆಕ್ ಹಾಕಬಹುದೇನೋ..?

Spread the love

Leave a Reply

Your email address will not be published. Required fields are marked *

You missed

Flash News