ಗರ್ಭಿಣಿಯರಿಗೆ ಹಕ್ಕಿನ “ಹೆರಿಗೆ ರಜೆ” ಕೊಡ್ಲಿಕ್ಕೂ ಮೇಲಾಧಿಕಾರಿಗಳ ಮೀನಾಮೇಷ-ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಟ್ಟ ಸಂತ್ರಸ್ಥ ಸಿಬ್ಬಂದಿ..

0

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಿನ್ನೆ ಅಂತ್ಯಗೊಂಡಿದೆ.ಸರ್ಕಾರಿ ನೌಕರ ದರ್ಜೆ ಮಾನ್ಯತೆಯೊಂದನ್ನು ಬಿಟ್ಟು ಉಳಿದೆಲ್ಲಾ ಬೇಡಿಕೆ ಈಡೇರಿಸ್ಲಿಕ್ಕೆ ಸರ್ಕಾರ ಬಹುತೇಕ ಒಪ್ಪಿಗೆ ಕೊಟ್ಟಿರುವುದನ್ನು ಮುಷ್ಕರಕ್ಕೆ ಸಂದ ಭಾರೀ ಗೆಲುವು ಎಂದೆಲ್ಲಾ ಬಿಂಬಿಸಲಾಗುತ್ತಿದೆ.ಈ ಬಗ್ಗೆ ಹತ್ತಲವು ರೀತಿಯ ವ್ಯಾಖ್ಯಾನಗಳು ನಡೆಯುತ್ತಿವೆ ಬಿಡಿ..

ಆದ್ರೆ ಇದೆಲ್ಲಕ್ಕಿಂತ ಪ್ರಮುಖವಾಗಿ  ನೌಕರರ ಮೇಲೆ ನಡೆಯುತ್ತಿರುವ ತರೇವಾರಿ ದೌರ್ಜನ್ಯಕ್ಕೆ ಶಾಶ್ವತ ಬ್ರೇಕ್ ಹಾಕಿಸ್ಬೇಕೆನ್ನುವ ಪ್ರಮುಖ ಬೇಡಿಕೆ ಈಡೇರಿಸಿಕೊಳ್ಳೋದನ್ನೇ ನೌಕರರು ಮರುತ್ರಾ ಗೊತ್ತಾಗ್ತಿಲ್ಲ..ಏಕೆಂದ್ರೆ ಯಾವುದೇ ಇಲಾಖೆಯಲ್ಲೂ ನೌಕರ ಸಿಬ್ಬಂದಿ ಅನುಭವಿಸಲು ಸಾಧ್ಯವಿಲ್ಲದಂಥ ಮಾನಸಿಕ ಕಿರುಕುಳ,ಯಾತನೆ,ನೋವನ್ನು ಸಾರಿಗೆ ನಿಗಮಗಳ ನೌಕರರು ಅನುಭವಿಸುತ್ತಿದ್ದಾರೆ..ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಬಿಡಿ..

ಮಹಿಳಾ ರಕ್ಷಣೆ-ಸುರಕ್ಷತೆ-ಸಬಲಿಕರಣದ ಬಗ್ಗೆ ಮಾತನಾಡುವ ರಾಜ್ಯದ ಮುಖ್ಯಮಂತ್ರಿಗಳು,ಸಾರಿಗೆ ಸಚಿವರು,ಸಾರಿಗೆಯ ನಾಲ್ಕೂ ನಿಗಮಗಳ ಅಧ್ಯಕ್ಷರು ಹಾಗೂ ಎಂಡಿಗಳು ಓದಲೇಬೇಕಾದ ಸ್ಟೋರಿ ಇದು..ಮಹಿಳೆಯರಿಗೆ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದಷ್ಟು ಉಸಿರುಗಟ್ಟಿಸುವ ವಾತಾವರಣ ಇದೆ ಎನ್ನುವ ಆರೋಪವಿದೆ..

ಅದರಲ್ಲೂ ಇಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಗರ್ಭಿಣಿಯರಾಗುವುದೇ ತಪ್ಪಾ ಎನ್ನುವ ರೀತಿಯಲ್ಲಿ ಅವರನ್ನು ಟ್ರೀಟ್ ಮಾಡಲಾಗ್ತಿದೆ.ಸರ್ಕಾರವೇ ಸಹಾನುಭೂತಿ-ಅನುಕಂಪ ಹಾಗೂ ಮಹಿಳಾ ಸಂವೇದನಾ ದೃಷ್ಟಿಯಿಂದ ಹೆರಿಗೆ ರಜೆ ನೀಡಿದ್ದರೆ ನಿಗಮದಲ್ಲಿರುವ ಕೆಲ ಹೊಣೆಗೇಡಿ ಕಟುಕರು ಮಹಿಳೆಯರ ಪಾಲಿನ ರಜೆ ಕೊಡ್ಲಿಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ.ಕಿರುಕುಳ ತಡೆದುಕೊಳ್ಳಲಿಕ್ಕಾಗದೆ ಮಹಿಳಾ ಸಿಬ್ಬಂದಿಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವು-ಅಳಲು-ಆಕ್ರೋಶ ವ್ಯಕ್ತಪಡಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದ್ರೆ ಸಾರಿಗೆ ನಿಗಮದಲ್ಲಿ ಮಹಿಳೆ ಸಶಕ್ತೀಕರಣ ಯಾವ್ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತೆ.

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮೇಲಾಧಿಕಾರಿಗಳ ದೌರ್ಜನ್ಯಕ್ಕೆ ಒಳಗಾಗ್ತಿರುವುದು ಕೇವಲ ಪುರುಷ ಸಿಬ್ಬಂದಿ ಮಾತ್ರವಲ್ಲ..ಮಹಿಳೆಯರು ಕೂಡ ನಿರಂತರ ಮಾನಸಿಕ ಕಿರುಕುಳ ಅನುಭವಿಸುತ್ತಲೇ ಇದ್ದಾರೆ ಎನ್ನುವ ಆರೋಪವಿದೆ.ಇದಕ್ಕೆ ಮತ್ತೊಂದು ಉದಾಹರಣೆ ಹೆರಿಗೆ ರಜೆ ನೀಡುವುದರಲ್ಲಿ ಮಾಡಲಾಗು ತ್ತಿರುವ ತಾರತಮ್ಯ.ಅನ್ಯಾಯ..ಸರ್ಕಾರವೇ 180 ದಿನಗಳ ಹೆರಿಗೆ ರಜೆ ಘೋಷಿಸಿದ್ದರೆ. ನಿಗಮದಲ್ಲಿರುವ ಕೆಲ ಅಮಾನವೀಯ ಮನಸ್ಥಿತಿಯ ಅಧಿಕಾರಿಗಳು ಮಹಿಳಾ ಸಂವೇದನೆಯಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ನಿಗಧಿಪಡಿಸಿರುವಷ್ಟು ರಜೆ ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳ್ತಿದ್ದಾರೆ.ಮಹಿಳಾ ಸಂವೇದನಾ ವಿಭಾಗ ಎನ್ನುವುದು ಸಾರಿಗೆ ನಿಗಮದಲ್ಲಿಬದುಕಿದೆಯೋ ಸತ್ತಿದೆಯೋ ಒಂದೂ ಗೊತ್ತಾಗ್ತಿಲ್ಲ.

ಹೆರಿಗೆ ರಜೆ 180 ದಿನಗಳಿಗೆಂದೇ ನಿರ್ದಿಷ್ಟಗೊಳಿಸಿ ಸರ್ಕಾರವೇ ಹೊರಡಿಸಿರುವ ಆದೇಶ
ಹೆರಿಗೆ ರಜೆ 180 ದಿನಗಳಿಗೆಂದೇ ನಿರ್ದಿಷ್ಟಗೊಳಿಸಿ ಸರ್ಕಾರವೇ ಹೊರಡಿಸಿರುವ ಆದೇಶ

ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಮಹಿಳೆಯರು ಗರ್ಭಿಣಿಯರಾಗುವುದೇ ತಪ್ಪಾ…?ಮೇಲಾಧಿಕಾರಿಗಳ ದುರ್ವರ್ತನೆ,ನಿಷ್ಕಾಳಜಿ ಇಂತದೊಂದಷ್ಟು ಪ್ರಶ್ನೆ ಮೂಡಿಸುವುದು ಸಹಜ.ನೊಂದ ಮಹಿಳೆಯರು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆಂದ್ರೆ ಅವರಿಗಾಗ್ತಿರುವ ಅನ್ಯಾಯ ಎಂತದೆನ್ನುವುದು ಗೊತ್ತಾಗುತ್ತೆ.ಇಲ್ಲೋರ್ವ ಮಹಿಳಾ ಸಿಬ್ಬಂದಿ ತನಗೆ ಮೇಲಾಧಿಕಾರಿಗಳು ಹೆರಿಗೆ ರಜೆ ನೀಡುವುದಕ್ಕೆ ತೋರುತ್ತಿರುವ ನಿರಾಸಕ್ತಿ-ನಿರ್ಲಕ್ಷ್ಯವನ್ನು ಭಾರೀ ಬೇಸರದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.ದೇವರು ವರ ಕೊಟ್ರೂ ಪೂಜಾರಿ ಕೊಡೊಲ್ಲ ಎನ್ನುವಂತೆ ಸರ್ಕಾರವೇ 180 ದಿನ ರಜೆ ಕೊಟ್ಟಿದ್ದರೂ ಅವರ ಹಕ್ಕಿನ ರಜೆ ಕೊಡ್ಲಿಕ್ಕೆ ಮೀನಾಮೇಷ ಎಣಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮೇಲ್ಕಂಡ ಮಹಿಳೆ ತೋಡಿಕೊಳ್ಳುತ್ತಿರುವ ನೋವು ಕೆಳಕಂಡಂತೆ ಇದೆ.”ಸರ್ಕಾರ ನಿಗಧಿಪಡಿಸಿರುವಂತೆ ಹೆರಿಗೆ ರಜೆ 6 ತಿಂಗಳು ಅಂದ್ರೆ 180 ದಿನ.ಆದ್ರೆ ಸಾರಿಗೆ ನಿಗಮಗಳಲ್ಲೇ ಒಂದು ಆಂತರಿಕವಾದ ನಿಯಮ ಮಾಡಿಕೊಳ್ಳಲಾಗಿದೆಯಂತೆ.ಹೆರಿಗೆ ಆಗೊಕ್ಕೆ ಮುನ್ನ 90 ದಿನ ಹಾಗೂ ಹೆರಿಗೆ ಆದ ಮೇಲೆ 90 ದಿನ.ಆದರೆ ಹೆರಿಗೆ ಎನ್ನುವುದು ಪ್ರಕೃತಿ ನಿಯಮ.ಅದು ಯಾವ ಕ್ಷಣದಲ್ಲಿ ಬೇಕಾದ್ರೂ ಆಗಬಹುದು.ನಿಗಮ ತನ್ನದೇ ಆದ ರೂಲ್ಸ್ ಮಾಡಿಕೊಂಡಿದೆ ಎಂದು ಹೊಟ್ಟೆ ಮುನ್ನವೇ ಕುಯ್ಯಿಸಿಕೊಳ್ಳೊಕ್ಕಾಗುತ್ತಾ..ನನಗೆ 7 ತಿಂಗಳಲ್ಲೇ ಮಗುವಾಯ್ತು.ಈ ಕಾರಣಕ್ಕೆ ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಹಾಗೆ ನೋಡಿದರೆ ನನಗೆ ಸಿಕ್ಕಿದ್ದು 180 ದಿನಗಳ ಬದಲು 134 ರಜೆ ಮಾತ್ರ. 46 ದಿನಗಳ ಹಕ್ಕಿನ ರಜೆಯನ್ನು ಕಸಿದುಕೊಂಡಿದ್ದಾರೆ. ಇದರಿಂದ 1ವರೆ ತಿಂಗಳ ಹಸುಗೂಸನ್ನು ಇಟ್ಕೊಂಡು ಕೆಲಸ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಅವರ ಮನೆ ಹೆಣ್ಮಕ್ಕಳಿಗೆ ಹೀಗಾಗಿದ್ರೆ ಏನಾಗ್ತಿತ್ತು”.ಇದನ್ನು ಆಲೋಚಿಸ್ಬೇಕೆಂದು ಮಹಿಳಾ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ. ಇದನ್ನೆಲ್ಲಾ ನೋಡಿದಾಗ ದೌರ್ಜನ್ಯ ಎನ್ನುವುದು ಇಷ್ಟೊಂದು ಪ್ರಮಾಣದಲ್ಲಿ ನಡೆಯುತ್ತಾ ಎನ್ನುವ ಆಕ್ರೋಶ ಮೂಡುತ್ತೆ.

ಮಹಿಳಾ ಸಿಬ್ಬಂದಿ ಸಮಸ್ಯೆಗಂತಲೇ ವಿಭಾಗವೇನೋ ಇಲಾಖೆಯಲ್ಲಿದೆ ಎನ್ನಲಾಗ್ತಿದೆ.ಆದ್ರೆ ಅದು ಸತ್ತಿದೆಯೋ ಬದುಕಿದೆಯೋ ಗೊತ್ತಾಗ್ತಿಲ್ಲ..ಬದುಕಿದ್ದೆ ಆಗಿದ್ದಲ್ಲಿ ಇಷ್ಟೊತ್ತಿಗೆ ಇಂಥಾ  ಸಮಸ್ಯೆಗೆ ಸ್ಪಂದಿಸಬೇಕಿತ್ತು.ಈಗಲೂ ಅಸ್ಥಿತ್ವದಲ್ಲಿದೆ ಎನ್ನುವುದಾದ್ರೆ ಅಲ್ಲಿ ಕೆಲಸ ಮಾಡುವವರು ಹೊಟ್ಟೆಗೆ ಅದೇನ್ ತಿಂತಾರೋ ಗೊತ್ತಾಗ್ತಿಲ್ಲ..ಮಹಿಳೆಯರ ನೋವಿಗೆ ಸ್ಪಂದಿಸಲಿಕ್ಕಾಗದ ಮೇಲೆ ಇಂಥಾ ವಿಭಾಗವನ್ನು ಇಟ್ಕೊಂಡಿದ್ದೂ ಪ್ರಯೋಜನವೇನು ಎಂದು ಮಹಿಳಾ ಸಿಬ್ಬಂದಿ ನೋವು-ಆಕ್ರೋಶದಿಂದ ಪ್ರಶ್ನಿಸ್ತಾರೆ…

ಗರ್ಭಿಣಿಯರಿಗೆ ಹಕ್ಕಿನ “ಹೆರಿಗೆ ರಜೆ” ಕೊಡ್ಲಿಕ್ಕೂ ಮೇಲಾಧಿಕಾರಿಗಳ ಮೀನಾಮೇಷ-ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಟ್ಟ ಸಂತ್ರಸ್ಥ ಸಿಬ್ಬಂದಿ..

Spread the love
Leave A Reply

Your email address will not be published.

Flash News