“ವಿಲೇಜ್ ಫೈಟ್” ಹೊಸ್ತಿಲಲ್ಲೇ ಕಿಡಿಗೇಡಿಗಳಿಂದ ವಾಮಚಾರ-ಮಾಟಮಂತ್ರ..ಬೆಚ್ಚಿಬಿದ್ದ ಸೋಗಾನೆ-ಓತಿಘಟ್ಟ ಗ್ರಾಮಸ್ಥರು…

0

ಶಿವಮೊಗ್ಗ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳ ಕಾವು ದಿನೇ ದಿನೇ ಹೆಚ್ಚುತ್ತಲೇ ಇದೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪಕ್ಷದ ಹಿಡಿತ ತಪ್ಪಬಾರ ದೆನ್ನುವ ಫರ್ಮಾನ್ ಹೊರಟಿರುವುದರಿಂದ ಸ್ಥಳೀ ಯ ಮುಖಂಡರಿಗೆ ತಲೆ ಬೇನೆ ಹೆಚ್ಚಾಗಿದೆ.

ಇದರ ನಡುವೆಯೇ  ಚುನಾವಣೆಯಲ್ಲಿ ಅಡ್ಡದಾರಿ ಹಿಡಿದಾದ್ರೂ ಗೆಲ್ಲಲೇಬೇಕೆನ್ನುವ ಕುತಂತ್ರದಿಂದ ಕೆಲವು ಕಿಡಿಗೇಡಿಗಳು ವಾಮಚಾರ-ಮಾಟ ಮಂತ್ರ ಮಾಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಅಂದ್ಹಾಗೆ ಇದು ನಡೆದಿರುವುದು ಶಿವಮೊಗ್ಗ ಗ್ರಾಮಾಂತರ ಜಿಲ್ಲೆ ಸೋಗಾನೆಯ ಓತಿಘಟ್ಟ ಗ್ರಾಮದಲ್ಲಿ.ವಿಮಾನ ನಿಲ್ದಾಣಕ್ಕೆ ಗೊತ್ತು ಮಾಡಿರುವ ಸೋಗಾನೆ ವ್ಯಾಪ್ತಿಯ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.ಕೆಲವರು ಹಣ-ಹೆಂಡದ ಜೊತೆಗೆ ತರಹೇವಾರಿ ರೀತಿಯ ಆಮಿಷ ಒಡ್ಡಿ ಮತದಾರರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ..ಆದ್ರೆ ಇನ್ನು ಕೆಲವರು ನೇರವಾಗಿ ಚುನಾವಣೆ ಎದುರಿಸುವ ತಾಕತ್ತಿಲ್ಲದೇ ಗ್ರಾಮಕ್ಕೆ ಗ್ರಾಮವನ್ನೇ ವಾಮಚಾರದಲ್ಲಿ ಬಂಧಿಸಿಟ್ಟು ಮಾನಸಿಕವಾಗಿ ಮತದಾರರನ್ನು ಸೆಳೆಯುವ ಕಿಡಿಗೇಡಿತನದ ಕೃತ್ಯಕ್ಕೂ ಕಾರಣವಾಗಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಓತಿಘಟ್ಟ ಗ್ರಾಮದ ವ್ಯಾಪ್ತಿಯ ಬೀದಿ ಬೀದಿಗಳಲ್ಲಿ ಕುಂಕುಮ-ಅರಿಶಿಣ- ಮಡಿಕೆ-ಬಳೆ-ನಿಂಬೆ ಹಣ್ಣು-ವೀಳ್ಯದೆಲೆಯನ್ನು ಬಿಸಾಕಿರುವುದು ಪತ್ತೆಯಾಗಿದೆ.ಮೇಲ್ನೋಟಕ್ಕೆ ಇದು ಕಿಡಿಗೇಡಿಗಳು ನಡೆಸಿರುವ ವಾಮಾಚಾರ ಎನ್ನಲಾಗ್ತಿದೆ.ಈ ಘಟನೆಯಿಂದ ಸಾಕಷ್ಟು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಮನೆಯಿಂದ ಹೊರಗೆ ಬರಲಿಕ್ಕೆ ಅಂಜುತ್ತಿದ್ದಾರೆ.ಜನರ ಮಾನಸಿಕತೆಯನ್ನು ಪ್ರಚೋದಿಸಿ ತಮ್ಮತ್ತ ಸೆಳೆಯುವ ಕಾರಣಕ್ಕೆ ಕಿಡಿಗೇಡಿಗಳು ಮಾಟಮಂತ್ರದ ಮೊರೆ ಹೋಗಿರಬಹುದೆನ್ನುವ ಮಾತು ಕೇಳಿಬರುತ್ತಿದೆ.ಜನರನ್ನು ಹೆದರಿಸುವ ದುರುದ್ದೇಶದಿಂದಲೇ ಕಿಡಿಗೇಡಿಗಳು ಈ ರೀತಿಯ ಕೃತ್ಯ ಎಸಗಿರಬಹುದೆನ್ನಲಾಗ್ತಿದೆ.ಆದ್ರೆ ಯಾರು ಈ ರೀತಿಯ ಕೃತ್ಯಕ್ಕೆ ಕೈ ಹಾಕಿದವರು ಯಾರು ಎನ್ನುವುದು ತಿಳಿದುಬಂದಿಲ್ಲ..ಸ್ಥಳೀಯರ ಪ್ರಕಾರ ಇದು ಚುನಾವಣೆಗೆ ಸ್ಪರ್ಧಿಸಿರಬಹುದಾದ ಅಭ್ಯರ್ಥಿಗಳದ್ದೇ ಕರಾಮತ್ತಂತೆ.

ಆದ್ರೆ ಯಾರೇ ಮಾಡಿದ್ರೂ ಅವರು ಹಾಳಾಗಿ ಹೋಗ್ತಾರೆನ್ನುವ ಹಿಡಿಶಾಪವನ್ನೂ ಹಾಕ್ತಿದ್ದಾರೆ.ಘಟನೆ ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳ ಮಹಜರ್ ಮಾಡಿ ಮಾಹಿತಿ ಮೇರೆಗೆ ದೂರನ್ನು ದಾಖಲಿಸಿಕೊಂಡು ವಾಮಾಚಾರದಂಥ ಕುಕೃತ್ಯ  ನಡೆಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

Spread the love
Leave A Reply

Your email address will not be published.

Flash News