ನಾನು ರಾಜಿನಾಮೆ ಕೊಟ್ಟಿದ್ದೇ “ಕೆಫೆ ಡೇ” ಸಿದ್ಧಾರ್ಥ ರಿಂದ.. ಮಾಜಿ ಐಪಿಎಸ್ ಅಣ್ಣಾಮಲೈ ಈ ರೀತಿಯ ಸ್ಪೋಟಕ ಹೇಳಿಕೆ ಕೊಟ್ಟಿದ್ದೇಕೆ ಗೊತ್ತಾ..?

0

ಚಿಕ್ಕಮಗಳೂರು: ನಾನು ರಾಜೀನಾಮೆ ನೀಡೊಕ್ಕೆ ಕಾರಣವೇ ಕಾಫಿಡೇ ಸಿದ್ಧಾರ್ಥ ಎನ್ನುವ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ ಮಾಜಿ ಐಪಿಎಸ್ ಹಾಗೂ ಬಿಜೆಪಿ ಮುಖಂಡ ಅಣ್ಣಾಮಲೈ.. ಇಂತದ್ದೊಂದು ಸ್ಪೋಟಕ ಮಾಹಿತಿ ಬಹಿರಂಗಪಡಿಸಿರುವುದು ಎಲ್ಲಿ..ಹೇಗೆ..ಏಕೆ ಎನ್ನುವ ಕುತೂಹಲಕ್ಕೆ ಈ ಸ್ಟೋರಿಯನ್ನು ನೀವ್ ಓದಲೇಬೇಕು..

ಕೈ ತುಂಬಾ ಸಂಬಳ…ಒಳ್ಳೆಯ ಹೆಸರು…ಸಮಾಜದಲ್ಲಿ ಗೌರವ ಸ್ಥಾನಮಾನ ಎಲ್ಲ ಕಲ್ಪಿಸಿಕೊಟ್ಟ ಹೊರತಾಗ್ಯೂ ಐಪಿಎಸ್ ಅಣ್ಣಾಮಲೈ ಸರ್ಕಾರಿ ಹುದ್ದೆಗೆ ರಾಜಿನಾಮೆ ಕೊಡ್ಲಿಕ್ಕೆ ಕಾರಣ ಏನು..?ಇದು ಅನೇಕ ಸಂದರ್ಭಗಳಲ್ಲಿ ಚರ್ಚೆಗೀಡಾಗಿರುವ ಪ್ರಶ್ನೆ..ಅಣ್ಣಾಮಲೈ ಸಂದರ್ಭ ಬಂದಾಗ ಕಾರಣ ತಿಳಿಸೋದಾಗಿ ಹೇಳುತ್ತಲೇ ವರ್ಷವನ್ನೇ ಕಳೆದುಬಿಟ್ಟಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕ ರೀತಿಯಲ್ಲಿ ವಿಶ್ಲೇಷಣೆ-ವ್ಯಾಖ್ಯಾನವಾಗಿದ್ದನ್ನೂ ನೋಡಿದ್ದೇವೆ.ಆದ್ರೂ ಅದೆಲ್ಲಾ ನಿಖರ-ಸ್ಪಷ್ಟ ಕಾರಣ ಎನಿಸಿಯೇ ಇರಲಿಲ್ಲ..ಆ ನೈಜ ಕಾರಣವನ್ನು ಅಂತೂ ಇಂತೂ ಅಣ್ಣಾಮಲೈ ಬಹಿರಂಗ ಮಾಡಿದ್ದಾರೆ.ನಾನು ರಾಜಿನಾಮೆ ಕೊಡ್ಲಿಕ್ಕೆ ಸಿದ್ದಾರ್ಥ ಅವರೇ ಕಾರಣ ಎನ್ನುವುದನ್ನು ಬಯಲು ಮಾಡಿದ್ದಾರೆ. 

ಹಾಗಂತ..ಅಣ್ಣಾಮಲೈ ಕೊಟ್ಟಿರುವ ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಿಲ್ಲ..ಅಣ್ಣಾಮಲೈ ಇಂತದ್ದೊಂದು ಹೇಳಿಕೆ ಕೊಟ್ಟಿರುವುದು ಸಿದ್ದಾರ್ಥ ಅವರ ಮೇಲಿದ್ದ ಪ್ರೀತಿ-ಸಲುಗೆ-ವಿಶ್ವಾಸದಿಂದ ಎಂದು ಗಮನಿಸ್ಬೇಕಾಗ್ತದೆ.ಸಿದ್ದಾರ್ಥ ಸಲಹೆ ಹಾಗೂ ಹೇಳಿಕೆಗೆ ಬೆಲೆ ಕೊಟ್ಟು ಅಣ್ಣಾಮಲೈ ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಂದ್ರೆ ಸಿದ್ದಾರ್ಥ ಹಾಗೂ ಅಣ್ಣಾಮಲೈ ಸಂಬಂಧ ಎಷ್ಟು ಗಾಢವಾಗಿತ್ತು..ಅದು ಎಷ್ಟು ಆತ್ಮೀಯವಾಗಿತ್ತೆನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಪೊಲೀಸ್ ಡ್ಯೂಟಿ ಬಗ್ಗೆ ಬೇಸರವಾಗಿದೆ ಎಂದು ನೋವು ತೋಡಿಕೊಂಡಾಗ ಸಿದ್ದಾರ್ಥ ಕೊಟ್ಟ ಸಲಹೆಯೇ ರಾಜೀನಾಮೆ ಆಂತೆ ಎಂದು ಸಿದ್ದಾರ್ಥ ಅವರ ಪುತ್ಥಳಿ ಅನಾವರಣದ ವೇಳೆ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿಯಿರುವ ಕೆಫೆ ಡೇ ವ್ಯಾಪ್ತಿಯಲ್ಲಿ ಸಿದ್ದಾರ್ಥ ಅವರ ಪುತ್ಥಳಿ ಅನಾವರಣ ನೆರವೇರಿಸಿದ ಬಳಿಕ ಸಿದ್ದಾರ್ಥ ಜತೆಗಿನ ಒಡನಾಟವನ್ನು ನೆನಪು ಮಾಡಿಕೊಳ್ಳುವಾಗ ಈ ಸ್ಪೋಟಕ ಸಂಗತಿಯನ್ನು ಹೊರ ಹಾಕಿದ್ದಾರೆ ಅಣ್ಣಾಮಲೈ.

ರಾಜಿನಾಮೆ ಕೊಡೊಕ್ಕೆ ಕೆಲ ದಿನಗಳ ಮುನ್ನ ಸಿದ್ದಾರ್ಥ ಜತೆ ಮಾತನಾಡುವಾಗ ಪೊಲೀಸ್ ಡ್ಯೂಟಿ ಯಾಕೋ ಬೇಡವೆನಿಸಿದೆ.ಹುದ್ದೆಯಲ್ಲಿರುವಾಗ ಸೆಲ್ಯೂಟ್ ಹೊಡೀತಾರೆ..ಮರ್ಯಾದೆ ಕೊಡುತ್ತಾರೆ.ಆದ್ರೆ ನನಗೆ ಇದೆಲ್ಲಾ ಬೇಡ..ಜನರ ಸೇವೆ ಮಾಡಬೇಕು..ಕೃಷಿ ನಡೆಸಬೇಕು..ಜನರ ನಡುವೆಯೇ ಇದ್ದು ಕೆಲಸ ಮಾಡ್ಬೇಕೆನ್ನುವುದು ನನ್ನ ಆಸೆ ಎಂಬ ಇಂಗಿತ ವ್ಯಕ್ತಪಡಿಸಿದ್ದರಂತೆ ಅಣ್ಣಾಮಲೈ..

ಈ ಮಾತನ್ನು ಕೇಳಿದ ಸ್ವಲ್ಪ ಹೊತ್ತಿನ ನಂತ್ರ ರಿಸೈನ್ ಮಾಡ್ಬಿಡು.ನಾನಿದ್ದೇನೆ..ನಿನ್ನ ಇಚ್ಛೆಯ ಕ್ಷೇತ್ರ ರಾಜಕೀಯ..ಅಲ್ಲಿ ಟ್ರೈ ಮಾಡು..ಪ್ರಯತ್ನ ಪಡು..ಇವತ್ತಲ್ಲ ನಾಳೆ ಸಕ್ಸೆಸ್ ಆಗ್ತೀಯಾ..ಗೋ ಹೆಡ್ ಎಂದಿದ್ರಂತೆ.. ಹತ್ತಾರು ಬಾರಿ ಆಲೋಚಿಸಿದಾಗ  ಸಿದ್ದಾರ್ಥ ಸಲಹೆ ಸೂಕ್ತವೆಂದೆನಿಸಿತು..ಆನಂತರವೇ ರಾಜಿನಾಮೆ ನೀಡುವ ನಿರ್ದಾರಕ್ಕೆ ಬಂದೆ..ಆದ್ರೆ ಅವರ ನಿರ್ದಾರವನ್ನು ಪುರಸ್ಕರಿಸಿದ ನನ್ನೊಂದಿಗೆ ಈ ವೇಳೆ ಮಾತನಾಡಲು,ಸಲಹೆ ಕೊಡಲು ಅವರೇ ಇಲ್ಲ ಎಂದು ಭಾವುಕರಾಗಿದ್ದಾರೆ ಅಣ್ಣಾಮಲೈ..

ಇದೆಲ್ಲಾ ಗಮನಿಸಿದ್ರೆ ಅಣ್ಣಾಮಲೈ ಹಾಗೂ ಸಿದ್ದಾರ್ಥ ಅವರ ನಡುವಿನ ಸಂಬಂಧ ಎಷ್ಟು ಆತ್ಮೀಯವಾಗಿತ್ತು..ಹಾಲು ಜೇನಿನಂತಿತ್ತು ಎನ್ನೋದು ಗೊತ್ತಾಗುತ್ತೆ.ಅಣ್ಣಾಮಲೈ ಅವರ ಈ  ಹೇಳಿಕೆ ಕುತೂಹಲ ಮೂಡಿಸಿದೆ.    

Spread the love
Leave A Reply

Your email address will not be published.

Flash News