ಕೊನೆಗೂ “ಹನುಮಂತವ್ವ” ಬದುಕಿ ಬರಲೇ ಇಲ್ಲ..ಸರ್.. ಜೀವನ್ಮರಣ ಹೋರಾಟದಲ್ಲಿ ಉಸಿರುಚೆಲ್ಲಿದ ಮಹಿಳೆ ಸಾವಿಗೆ ಕಣ್ಣೀರಾದ ಇನ್ಸ್ ಪೆಕ್ಟರ್ ಲಕ್ಷ್ಮಣ ನಾಯ್ಕ

0

 

ಜ್ಞಾನಭಾರತಿ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯ್ಕ
ಜ್ಞಾನಭಾರತಿ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯ್ಕ

ಬೆಂಗಳೂರು:ಸರ್..ಎಷ್ಟೇ ಶ್ರಮ ಪಟ್ಟರೂ..ಕೊನೆಗೂ ಆ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ..ಬದುಕಿಸಿಕೊಳ್ಳುವಲ್ಲಿ ನಾನೇ ವಿಫಲನಾದ ನೇನೋ ಎನ್ನುವಂಥ ಪಾಪಪ್ರಜ್ಞೆ ಕಾಡ್ತಿದೆ….ಒಂದಷ್ಟು ಶ್ರಮ ಹಾಕಿದ್ದಿದ್ದರೆ ಆಕೆ ಬದುಕುಳಿಯುತ್ತಿದ್ದಳೇನೋ..ಎಲ್ಲಾ ಪ್ರಯತ್ನ ನಿಷ್ಪಲವಾಗೋಯ್ತು..ಆಕೆ ತಬ್ಬಲಿ ಮಾಡೋದ ಕುಟುಂಬವನ್ನು ನೆನಪಿಸಿಕೊಂಡ್ರೆ ತುಂಬಾ ಸಂಕಟವಾಗುತ್ತೆ..ಆ ಗದ್ಗಿತವಾದ ಧ್ವನಿಯಲ್ಲೇನೋ ನೋವು..ಅಸಹಾಯಕತೆ…,ಅದನ್ನು ಕೇಳಿಸಿಕೊಳ್ಳುತ್ತಿದ್ದ ನಮ್ಮಲ್ಲೂ ದುಃಖ ಉಮ್ಮಳಿಸಿದ ಅನುಭವ.

ಅಂದ್ಹಾಗೆ ಇದು ಖಾಕಿಯೊಳಗಿನ ಮಾನವೀಯತೆಯೊಂದರ ಕಥೆ..ಆ ಅಧಿಕಾರಿ ತಮ್ಮ ಕರ್ತವ್ಯದ ಇತಿಮಿತಿಯಲ್ಲಿ ವ್ಯವಹರಿಸಿದಿದ್ದರೆ ಅವರ ಪಾಲಿಗೆ ಅದೊಂದು ಕೇಸ್ ಅಷ್ಟೇ..ತನಿಖಾಧಿಕಾರಿಯಾಗಿ ಪ್ರಕರಣಕ್ಕೆ ತಮ್ಮದೇ ಆದ ರೀತಿಯಲ್ಲಿ ಅಂತ್ಯ ಹಾಡಬಹುದಿತ್ತು.ಆದ್ರೆ ಕರ್ತವ್ಯದಾಚೆಗೆ ಮನುಷ್ಯತ್ವ ಮೆರೆದು ಮಾದರಿ ಎನಿಸಿಕೊಂಡಿದ್ದಾರೆ.ಖಾಕಿಯೊಳಗೂ ಹೃದಯ ಮಿಡಿಯೋ ಅಂತಃಕರಣ-ಮನಸು ಕಲಕೋ ಭಾವನಾತ್ಮಕತೆ..ಹೆಮ್ಮೆ ಪಡುವಂಥ ಸಂವೇದನೆ ಇರುತ್ತೆ ಎನ್ನುವುದಕ್ಕೆ ಮಾದರಿ ಎನಿಸಿಕೊಳ್ತಾರೆ ಈ ಇನ್ಸ್ ಪೆಕ್ಟರ್..

ನಾವು ಸಾಕಷ್ಟು ಪೊಲೀಸ್ ಅಧಿಕಾರಿಗಳ ಬಗ್ಗೆ ಸಕಾರಾತ್ಮಕವಾಗಿಯೂ ಬರೆದಿದ್ದೇವೆ..ಹೊಗಳಿದ್ದೇವೆ..ಹಾಗೆಯೇ ನಕಾರಾ ತ್ಮಕವಾಗಿಯೂ ಟೀಕಿಸಿದ್ದೇವೆ..ಅದೆಲ್ಲಾ ಪಾರ್ಟ್ ಆಫ್ ಜಾಬ್ ಬಿಡಿ..ಪೊಲೀಸ್ ಇಲಾಖೆ ಬಗ್ಗೆ ಒಂದಷ್ಟು ನೆಗೆಟಿವ್ ಎನ್ನುವಂಥ ಮಾತುಗಳಿದ್ರೂ ಸಾಕಷ್ಟು ಮಾನವೀಯ ಮೌಲ್ಯಗಳುಳ್ಳ ಅಧಿಕಾರಿ ಸಿಬ್ಬಂದಿಯಿದ್ದಾರೆ.ಆ ಪೈಕಿ ಜ್ಞಾನಭಾರತಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯ್ಕ ಕೂಡ ಒಬ್ಬರು.

ಜೀವನ್ಮರಣಗಳ ಹೋರಾಟದಲ್ಲಿ ಸಾವಿನ ಮುಂದೆ ಮಂಡಿಯೂರಿದ ಹನುಮಂತವ್ವ
ಜೀವನ್ಮರಣಗಳ ಹೋರಾಟದಲ್ಲಿ ಸಾವಿನ ಮುಂದೆ ಮಂಡಿಯೂರಿದ ಹನುಮಂತವ್ವ

ಇವರ ಸ್ಟೋರಿಯನ್ನು ಈ ಹಿಂದೆ “ಕನ್ನಡ ಫ್ಲಾಶ್ ನ್ಯೂಸ್ ಪತ್ರಿಕೆ ಪ್ರಕಟಿಸಿತ್ತು ಕೂಡ.ಇದಕ್ಕೆ ನಿರ್ಧಿಷ್ಟ ಕಾರಣವೂ ಇತ್ತು.ತನ್ನ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿ ಪತಿಯ ಸ್ನೇಹಿತನಿಂದ್ಲೇ ಕೊಲೆಯತ್ನಕ್ಕೆ ಸಿಲುಕಿ ಹನುಮಂತವ್ವ ಎಂಬಾಕೆ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದಳು.ಈ ಪ್ರಕರಣದಲ್ಲಿ ಹನುಮಂತವ್ವಳ ಮಗ ಪಾತಕಿಯ ವಿಕೃತಿಗೆ ಸ್ಥಳದಲ್ಲೇ ಹೆಣವಾಗಿದ್ದನು.

ಚಿನ್ನದ ಆಸೆಗಾಗಿ ತಾಯಿ-ಮಗನನ್ನೇ ಕೊಂದಾಕಿದ ಪಾತಕಿ
ಚಿನ್ನದ ಆಸೆಗಾಗಿ ತಾಯಿ-ಮಗನನ್ನೇ ಕೊಂದಾಕಿದ ಪಾತಕಿ

ಮೇಲ್ಕಂಡ ಪ್ರಕರಣದಲ್ಲಿ ಓರ್ವ ತನಿಖಾಧಿಕಾರಿಯಾಗಿ ತನ್ನ ಕರ್ತವ್ಯ ಮಾಡೋದಾಗಿದ್ರೆ ಲಕ್ಷ್ಮಣ್ ನಾಯ್ಕ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಕೈ ತೊಳೆದುಕೊಳ್ಳಬಹುದಿತ್ತು)ಬಹುತೇಕ ಪ್ರಕರಣಗಳಲ್ಲಿ ಹೀಗಾಗುತ್ತದೆ).ಆದ್ರೆ ಕಲ್ಲಿನಿಂದ ಜಜ್ಜಲ್ಪಟ್ಟ  ಹನುಮಂತವ್ವಳ ತಲೆ-ದೇಹ  ನೋಡುತ್ತಿದ್ದಂತೆ ಕ್ಷಣ ಸ್ಥಳದಲ್ಲೇ ಕಣ್ಣೀರಾಗಿದ್ದರಂತೆ ಲಕ್ಷ್ಮಣ್ ನಾಯ್ಕ.ಆ ಕ್ಷಣವೇ ಹನುಮಂತ ವ್ವಳನ್ನು ಬದುಕಿಸಿಕೊಳ್ಳಲೇಬೇಕೆನ್ನುವ ಪಣ ತೊಟ್ಟು,ಅದಕ್ಕಾಗಿ ಹಠಕ್ಕೆ ಬಿದ್ದವರಂತೆ ಎಲ್ಲಿಲ್ಲದ ಯತ್ನ ಮಾಡಿದ್ದರು. ಹನುಮಂ ತವ್ವಳ ದಯನೀಯ ಸ್ಥಿತಿ ಎಷ್ಟೋ ರಾತ್ರಿ ನಿದ್ದೆಯನ್ನು ತರಿಸಿರಲಿಲ್ಲ..ತಿಂಡಿ-ಊಟ-ನೆಮ್ಮದಿಯನ್ನು ಕಿತ್ತುಕೊಂಡುಬಿಟ್ಟಿತ್ತು.

ಈ  ಪ್ರಕರಣವನ್ನು ಆಧ್ಯತೆಯಾಗಿ ತೆಗೆದುಕೊಂಡ ಚಂದ್ರಾನಾಯ್ಕ ಈ ನಿಟ್ಟಿನಲ್ಲಿ ಮಾಡಿದ ಮೊದಲ ಕೆಲಸವೆಂದರೆ ಹನುಮಂತವ್ವಳನ್ನು  ತಮ್ಮ ಠಾಣಾ ಸಿಬ್ಬಂದಿ ಸಹಕಾರದೊಂದಿಗೆ ಆಸ್ಪತ್ರೆಗೆ ಸೇರಿಸಿದ್ದು.ತಾವು ಹಾಗು ತಮ್ಮ ಸಿಬ್ಬಂದಿ ಹಾಗೂ ಸಹೃದಯರ ನೆರವಿನೊಂದಿಗೆ 2  ಲಕ್ಷ ಕಲೆ ಹಾಕಿ ಚಿಕಿತ್ಸೆಗೆ ನೀಡಿದ್ರು.ಬಿಲ್ಡರ್ ನಿಂದ್ಲೂ ಒಂದಷ್ಟು ಹಣ ಸಂಗ್ರಹಿಸಿ ವೈದ್ಯರಿಗೆ ಕೊಟ್ಟು ಎಷ್ಟೇ ಖರ್ಚಾದ್ರೂ ಪರ್ವಾಗಿಲ್ಲ.ಹನುಮಂತವ್ವ ಬದುಕ್ಬೇಕು..ಹಣದ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ರು.ದಿನಕ್ಕೊಮ್ಮೆಯಾದ್ರೂ ಖುದ್ದು ಹನುಮಂತವ್ವಳನ್ನು ನೋಡಿಕೊಂಡು ಆಕೆಗೆ ಧೈರ್ಯ ಹೇಳಿ ಬರುತ್ತಿದ್ದರು.

30 ಗ್ರಾಂ ಚಿನ್ನಕ್ಕಾಗಿ ನಡೆದ ಕೃತ್ಯದಲ್ಲಿ ಪಾತಕಿ ಕ್ರೌರ್ಯಕ್ಕೆ ಬಲಿಯಾದ ಹನುಮಂತವ್ವಳ ಮಗ
30 ಗ್ರಾಂ ಚಿನ್ನಕ್ಕಾಗಿ ನಡೆದ ಕೃತ್ಯದಲ್ಲಿ ಪಾತಕಿ ಕ್ರೌರ್ಯಕ್ಕೆ ಬಲಿಯಾದ ಹನುಮಂತವ್ವಳ ಮಗ

ಲಕ್ಷ್ಮಣ ನಾಯ್ಕ ಎಂಥಾ ವಿಭಿನ್ನ ಮನಸ್ಥಿತಿಯ ಅಧಿಕಾರಿ ಎಂದರೆ,ಹನುಮಂತವ್ವಳ ಸ್ಥಿತಿಗೆ ಸ್ಪಂದಿಸಿದ ರೀತಿಯನ್ನು ಮೆಚ್ಚಿ ಒಂದಷ್ಟು ಕನ್ನಡಪರ ಸಂಘಟನೆಗಳು ಠಾಣೆಯಲ್ಲಿ ಅವರನ್ನು ಅಭಿನಂದಿಸಲು ಹೋಗಿದ್ವು.ಆದರೆ ಸನ್ಮಾನವನ್ನು ನಯವಾಗೇ ತಿರಸ್ಕರಿಸಿದ್ದ  ಅವರು,ಹನುಮಂತವ್ವ ಬದುಕಿ ಬರಲಿ,ಅದೇ ನನಗೆ ದೊಡ್ಡ ಸನ್ಮಾನ..ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ.ನೀವೂ ಹನುಮಂತವ್ವ ಬದುಕಿ ಬರಲಿ ಎಂದು ಬೇಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರೆನ್ನುವುದನ್ನು ನೆನಪಿಸಿಕೊಳ್ಳುತ್ತಾರೆ ವಂದೇಮಾತರಂ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ನಾಯ್ಕ.

ಇನ್ನು ಸ್ವಲ್ಪ ಚೇತರಿಸಿಕೊಳ್ಳುವಂತೆ ಕಂಡ್ರೂ ಹನುಮಂತವ್ವಳ ದೇಹ ಪಾತಕಿಯ ದಯನೀಯ ಕೃತ್ಯದಿಂದ ಸಂಪೂರ್ಣ ಜರ್ಝ ರಿತವಾಗಿತ್ತು.ದೇಹ ಸ್ತಿತಿ ಗಂಭೀರವಾದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ತಡ ಮಾಡದೆ ಆಕೆಯನ್ನು ನಿಮ್ಗಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು.ಅಲ್ಲಿ ಉತ್ತಮ ರೀತಿಯಲ್ಲೇ ಸ್ಪಂದಿಸಿದಂತೆ ಕಂಡ್ರೂ ಬೇರೆ ಆಸ್ಪತ್ರೆಗೆ ರೆಫರ್ ಮಾಡಲಾಯ್ತು.ಅಲ್ಲಿಂದ ಆಕೆಯನ್ನು ಕರೆತಂದದ್ದೇ ಬೌರಿಂಗ್ ಆಸ್ಪತ್ರೆಗೆ.

ಬಹುಷಃ ಹನುಮಂತವ್ವಳನ್ನು ಬೌರಿಂಗ್ ಬದಲು ಬೇರೆ ಆಸ್ಪತ್ರೆಗೆ ಕರೆದೋಯ್ದಿದ್ದರೆ ಬದುಕುಳಿಯಿತ್ತಿದ್ದಳೇನೋ..ಬಡವರೆಂದ್ರೆ ಕಾಲ ಕಸಕ್ಕಿಂತ ಕಡೆಯಾಗಿ ಕಾಣುವ ಇಲ್ಲಿನ ವೈದ್ಯರು ಅದರಲ್ಲೂ ಮಹೇಶ್(ಹೆಸರು ಬದಲಾಯಿಸಲಾಗಿದೆ) ಎನ್ನುವಂಥ ವೈದ್ಯ ತೋರಿದ ನಿರ್ಲಕ್ಷ್ಯದಿಂದ ಹನುಮಂತವ್ವ ಕೊನೆಯುಸಿರೆಳೆದಿದ್ದಾಳೆ.ಇಲ್ಲಿನ ವೈದ್ಯರು ಸ್ವಲ್ಪ ಮುತುವರ್ಜಿ ವಹಿಸಿ ಚಿಕಿತ್ಸೆ-ಶುಶ್ರೂಷೆ ಮಾಡಿದಿದ್ದರೆ ಹನುಮಂತವ್ವ ಖಂಡಿತಾ ಬದುಕುಳಿಯುತ್ತಿದ್ದಳೇನೋ..

ಆದ್ರೆ ಹಣ ಕೊಟ್ರೆ ಮಾತ್ರ ಚಿಕಿತ್ಸೆ ಎನ್ನುವ ನೀಚ ಮನಸ್ತಿತಿಯವರೇ ಹೆಚ್ಚಾಗಿರುವ ಈ ಆಸ್ಪತ್ರೆ ವೈದ್ಯರಿಂದಾಗಿ  ಹನುಮಂತವ್ವ ಅಸುನೀಗಿದ್ದಾಳೆ.ಆ ದಿನವಂತೂ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯ್ಕ ಅವರ ಮನೋವೇದನೆ ಮುಗಿಲುಮುಟ್ಟಿತ್ತು.ಆಸ್ಪತ್ರೆ ವೈದ್ಯರನ್ನು ಪರಿ ಪರಿಯಾಗಿ ಕೇಳಿಕೊಂಡ್ರೂ ಅವರಿಂದ ಸೂಕ್ತ ಸ್ಪಂದನೆ ಸಿಗಲೇ ಇಲ್ಲ.ಬಹುಷಃ ಬೌರಿಂಗ್ ಗೆ ಸೇರಿಸಿ ನಾನೇ ಹನುಮಂತವ್ವಳ ಸಾವಿಗೆ ಕಾರಣವಾದನಾ ಎನ್ನುವಂಥ ನೋವು ಕೂಡ  ಲಕ್ಷ್ಮಣ ನಾಯ್ಕ ಅವರನ್ನು ಕಾಡಿದ್ದಿರಬಹುದು.

ಮೂಲತಃ ಚಿತ್ರದುರ್ಗದವರಾದ ಲಕ್ಷ್ಮಣ್ ನಾಯ್ಕ ಗ್ರಾಮೀಣ ಹಿನ್ನಲೆಯುಳ್ಳವರಾಗಿರುವುದರಿಂದ್ಲೇ, ಹನುಮಂತವ್ವ ಎನ್ನೋ ಬಡ ಮಹಿಳೆ ಸಾವಿಗೆ,ಆಕೆಗಾದ ಅನ್ಯಾಯಕ್ಕೆ ಇಷ್ಟೊಂದು ಭಾವುಕರಾದ್ರಾ ಎನಿಸುತ್ತೆ.ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಕರಣಗಳನ್ನು ಹ್ಯಾಂಡಲ್ ಮಾಡಿದ್ದೇನೆ.ಆಗಲೂ ನನ್ನ ಮನಸು ಇಷ್ಟೊಂದು ನೊಂದಿರಲಿಲ್ಲ.ಆದ್ರೆ ಹನುಮಂತವ್ವಳ ಸಾವು ನನ್ನನ್ನು ಜೀವನಪರ್ಯಂತ ಕಾಡದೆ ಬಿಡೊಲ್ಲ ಎನ್ನುತ್ತಾರೆ ಲಕ್ಷ್ಮಣ ನಾಯ್ಕ..ಪೊಲೀಸ್ ಇಲಾಖೆ ಮಟ್ಟಿಗೆ ಲಕ್ಷ್ಮಣ ನಾಯ್ಕ  ತುಂಬಾ ಭಿನ್ನವಾಗಿ ನಿಲ್ಲೋದೇ ಈ ಕಾರಣಕ್ಕೆ.ಅವರಿಂದ ಇಂತದ್ದೇ ಮತ್ತಷ್ಟು ಕಾರ್ಯಗಳು ನಡೆಯುವಂತಾಗಲಿ ಎನ್ನೋದೇ “ಕನ್ನಡ ಫ್ಲಾಶ್ ನ್ಯೂಸ್’ ಆಶಯ.

Spread the love
Leave A Reply

Your email address will not be published.

Flash News