ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಆಸ್ತಿ ವಿವರ ಮುಚ್ಚಿಟ್ಟು ಅಧಿಕಾರಿಗಳಿಂದ ಕಳ್ಳಾಟ.. ಇವರಿಗೆ ಸರ್ಕಾರಿ ನಿಯಮಗಳೆನ್ನೋದು ಕಾಲಕಸಕ್ಕೆ ಸಮವಾಯ್ತಾ..

0

ಬೆಂಗಳೂರು:ಇದು ಸರ್ಕಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆ ಅಷ್ಟೇ ಅಲ್ಲ,ಸರ್ಕಾರಕ್ಕೆ ಮಾಡುತ್ತಿರುವ ಮಹಾವಂಚನೆ.ತಮಗೆ ಅನ್ನ ಕೊಡುವ ಸರ್ಕಾರದ ಘೋಷಿತ ನಿಯಮಗಳನ್ನು ಪಾಲಿಸದೆ ತಾವ್ ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ ಎನ್ನುವಂತೆ ಕಳ್ಳಾಟ ಮುಂದುವರೆಸಿರುವವರ ಹೆಡೆಮುರಿಕಟ್ಟದಿದ್ದರೆ ನಿಯಮಗಳೆನ್ನುವುದನ್ನು ಯಾವುದಕ್ಕೆ ನಿರೂಪಿಸಬೇಕು ಎನಿಸುತ್ತದೆ.

ಸಾರ್ವಜನಿಕ ಜೀವನದಲ್ಲಿರುವ ಚುನಾಯಿತರು,ಅಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ವಿವರ ಸಲ್ಲಿಸ ಬೇಕೆನ್ನುವ ನಿಯಮವಿದೆ.ಅದು ಪಾಲನೆಯಾಗದಿದ್ದರೆ ಅಂಥವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹು ದೆನ್ನುತ್ತದೆ ಕಾನೂನು..ಆದ್ರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾತ್ರ ಅದೆಲ್ಲಕ್ಕೂ ಅತೀತವಾಗಿದೆಯಾ..? ಗೊತ್ತಾಗ್ತಿಲ್ಲ..ಏಕೆಂದ್ರೆ ಮಂಡಳಿಯ ಸಾಕಷ್ಟು ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಯೇ ಇಲ್ಲ ಎನ್ನುವ ಮಾಹಿತಿ  ದೊರೆತಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಆಡಳಿತ ಎನ್ನೋದು ಹಳ್ಳ ಹಿಡಿದೋಗಿದೆ ಬಿಡಿ..ಅದನ್ನು ಸರಿಪಡಿ ಸೊಕ್ಕೆ ಆಗದಿರುವಷ್ಟು ಹಾಳಾಗಿ ಹೋಗಿದೆ.ಇಲ್ಲಿರುವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಉಡಾಳರು-ಉಡಾಫೆಯಿಂದ ಕೂಡಿದವರು ಎನ್ನುವುದಕ್ಕೆ ಆಸ್ತಿ ವಿವರ ಸಲ್ಲಿಸಲು ತೋರಿರುವ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವೇ ಸಾಕ್ಷಿ.ಯಾಕೆಂದ್ರೆ ಸಾಕಷ್ಟು ಅಧಿಕಾರಿಗಳು ಕಳೆದ ಐದಾರು ವರ್ಷಗಳಿಂದ್ಲು ಆಸ್ತಿ ವಿವರವನ್ನು ಸಲ್ಲಿಸಿಯೇ ಇಲ್ಲ.

ಸರ್ಕಾರಿ ಅಧಿಕಾರಿಗಳ ಆದಾಯ ಹಾಗೂ ಗಳಿಕೆಯ ಸಂಗತಿಗಳು ಪಾರದರ್ಶಕವಾಗಿರಬೇಕು..ಸಾರ್ವಜನಿಕವಾಗಿ ಲಭ್ಯವಾಗುವಂತಿರಬೇಕೆನ್ನುತ್ತದೆ ನಿಯಮ.ಇದನ್ನು ಪ್ರತಿಯೋರ್ವರು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ.ಅದನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆನ್ನುತ್ತದೆ ನಿಯಮ.ಇದನ್ನು ಪ್ರತಿಯೊಂದು ಇಲಾಖೆಯಲ್ಲೂ ಪಾಲಿಸುತ್ತಾ ಬರಲಾಗಿದೆ.ಪ್ರತಿ ವರ್ಷ ಸ್ವಯಂಪ್ರೇರಿತವಾಗಿ ಸಲ್ಲಿಕೆ ಮಾಡುವಂತೆಯೂ ಸೂಚಿಸಲಾಗಿದೆ.ಅದನ್ನು ಮಾಡದವರ ವಿರುದ್ಧ ನೊಟೀಸ್ ಕೂಡ ಸರ್ವ್ ಮಾಡಿ ಎಚ್ಚರಿಸಲಾಗ್ತದೆ.

ಆದ್ರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಎಲ್ಲವೂ ಉಲ್ಟಾಪಲ್ಟಾ..ಆಯಕಟ್ಟಿನ ಹುದ್ದೆಗಳಲ್ಲಿರುವ ಸಾಕಷ್ಟು ಅಧಿಕಾರಿಗಳು ಆಸ್ತಿ ವಿವರವನ್ನೇ ಸಲ್ಲಿಸಿಲ್ಲ..ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೂ ಹೋಗಿಲ್ಲ..ಅವರ ವರಮಾನ,ಗಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.ಅಧಿಕಾರಿಗಳಿಗೆ ಆಸ್ತಿ ವಿವರ ಸಲ್ಲಿಕೆಯ ಗಂಭೀರತೆಯೇ ಇಲ್ಲವೆನಿಸುತ್ತದೆ.ಈ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಮುಖ್ಯ ಆಡಳಿತಾಧಿಕಾರಿಯನ್ನು ಪ್ರಶ್ನಿಸಿತು.

ಇದು ನಿಜಕ್ಕೂ ಗಂಭೀರವಾದ ವಿಚಾರ..ಆಸ್ತಿ ವಿವರ ಸಲ್ಲಿಕೆ ಪ್ರತಿಯೋರ್ವ ಅಧಿಕಾರಿಯ ಬಾಧ್ಯಸ್ಥಿಕೆ ಹಾಗು ಹೊಣೆಗಾರಿಕೆ.ಅದನ್ನು ತಪ್ಪಿದ್ರೆ ಅದು ದೊಡ್ಡ ಪ್ರಮಾದವಾಗುತ್ತದೆ.ಇದನ್ನು ಮಂಡಳಿ ಗಂಭೀರವಾಗಿ ಪರಿಗಣಿಸಲಿದೆ.ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮುನ್ಸೂಚನೆ ನೀಡಲಾಗಿದ್ರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.ಹಾಗಾಗಿ ಈ ಕ್ಷಣವೇ ಅವರಿಗೆ ನೋಟಿಸ್ ಸರ್ವ್ ಮಾಡುವುದಾಗಿ ಹೇಳ್ತಾರೆ.

ಅದೇನೇ ಆಗಲಿ,ಆಡಳಿತ ವಿಭಾಗದವ್ರ ಸೂಚನೆ-ಎಚ್ಚರಿಕೆಯನ್ನೂ ಧಿಕ್ಕರಿಸಿ ಆಸ್ತಿ ವಿವರ ಸಲ್ಲಿಸದೆ ಅಧಿಕಾರಿಗಳು ಮೈಗಳ್ಳತನ ಹಾಗೂ ಕಳ್ಳಾಟ ಆಡುತ್ತಾರೆಂದ್ರೆ ಅವರ ಅಕ್ರಮ ಆಸ್ತಿ ಸಂಪಾದನೆಯ ಮೌಲ್ಯ ಹಾಗು ಅದರ ವೇಗ ಹೇಗಿರಬಹುದೆಂದು ಊಹಿಸಬಹುದು.

ಆಡಳಿತಾಧಿಕಾರಿಗಳ ಖಡಕ್ ಸೂಚನೆಗೆ ಮೈಗಳ್ಳರು ಮೊಂಡುತನ ಬಿಟ್ಟರೆ ಬಚಾವ್..ಇಲ್ಲದಿದ್ದರೆ ಇವರ ಬಲಿಹಾಕೊಕ್ಕೆ ಸಾಕಷ್ಟು ಜನ ಕಾದಿರೋದಂತೂ ಸತ್ಯ…ಕನ್ನಡ ಫ್ಲಾಶ್ ನ್ಯೂಸ್ ಕೂಡ ಕೆಲವೇ ದಿನಗಳಲ್ಲಿ ದಾಖಲೆ ಸಮೇತ ಆಸ್ತಿ ವಿವರ ಸಲ್ಲಿಸದ ಆ ಕಳ್ಳಾಟದ ಅಧಿಕಾರಿಗಳ ಬಂಡವಾಳವನ್ನು ವಿತ್ ಎವಿಡೆನ್ಟ್ ಬಯಲು ಮಾಡಲಿದೆ..  

Spread the love
Leave A Reply

Your email address will not be published.

Flash News