ಎಲ್ಲರಿಗೂ ಸಿಡಿ ಗುಮಾನಿ ಇರೋದೇ ಸೈನಿಕ ಯೋಗೀಶ್ವರ್ ಮೇಲೆ…ಸತ್ಯ ಹೊರಬರೋದು ಬಿಎಸ್ ವೈಗೂ ಇಷ್ಟ ಇಲ್ಲ ಅನ್ಸುತ್ತೆ..

0

ಬೆಂಗಳೂರು: ಈ ಗುಸು ಗುಸು..ಸತ್ಯವೇ ಆಗಿ ಸ್ಪೋಟಿಸಿದ್ದಲ್ಲಿ ರಾಜಕೀಯದಲ್ಲಿ ಅದೇನೇನ್ ಆಗ್ತದೋ..ಆ ದೇವ್ರಿಗೆ ಗೊತ್ತು..ಆದ್ರೆ ಸರ್ಕಾರದ ಸಧ್ಯದ ಮನಸ್ಥಿತಿ ಗಮನಿಸಿದ್ರೆ ಸರ್ಕಾರಕ್ಕೇಕೋ  ಸತ್ಯ ಹೊರಬಾರದಂತೆ  ತಡೆಯುವ ಆಲೋಚನೆ ಇದ್ಗಂತಿದೆ. ಆದ್ರೆ ಸತ್ಯ ಹೊರಬರಬೇಕಾದ್ರೆ ಒಂದು ಸಮಗ್ರ ತನಿಖೆ ನಡೆಯಲೇಬೇಕಾಗ್ತದೆ.ಇದು ಸರ್ಕಾರದ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆ-ವಿಶ್ವಾಸದ ಪ್ರಶ್ನೆಯೂ ಹೌದು..

ಸಧ್ಯ ರಾಜಕೀಯ ವಲಯದಲ್ಲಿ ಸೈನಿಕ ಯೋಗೀಶ್ವರ್ ಬಳಿ ಸಿ.ಡಿ ಇರುವುದು ಪಕ್ಕಾ ಅಂತೆ ಎನ್ನುವ ಮಾತುಗಳು ಕೇಳಿಬರುತ್ತಿವೆ.  ಬಹುತೇಕ ಸಚಿವರು  ಹಾಗೂ ಶಾಸಕರು ಆಫ್ ದಿ ರೆಕಾರ್ಡ್ ತಮ್ಮ ವಿಶ್ವಸನೀಯ ಮೂಲಗಳ ಜತೆ ಹಂಚಿಕೊಳ್ಳುತ್ತಿರುವ ಅಭಿಪ್ರಾಯ ಇದು…ಸಿ.ಡಿ ಯೋಗೀಶ್ವರ್ ಬಳಿಯೇ ಇದೆ..ಇದನ್ನೇ ಅಸ್ತ್ರವಾಗಿಟ್ಟುಕೊಂಡು ಅವರು  ಬ್ಲ್ಯಾಕ್ ಮೇಲ್ ಮಾಡಿ ಸಚಿವ  ಸ್ಥಾನ ಪಡೆದುಕೊಂಡವರೆನ್ನುವುದು ಲೇಟೆಸ್ಟ್ ವಿಚಾರ.

ಆಪರೇಷನ್ ಕಮಲದ ವೇಳೆ ಸಾಕಷ್ಟು ಉಪಕಾರ ಮಾಡಿದವ್ರು ಯೋಗೀಶ್ವರ್ ಎನ್ನುವ ಮಾತನ್ನು ಯಡಿಯೂರಪ್ಪ ಆಗಾಗ ಹೇಳುತ್ತಿದ್ದರು.ಹಾಗಾಗಿನೇ ಅವರು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಪಕ್ಷ ಸರಿಯಾದ ಕಾಲದಲ್ಲಿ ಮಾಡಲಿದೆ ಎಂದು ಹೇಳುತ್ತಲೇ ಇದ್ದರು. ಸೋತರೂ ಎಮ್ಮೆಲ್ಸಿ ಪದವಿ,ಜತೆಗೆ ಎಲ್ಲರ ವಿರೋಧದ ನಡುವೆಯೂ ಸಚಿವ ಸ್ಥಾನ ವೇ ಆ ಪ್ರತ್ಯುಪಕಾರ ಎನ್ನೋದು ಜಗಜ್ಜಾಹೀರಾಗಿದೆ.

ಆದ್ರೆ ಕೆಲವು ಮೂಲಗಳ ಪ್ರಕಾರ ಯಡಿಯೂರಪ್ಪ ಅವರ ಬಾಯಲ್ಲಿ ತಮ್ಮ ಪರವಾಗಿ ಮಾತನಾಡಿಸಿ ಸಚಿವ ಸ್ಥಾನದ ಬಗ್ಗೆಯೂ ಸೂಕ್ಷ್ಮತೆ ನೀಡುವಂತೆ ಮಾಡಿದ್ದೇ ಯೋಗೀಶ್ವರ್.ಕೇವಲ ಆಪರೇಷನ್ ಕಮಲಕ್ಕೆ ನೆರವಾದರೆನ್ನುವ ಕಾರಣಕ್ಕೆ ಅವರಿಗೆ ಇಷ್ಟೆಲ್ಲಾ ನೀಡಿದ್ದಾರೆ ಎಂದು ಒಪ್ಪಿಕೊಳ್ಳೊಕ್ಕೆ ನಾವೇನ್ ಕಿವಿಯಲ್ಲಿ ಲಾಲ್ ಭಾಗ್ ಇಟ್ಟುಕೊಂಡಿದ್ದೇವಾ..? ಯಾವುದೋ ವಿಚಾರವನ್ನು ಇಟ್ಟುಕೊಂಡು ಯೋಗೀಶ್ವರ್ ಈ ರೀತಿ ಮಾಡಿಸಿದ್ದಾರೆ..ಆ ವಿಚಾರವೇ ಈ ಸಿ.ಡಿ ಇರಬಹುದಾ ಎನ್ನುವ ಮಟ್ಟದ ವಿಶ್ಲೇಷಣೆ ನಡೆಯುತ್ತಿವೆ.

ಆ ಸಿ.ಡಿ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ್ದಾ..ಅಥವಾ ಸರ್ಕಾರಕ್ಕೆ ಸಂಬಂಧಿಸಿದ್ದಾ ಎನ್ನುವುದು ಸ್ಪಷ್ಟವಾಗದಿದ್ದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಯತ್ನಾಳ್ ಅವರಂಥ ಲೀಡರ್ಸ್ ಹೇಳುವ ಪ್ರಕಾರ ಆ ಸಿಡಿಯಲ್ಲಿ ನೋಡಲಿಕ್ಕಾಗದಷ್ಟು ಅಸಹ್ಯಕರ ವಿಚಾರಗಳಿವೆಯಂತೆ.ಇದನ್ನು ನೋಡಿದ್ರೆ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿರುವವರೊಬ್ಬರ ರಾಸಲೀಲೆಯಂಥ ವಿಚಾರಗಳೇನಾದ್ರೂ ಸಿಡಿಯಲ್ಲಿ ಅಡಗಿದೆಯಾ ಎನ್ನುವ ಶಂಕೆ ಬಲವಾಗುತ್ತೆ.

ಆದ್ರೆ ಇದೆಲ್ಲಾ ಸರಿ.,ಯೋಗೀಶ್ವರ್ ಅವರ ಬಳಿ ಸಿಡಿ ಇದ್ದಿದ್ದೇ ಆಗಿದ್ದಲ್ಲಿ ಅದು ಅವರಿಗೆ ಎಲ್ಲಿಂದ ಬಂತು..ಅದನ್ನು ಅವರೇ ಮಾಡಿಸಿದ್ರಾ..ಇದಕ್ಕೆ ಅವರು ವಿಪಕ್ಷದವರ ನೆರವು ಪಡೆದ್ರಾ..ಅಥವಾ ತಮ್ಮ ಪಕ್ಷದಲ್ಲಿರುವ ಅತೃಪ್ತರನ್ನೇ ಬಳಸಿಕೊಂಡ್ರಾ..ಎನ್ನುವ ಪ್ರಶ್ನೆ ಕಾಡುತ್ತೆ.ಹಾಗಾಗಿ ಈಗ ಸಿ.ಡಿ ಮೂಲದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಈಗ ಸಿ.ಡಿ ವಿಚಾರವನ್ನೇ ದಾಳವಾಗಿ ಬಳಸಿಕೊಳ್ಳೊಕ್ಕೆ ಮುಂದಾಗಿವೆ.ಇಲ್ಲಿ ಕುಮಾರಸ್ವಾಮಿಗೆ ಈ ಮೂಲಕವಾದ್ರೂ ತಮ್ಮ ರಾಜಕೀಯ ಶತೃ ಯೋಗೀಶ್ವರ್ ಅವರ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶವಿದ್ರೆ,ಕಾಂಗ್ರೆಸ್ ನದು, ಸರ್ಕಾರದ ಬಗ್ಗೆ ಸಾರ್ವಜನಿಕರು ತಿರುಗಿ ಬೀಳುವಂತೆ ಮಾಡುವ ಚಿಂತನೆ ಹಾಗಾಗಿ ಸಿ.ಡಿ ವಿಚಾರದ ಬಗ್ಗೆ ಕೂಲಂಕುಶ ತನಿಖೆ ಮಾಡಲಿ,ತನಿಖೆಗೇಗೆ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ ಎನ್ನುವ ಪ್ರಶ್ನೆ ಮಾಡಲಾಗ್ತಿದೆ.

ಸಿಡಿ ಇಲ್ಲದಿರುವುದೇ ನಿಜವಾದ್ರೆ ಈ ಬಗ್ಗೆ ತನಿಖೆ ಮಾಡಲು ಬಿಜೆಪಿ ಸರ್ಕಾರವೇಕೆ ಹಿಂದೇಟು ಹಾಕಬೇಕು… ಒಂದ್ವೇಳೆ ಸಿಡಿ ನಿಜವಾದ್ರೆ ಅದರೊಳಗಿನ ಮರ್ಮವನ್ನು  ಅರಿತುಕೊಳ್ಳಲು, ಸಾರ್ವಜನಿಕರಿಗೆ ಆ ಸತ್ಯಗಳು ಅನಾವರಣಗೊಳ್ಳಲಿ ಅಲ್ಲವೇ..? ಸಿ.ಡಿ ವಿಚಾರದ ಗೊಂದಲಕ್ಕೆ ತೆರೆ ಎಳೆಯಬೇಕಾದ್ರೆ ಸಮಗ್ರ ತನಿಖೆಗೆ ಸರ್ಕಾರ ಆದೇಶಿಸುವುದು ಒಳ್ಳೇದು..ಆಗಲೇ ಸಿ.ಡಿ ವಿಚಾರದಲ್ಲಿ ಸಿ.ಪಿ.ಯೋಗೀಶ್ವರ್ ಅಥವಾ ಇತರರ ಪಾತ್ರದ ಬಗ್ಗೆ ಇರುವ ಗೊಂದಲ ದೂರವಾಗೊಕ್ಕೆ ಸಾಧ್ಯ..?ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈ ನಿಟ್ಟಿನಲ್ಲಿ ಮನಸು ಮಾಡಬೇಕಿದೆ ಅಷ್ಟೇ..  

Spread the love
Leave A Reply

Your email address will not be published.

Flash News