ಹುಣಸೋಡು ದುರಂತಕ್ಕೆ ಕಾರಣ ಸ್ಪೋಟನೋ…ಭೂ ಕಂಪನನೋ.. ಬೆಳಕಿಗೆ ಬರಬೇಕಿರುವುದೇನು..? ಸಮಾಧಿ ಮಾಡಲಾಗ್ತಿರುವ ಸತ್ಯವೇನು..?  ಸ್ಪೋಟ ನಡೆಯುವಾಗ ಇದ್ದ ಮೂರು ಲಾರಿಗಳಲ್ಲಿ  ಉಳಿದ ಆ 2 ಎಲ್ಲೋದ್ವು..

0

ಶಿವಮೊಗ್ಗ:ಆತಂಕ ಇರುವುದೇ ಅಲ್ಲಿ..ಘಟನೆಗೆ ನೈಜವಾದ ಕಾರಣವೇ ಬೆಳಕಿಗೆ ಬಾರದೇ,ಯಾರದೋ ಹಿತಾಸಕ್ತಿಗೆ.. ಇನ್ನ್ಯಾರದೋ ಮರ್ಜಿಗೆ .ಸಮಾಧಿಯಾಗಿ ಬಿಡುತ್ತಾ ಎನ್ನೋದು.. ಶಿವಮೊಗ್ಗದ ಕೆಲ ರಾಜಕೀಯ ಶಕ್ತಿಗಳು ಆ ನಿಟ್ಟಿನಲ್ಲೇ ಪ್ರಭಾವ ಬೀರಲಾರಂಭಿಸಿವೆಯಂತೆ..ಹಾಗಾದ್ರೆ ತಪ್ಪೇ ಮಾಡದ ನಿಷ್ಪಾಪಿ ಜೀವಗಳ ಪ್ರಾಣಕ್ಕೆ ಬೆಲೆ ಇಲ್ಲವೇ..? ತಪ್ಪಿಗೆ ಕಾರಣವಾದ ಮಾಫಿಯಾಗಳಿಗೆ ಶಿಕ್ಷೆನೇ ಆಗೊಲ್ವೇ.? ದುರಂತಕ್ಕೆ ಕಾರಣವಾದವರಿಗೆ ತಕ್ಕ ಶಾಸ್ತಿಯಾಗಬೇಕೆಂಬ ನಿರೀಕ್ಷೆ ಇಟ್ಟುಕೊಂಡವರ ನೋವಿನ ಪ್ರಶ್ನೆಗಳಿವು..

ಹುಣಸೋಡು ದುರಂತವೇನೋ ನಡೆದೋಗಿದೆ..ಕೆಲವು ನಿಷ್ಪಾಪಿ ಜೀವಗಳು ಮಾಡದ ತಪ್ಪಿಗೆ ಬಲಿಯಾಗಿವೆ.ಆದ್ರೆ ಸ್ಪೋಟದ ಹಿಂದೆ ಸಾಕಷ್ಟು ಅನುಮಾನಗಳು ಕಾಡಹತ್ತಿವೆ..ನಿಜಕ್ಕೂ ಇದು ಕೇವಲ ಸ್ಪೋಟಕದಿಂದ ಸಂಭವಿಸಿದ ದುರಂತನಾ.ಅಥವಾ ಇದಕ್ಕೆ ಭಿನ್ನವಾದ ಮತ್ತ್ಯಾವುದಾದ್ರೂ ಕಾರಣವಿದೆಯೇ ಎನ್ನುವ ಪ್ರಶ್ನೆ ಕಾಡ ಹತ್ತಿದೆ.

ದುರಂತದ ಹಿನ್ನಲೆ ಬಗ್ಗೆ ಅನುಮಾನ ಮೂಡೊಕ್ಕೆ ಮುಖ್ಯ ಕಾರಣವೇ ಜಿಲ್ಲಾಡಳಿತ ಕೊಟ್ಟಿರುವ ಅಸ್ಪಷ್ಟ ಹೇಳಿಕೆ.ಮೊದಲು ಇದಕ್ಕೆ ಭೂ ಕಂಪನ ಎಂದು ಕಾರಣ ಕೊಡ್ತು. ಸುದ್ದಿಮಾದ್ಯಮಗಳು ಕೂಡ ಇದನ್ನೇ ಬಿಂಬಿಸಿದವು, ಸರ್ಕಾರದ ಜವಾಬ್ದಾರಿಯುತ ಇಲಾಖೆ  ಏನೆಂದು ಮಾಹಿತಿ ನೀಡಬಹುದು ಇದಕ್ಕೆ ಕಾರಣ ಎನ್ನಲಾದ  ಭೂ ಕಂಪನ ಹೇಗಾಯ್ತು.ಎಷ್ಟರ ಪ್ರಮಾಣದಲ್ಲಿ ಆಯ್ತು..ಎಂದು ಮಾಹಿತಿ ಕೊಡಬಹುದೆನ್ನುವಷ್ಟರಲ್ಲೇ   ಗಣಿಗಾರಿಕೆಗೆ ತಂದಿಟ್ಟ  ಬಾರಿ ಪ್ರಮಾಣದ  ಜಿಲೆಟಿನ್  ಸ್ಪೋಟಕ ವಸ್ತುಗಳೇ ಕಾರಣ ಎನ್ನಲಾಯ್ತು.

ಆಶ್ಚರ್ಯದ ಸುದ್ದಿ ಏನಂದ್ರೆ,ಶಿವಮೊಗ್ಗ ಬೆಳಗಾಗುವುದರೊಳಗೆ ದೇಶದ ಮನೆ ಮಾತಾಯ್ತು..ಪಾಪ ನಮ್ಮ  ದೇಶದ ಪ್ರದಾನಿ ಮತ್ತು ರಾಷ್ಟ್ರಪತಿಗಳು ಸಂತಾಪ ಸೂಚಿಸಿದ್ರು.ಈ ನಡುವೆ  ಬಾಂಬ್  ಸ್ಕ್ಬಾಡ್  ಬಂದು  ಪರಿಶೀಲಿಸಿದ್ವು.ನೂರಾರು  ಕಿಲೋಮೀಟರ್ ವರೆಗು ಬಂದಂಥ ಸ್ಪೋಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರ ಜತೆಗೆ ತನಿಖೆ ಮಾಡ್ತೇವೆಂದು ಹೇಳಿ ಹೊರಟು ಹೋಯ್ತು.

ಇನ್ನು ಈ ವಿಷಯದಲ್ಲಿ ಮಹತ್ವದ ಪಾತ್ರ ವಹಿಸ್ಬೇಕಿದ್ದ ಭೂ ವಿಜ್ಞಾನ ಇಲಾಖೆಯೂ ಅಡ್ಡಗೋಡೆ ಮೇಲೆ ದೀಪ ಇಟ್ಟಂಥ ಹೇಳಿಕೆ ಕೊಡ್ತು.ಭೂ ಕಂಪನವೇ ಆಗಿದ್ದದರೆ ತಕ್ಷಣವೇ     ರಿಕ್ಟರ್ ಮಾಪಕದಲ್ಲಿ   ಭೂ ಕಂಪನದ ಮಾಹಿತಿ ದಾಖಲಾಗಿರುವುದನ್ನು ಸ್ಪಷ್ಟಪಡಿಸಬೇಕಿತ್ತು.ಆದರೆ ಅದನ್ನೂ ಬಹಿರಂಗಪಡಿಸಲಿಲ್ಲ..ಇದಕ್ಕೆ ಕಾರಣವೇನೆಂಬುದು ಈವರೆಗೂ ಗೊತ್ತಾಗಲಿಲ್ಲ.

ಸತ್ಯಾಂಶ ಏನಂದ್ರೆ, ಸ್ಪೋಟದ ಸ್ಥಳದಲ್ಲಿ  ವಿದ್ಯುತ್ ಸಂಪರ್ಕವೆ ಇರಲಿಲ್ಲ. ಆದರು ಅಕ್ಕಪಕ್ಕದಲ್ಲಿದ್ದ ಕಾರ್ಮೀಕರು  ಹೇಗೆ ಅಲ್ಲಿಂದ ಬಚಾವ್ ಆದರು..?  ಅವರುಗಳು ರಾತ್ರಿ ಎಲ್ಲಿದ್ದರು..?  ಮಾಹಿತಿ ಸಿಕ್ಕೊಡನೆ ಪೋಲಿಸ್ ಇಲಾಖೆ  ರಾತ್ರಿಯಿಂದಲೇ   ಸದರಿ ಏರಿಯವನ್ನು ಸುತುವರಿಯಿತು..? ಅವರನ್ನು ಪೋಲಿಸರು  ಹೊರಕಳಿಸಿದ್ರಾ..? ಅಥವಾ ಅವರೇ  ಹೊರ  ಬಂದರೆ..?,  ಘಟನಾ  ಸ್ಥಳದಲ್ಲಿ    ಎಷ್ಡು ಜನ ಕಾರ್ಮಿಕರಿದ್ದರು..? ಎಂಬ ಮಾಹಿತಿಗಳೇ ಈವರೆಗೂ ಬಹಿರಂಗವಾಗಿಲ್ಲ.

ಇಷ್ಟಕ್ಕೆ ಪ್ರಶ್ನೆಗಳು ನಿಲ್ಲೊಲ್ಲ.. ನೂರಾರು ಜನ  ಉತ್ತರಭಾರತೀಯ ಕಾರ್ಮಿಕರನ್ನು   ಆ ಏರಿಯಗಳಿಂದ ಕರೆದು ತಂದು  ನಗರದಲ್ಲಿ   ಅಲ್ಲಲ್ಲಿ ಬಚ್ಚಿಟ್ಟಿರುವುದಾದರು ಯಾವಕಾರಣಕ್ಕೆ, ? ಯಾವ ಸಮಯದಲ್ಲಿ ಅವರನ್ನು ನಗರಕ್ಕೆ ಕರೆತರಲಾಯಿತು? ಆ ಕಾರ್ಮಿಕರು ಭಯದಲ್ಲಿ ಆತಂಕದಲ್ಲಿ   ಇರುವುದೇಕೆ?   ಪೋಲಿಸರ ಕಣ್ಷುತಪ್ಪಿಸಿ ಈ ಕಾರ್ಮಿಕರು  ನಗರಕ್ಕೆ ಬಂದರೆ ಅಥವಾ ಯಾವ ಪ್ರಭಾವಿ ಕ್ವಾರೆ ಮಾಲಿಕ ಇವರನ್ನು  ನಗರಕ್ಕೆ ಕರೆತಂದರು?

ಹೀಗೆ ಪ್ರಶ್ನಾವಳಿಗಳೇ ದುತ್ತೆಂದು ನಿಲ್ಲುತ್ತವೆ.ಘಟನೆ ಬಗ್ಗೆ  ಕೆಲವು ಸ್ಥಳಿಯರು ಹೇಳುವಂತೆ ಘಟನೆ ನಡೆದ ವೇಳೆ ಅಲ್ಲಿದ್ದುದು ಒಂದಲ್ಲ ಮೂರು ಲಾರಿಗಳಂತೆ.?. ಇದು ನಿಜವೇ  ಆಗಿದ್ದರೆ,  ಇನ್ನೆರೆಡು ಲಾರಿಗಳು ಎಲ್ಲೋದ್ವು…ಅವುಗಳನ್ನು ಎಲ್ಲಿ ಬಚ್ಚಿಡಲಾಗಿದೆ ? ಎನ್ನೋದು.

ಇನ್ನು ಅನುಮಾನ ಪೊಲೀಸ್ ಇಲಾಖೆ ಮೇಲೂ ಮೂಡುತ್ತೆ.. ಸಣ್ಣಪುಟ್ಟ ಕಳ್ಳತನಗಳಾದ್ರೂ ಪತ್ರಿಕಾ ಗೋಷ್ಠಿ ನಡೆಸಿ ಪೋಜ್ ಕೊಡುವ ಪೋಲಿಸ್ ಇಲಾಖೆ ಇಂತದ್ದೊಂದು ದುರಂತ ನಡೆದರೂ ಸೊಲ್ಲೆತ್ತಲಿಲ್ಲ.ಶಾಸಕರಾಗಲಿ, ಸಚಿವರಾಗಲಿ,    ಅಥವಾ ಜಿಲ್ಲಾಡಳಿತವೂ ಇದರ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಲಿಲ್ಲವೋ ಗೊತ್ತಾಗ್ತಿಲ್ಲ.

ಹೀಗೆ ಹುಣಸೋಡು ದುರಂತದ ಸುತ್ತ ನಾನಾ ಪ್ರಶ್ನೆಗಳ ಹುತ್ತವೇ ಬೆಳೆಯುತ್ತಿದ್ದರೂ ಸತ್ಯ ಹೊರಬರಬೇಕೆನ್ನುವ ಆಸಕ್ತಿಯಾಗಲಿ,ಕಾಳಜಿಯಾಗಲಿ ಯಾರೊಬ್ಬರಿಗೂ ಇಲ್ಲ..ಸಿಐಡಿ,ಸಿಬಿಐ ತನಿಖೆ ಹಾಳಾಗಿ ಹೋಗ್ಲಿ, ಸ್ಥಳೀಯ ಮಟ್ಟದಿಂದಲೂ ತನಿಖೆ ನಡೆಸುವ ಮಾತನ್ನು ಜವಾಬ್ದಾರಿಯುತರು ಹೇಳಲಿಲ್ಲ..ಇದೆಲ್ಲವನ್ನು ನೋಡಿದ್ರೆ ಯಾವೋ ಪಟ್ಟಭದ್ರ ಹಿತಾಸಕ್ತಿಗಳು ಪ್ರಕರಣದ ಸತ್ಯಾಸತ್ಯತೆ ಮುಚ್ಚೊಕ್ಕೆ ವ್ಯವಸ್ಥಿತವ ಪ್ರಯತ್ನ ಮಾಡುತ್ತಿವೆಯಾ ಎನಿಸುತ್ತದೆ.

ಇದೆಲ್ಲಾ ಸರಿ ಸಧ್ಯದ ಮಟ್ಟಿಗೆ ಕಾಡುತ್ತಿರುವ ಆತಂಕ ಘಟನೆಗೆ ಕಾರಣವಾದವ್ರು ದೊಡ್ಡವರ ಕೃಪಕಟಾಕ್ಷದಿಂದ ಬಚಾವಾಗಿಬಿಡುತ್ತಾರಾ..?ಅವರ ಅಕ್ರಮ ಮುಚ್ಚಿ ಹೋಗುತ್ತದೆಯೇ..? ಕಾಲಕ್ಕಿಂತ ದೊಡ್ಡ ಮುಲಾಮು ಮತ್ತೊಂದಿಲ್ಲ ಎನ್ನುವಂತೆ ಕಾಲಾನುಕ್ರಮದಲ್ಲಿ ಅಂತದ್ದೊಂದು ದುರಂತ ಶಿವಮೊಗ್ಗದಲ್ಲಿ ನಡೆದಿತ್ತೇ ಎಂದು ಪ್ರಶ್ನಿಸುವ ಮಟ್ಟದಲ್ಲಿ ಬೆಳವಣಿಗೆಗಳಾಗಿಬಿಡುತ್ತವಾ ಎಂಬ ಪ್ರಶ್ನೆ ಗಳು ಕಾಡಲಾರಂಭಿಸಿವೆ. 

Spread the love
Leave A Reply

Your email address will not be published.

Flash News