ಕೆಲವೇ ಕ್ಷಣಗಳಲ್ಲಿ ಐತಿಹಾಸಿಕ ಏರೋ ಇಂಡಿಯಾ-2021 ಗೆ ವಿದ್ಯುಕ್ತ ಚಾಲನೆ..

0

ಬೆಂಗಳೂರು: ಇನ್ನೇನು ಕೆಲವೇ ಕ್ಷಣಗಳಲ್ಲಿ ಇಡೀ ವಿಶ್ವವೇ ಎದುರು ನೋಡುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2021 ಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಕೊವಿಡ್ ಕಾರಣಕ್ಕೆ ಐದು ದಿನ ನಡೆಯುತ್ತಿದ್ದ ಪ್ರದರ್ಶನ  ಮೂರು ದಿನಕ್ಕೆ ಸೀಮಿತವಾಗಿದೆ.

ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದ ಏಷ್ಯಾದ ಅತಿದೊಡ್ಡ ಪ್ರದರ್ಶನ ಎಂದೇ ಕರೆಯಿಸಿಕೊಳ್ಳುವ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆ ಎಲ್ಲಾ ರೀತಿಯಲ್ಲೂ ಅನಿಯಾಗಿದ್ದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕೋವಿಡ್‌-19 ಮಹಾಮಾರಿಯ ನಡುವೆಯೂ ಯುರೋಪ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳು  ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗುತ್ತಿರುವುದು ವಿಶೇಷ.

‘ಆತ್ಮ ನಿರ್ಭರ ಭಾರತ’ ಮತ್ತು ‘ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯ ಪ್ರತಿಷ್ಠಿತ ಏರೋ ಇಂಡಿಯಾದಲ್ಲಿ ಭಾಗವಹಿಸಲು ಈಗಾಗಲೇ 78 ವಿದೇಶಿ ಕಂಪನಿಗಳು ಸೇರಿದಂತೆ 600ಕ್ಕೂ ಹೆಚ್ಚು ಕಂಪನಿಗಳ ಪ್ರದರ್ಶಕರು  ವಾಯುನೆಲೆಗೆ ಬಂದಿಳಿದಿದ್ದಾರೆ.

ಕಂಪೆನಿಗಳು ಮೂರು ದಿನಗಳ ಕಾಲ ಖರೀದಿ, ಪಾಲುದಾರಿಕೆ, ವಾಣಿಜ್ಯ ಒಪ್ಪಂದಗಳು, ಮಾಹಿತಿ ಮತ್ತು ತಂತ್ರಜ್ಞಾನ ವಿನಿಮಯ, ವಿವಿಧ ವಲಯಗಳಲ್ಲಿ ಪರಸ್ಪರ ಸಹಕಾರ, ಆಮದು ಮತ್ತು ರಫ್ತು ಕುರಿತು ಚರ್ಚೆ, ಸಂವಾದಗಳು ನಡೆಯಲಿವೆ.ಅಷ್ಟೇ ಅಲ್ಲ, ಸ್ಟಾರ್ಟ್‌ ಅಪ್‌ ಮತ್ತು ರಕ್ಷಣಾ ಕ್ಷೇತ್ರದ ಉದ್ಯಮಿಗಳಿಗೂ ಏರೋ ಇಂಡಿಯಾ ಪ್ರಮುಖವಾದ ವೇದಿಕೆಯಾಗಿದೆ.

ವೈಮಾನಿಕ ಪ್ರದರ್ಶನದ ಬಗ್ಗೆ ತೀವ್ರ ಆಸಕ್ತಿಯುಳ್ಳ  20,000 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ವರ್ಷಗಳಲ್ಲಿ 5 ದಿನಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುತ್ತಿದ್ದರು. ಪ್ರದರ್ಶನ ಸ್ಥಳಗಳಿಗೆ ಪ್ರದರ್ಶಕರು ಮತ್ತು ಪ್ರತಿನಿಧಿಗಳಿಗಷ್ಟೇ ಅವಕಾಶ ನೀಡಲಾಗುತ್ತದೆ.  

Spread the love
Leave A Reply

Your email address will not be published.

Flash News