ದೇಶದ ನಂ.1 ಚಾನೆಲ್ ನಿಂದ ಹೀನಸುಳಿಯ “ಚೀಫ್”ಗೆ ಕೊನೆಗು ಸಿಗ್ತು ಗೇಟ್ ಪಾಸ್…! ನೊಂದ ನೌಕರ ಸಿಬ್ಬಂದಿಗೆ ಹರ್ಷವೋ..ಹರ್ಷ..

0

ಬೆಂಗಳೂರು:ದೇಶದ ನಂಬರ್ ಒನ್ ಚಾನೆಲ್ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದ್ದ ಆ ನ್ಯೂಸ್ ಚಾನೆಲ್ ಗೆ ಅಂಟಿದ್ದ ಕಳಂಕ ದೂರವಾಗಿದೆ.ಚಾನೆಲ್ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೆಲಸಗಾರರಿಗೆಲ್ಲಾ ಸೋಡಾ ಚೀಟಿ ಕೊಡಿಸಿ, ವಿಕೃತಿ ಮೆರೆಯುತ್ತಿದ್ದ ಆ “ಹೀನಸುಳಿ”ಯಿಂದ ಚಾನೆಲ್ ಗೆ ಬಿಡುಗಡೆ ಸಿಕ್ಕಿದೆ. ವಿಕೃತ ಮನಸ್ಥಿತಿಯ ಚೀಫ್ ನ್ನು ಹೊರದಬ್ಬಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ನೊಂದಿದ್ದ ನೌಕರರಿಗೆಲ್ಲಾ ಹಾಲು ಕುಡಿದಷ್ಟೇ ಸಂತೋಷವಾಗಿದೆ.

ಇದು ನಿಜಕ್ಕೂ ದೇಶದ ಪ್ರತಿಷ್ಟಿತ ಚಾನೆಲ್ ವೊಂದರ ದುರಂತದ ಕಥೆ.ಇಲ್ಲಿ ಕೆಲಸಗಾರರಿಗಿಂತ ಚೀಫ್ ಗಳೇ ಹೆಚ್ಚು.ಹೋಗ್ಲಿ ಅವರಾದ್ರೂ ಯೋಗ್ಯರಾ..? ಹಾಗೆ ನೋಡಿದ್ರೆ ಬಹುತೇಕರಿಗೆ ಸಂಬಳ ಲಕ್ಷಗಳಲ್ಲಿ ಇದ್ದರೂ  ಚಾನೆಲ್ ಉದ್ಧಾರಕ್ಕೆ ಅವರ ಕಾಂಟ್ರಿಬ್ಯೂಷನ್ ಸೊನ್ನೆ..ಸೊನ್ನೆ..ಅಷ್ಟೇ. ಕೇವಲ ಗುಂಪುಗಾರಿಕೆಯಿಂದ್ಲೇ ಅವನತಿ ಅಂಚಿಗೆ ಬಂದು ನಿಂತ ಚಾನೆಲ್ ಇವತ್ತು ಅಸ್ಥಿತ್ವಕ್ಕಾಗಿ ಹೊಡೆದಾಡುವ ಸ್ಥಿತಿಯಲ್ಲಿದೆ.

ಕಳೆದ ಒಂದೂವರೆ ವರ್ಷದಿಂದೆ ಚಾನೆಲ್ ಗೆ ಬಂದು ವಕ್ಕರಿಸಿದ  ಆ ಚೀಫ್, ಫ್ರಮ್ ದಿ ಫಸ್ಟ್ ಡೇ ನಿಂದ ಮಾಡಲು ಶುರುಮಾಡಿ ದ್ದು ಕೆಲಸವಲ್ಲ..ಚಾನೆಲ್ ಉದ್ದಾರ ಮನಸಿದ್ದರೆ ಎಲ್ಲಾ ರಿಪೋರ್ಟರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿರುವ ಶಕ್ತಿ-ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿದ್ದರು.ಆದ್ರೆ ಆ ವಿಕೃತಿಗೆ ಇದ್ದಂತೆ ಕಂಡ ಒಂದೇ ಒಂದು ಇಂಟೆನ್ಷನ್ ಬ್ಯೂರೋದಲ್ಲಿರುವ ರಿಪೋರ್ಟಸ್ ನ್ನು ಕೆಲಸದಿಂದ ತೆಗೆದು ಬೀದಿಪಾಲು ಮಾಡಿ ಅದರಿಂದ ವಿಕೃತ ಆನಂದ ಅನುಭವಿಸುವುದೆನಿಸುತ್ತದೆ..ಹಾಗಾಗಿನೇ ಬಂದ ದಿನದಿಂದ್ಲೇ ತನ್ನ ತಲೆಯಲ್ಲಿ ಏನಿಲ್ಲದಿದ್ದರೂ ರಿಪೋರ್ಟರ್ಸ್ ಗಳು ಹೇಳುವ ಸ್ಟೋರಿ ಐಡ್ಯಾಗಳನ್ನೇ ಮೀಟಿಂಗ್ ನಲ್ಲಿ ತನ್ನ ಐಡ್ಯಾ ಎಂದು ಬಿಂಬಿಸಿ ಅವರ  ಮೇಲಿರುವ ಚೀಫ್ ಗಳಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳುತ್ತಿದ್ದ ಕ್ರಿಮಿ ಅದು.

ರಿಪೋರ್ಟರ್ಸ್ ಗಳನ್ನು ಡಮ್ಮಿಗಳೆಂದು ಬಿಂಬಿಸಿ ತಾನೇ ಐಡ್ಯಾ ಕೊಡಿಸಿ ಕೆಲಸ ತೆಗೆಸುತ್ತಿದ್ದೇನೆ ಎಂಬ ರೀತಿಯ ಸನ್ನಿವೇಶವನ್ನು ಸೃಷ್ಟಿಸಿದ ಹೀನಸುಳಿ ಅದು.ಈ ಕಾರಣದಿಂದ್ಲೇ “ಫರ್ಫಾಮೆನ್ಸ್ ಅನಾಲಿಸಿಸ್” ಎನ್ನುವ ನೆವವೊಡ್ಡಿ ರಿಪೋರ್ಟರ್ ಗಳನ್ನು ತಿಂಗಳಿಗೆ ಒಬ್ಬೊಬ್ಬರಂತೆ ಟಾರ್ಗೆಟ್ ಮಾಡಿದ ವಿಕೃತ ಜೀವಿ ಅದು.ಕಣ್ಣೀರು ಹಾಕಿಕೊಂಡು ರಾಜೀನಾಮೆ ಕೊಟ್ಟ ಪ್ರತಿಯೋರ್ವ ಬ್ರಿಲಿಯೆಂಟ್ ರಿಪೋರ್ಟರ್ ಹಿಡಿಶಾಪ ಹಾಕಿದ್ದು ಅಷ್ಟಿಷ್ಟಲ್ಲ..ನಮ್ಮ ಹೊಟ್ಟೆ ಹುರಿಸಿದ ಆ ಹೀನಸುಳಿ ಹಾಳಾಗಿ ಹೋದ ದಿನ ಹಾಲು ಕುಡಿಯುತ್ತೇವೆ ಎಂದು ನೊಂದು ನುಡಿದಿದ್ದರು.

ನೌಕರರ ಹಿಡಿಶಾಪ  ಆ ಹೀನಸುಳಿಗೆ ತಟ್ಟಿದೆ ಅನ್ನಿಸುತ್ತೆ.ಎಲ್ಲರ ನೆಮ್ಮದಿ ಹಾಳು ಮಾಡಿ( ಕೆಲಸದಿಂದ ತೆಗೆಸಿ ಬದುಕುಗಳನ್ನು ಹಾಳು ಮಾಡಿದೆ ಎಂದು ಆ ಕ್ರಿಮಿ ಸಂತಸಪಟ್ಟಿದ್ದರೆ,ಹಾಗೊಂದು ರೀತಿ ಆಲೋಚಿಸಿದ್ರೂ ಅದು ಅದರ ಮೂರ್ಖತನ.

ಏಕೆಂದ್ರೆ ಚಾನೆಲ್ ನಿಂದ ಹೊರಬಂದವರೆಲ್ಲಾ ಒಳ್ಳೊಳ್ಳೆ ಸಂಸ್ಥೆಗಳಲ್ಲೇ ಕೆಲಸ ಮಾಡುತ್ತಿದ್ದಾರೆ.ಈಗ ಕೆಲಸವಿಲ್ಲದೆ ಬೀದಿಗೆ ಬಿದ್ದಿರುವುದು ಆ ಕ್ರಿಮಿ ಮಾತ್ರ) ವಿಕೃತಿ ಆನುಭವಿಸಿದ್ದ  ಆ ಕೆಟ್ಟ ಹುಳು ಸಂಸ್ಥೆಯಿಂದ ಹೊರಬಿದ್ದಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.ತನ್ನ ಮೇಲಿರುವ ಗಂಭೀರ ಆರೋಪವೊಂದು ಭವಿಷ್ಯದಲ್ಲಿ ತನಗೆ ಮುಳುವಾಗಬ ಹುದೆನ್ನುವ ಎಚ್ಚರಿಕೆಯಿಂದ ಸಂಸ್ಥೆಯಿಂದ ಹೊರಬೀಳುವ ನಿರ್ಧಾರ ಕೈಗೊಂಡಿದೆ ಎನ್ನುವ ಮಾತಿದ್ದರೂ ಎಲ್ಲರನ್ನೂ ಕಳುಹಿಸಿ ತಾನೊಂದೇ ಆರಾಮಾಗಿ,ನೆಮ್ಮದಿಯಾಗಿ ಬದುಕಬಹುದೆನ್ನುವ ದುರಾಲೋಚನೆಯಲ್ಲಿದ್ದ ಆ ಜೀವಿಗೆ ಇಲ್ಲಿ ಯಾರೂ ಶಾಶ್ವತವಲ್ಲ ಎನ್ನುವ ಸತ್ಯ ಮನದಟ್ಟಾಗಿದೆ.

ಆಡಳಿತ ಮಂಡಳಿ ಚಾನೆಲ್ ನ ಉದ್ದಾರಕ್ಕೆ ಕೋಟಿಗಳಲ್ಲಿ ಹಣ ಬಿಡುಗಡೆ ಮಾಡುತ್ತಿದ್ದರೆ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತವರು ಆ ಹಣವನ್ನು ಅಗತ್ಯವೇ ಇಲ್ಲದ ಕಿತ್ತೋದ ಕಾರ್ಯಕ್ರಮಗಳಿಗೆ ಇನ್ವೆಸ್ಟ್ ಮಾಡಿ ತಿಂದು ತೇಗುತ್ತಿದ್ದಾರೆ.ಚಾನೆಲ್ ನಲ್ಲಿ ಮುಖ್ಯಸ್ಥರೆನಿಸಿಕೊಂಡ ಕೆಲವ್ರೇ ತಮ್ಮದೇ ಬೇನಾಮಿ ಹೆಸರಿನ ಸಂಸ್ಥೆಗಳಿಗೆ ಔಟ್ ಸೋರ್ಸ್ ನೀಡಿ ಅಲ್ಲಿಯೂ ಪರ್ಸಂಟೇಜ್ ಪೀಕುತ್ತಿರುವುದು ಮತ್ತೊಂದು ದೌರ್ಭಾಗ್ಯಪೂರ್ಣ.

ಪ್ರೀತಿ-ವಿಶ್ವಾಸದಿಂದ ಎಲ್ಲರನ್ನು ಮುನ್ನಡೆಸಿಕೊಂಡು ಹೋಗುವುದು ಚೀಫ್ ಕರ್ತವ್ಯ.ಅಂತದ್ದೊಂದು ಮನಸ್ಥಿತಿ ಅವರಿಗಿರಲೇಬೇಕಾಗುತ್ತದೆ.ಆದ್ರೆ ಯಾರಿಗೋ ಬಕೆಟ್ ಹಿಡಿದುಕೊಂಡು ದೊಡ್ಡ ಹುದ್ದೆ ಗಿಟ್ಟಿಸಿದಾಕ್ಷಣ ತಾನಾಡಿದ್ದೇ ಆಟ..ಹೂಡಿದ್ದೇ ಲಗ್ಗೆ..ತಾನು ಸುಪ್ರಿಂ ಉಳಿದವರೆಲ್ಲರೂ ತನ್ನ ಗುಲಾಮರಾಗಿರಬೇಕೆಂದು ಬಯಸುವ ಇಂಥಾ ಹೀನಮನಸ್ಥಿತಿಯ ಚೀಫ್ ಗಳ ವೃತ್ತಿ ಬದುಕಿನ ಅಂತ್ಯ ಇಷ್ಟು ದಾರುಣವಾಗಿದ್ದು ಮಾತ್ರ ವಿಪರ್ಯಾಸ..ಯಾರ ಬಕೆಟ್ ಹಿಡಿದು ಇಷ್ಟು ವರ್ಷ ದಿನ ದೂಡಿತ್ತೋ, ಆ ಕ್ರಿಮಿ ಬೆನ್ನಿಗೆ ಇವತ್ತು ಬೇರೆ ಯಾರೂ ಇಲ್ಲ..ಸಮಾಧಾನಿಸುವವರೂ ಅದರ ಸುತ್ತಮುತ್ತ ಒಬ್ಬರೂ ಇಲ್ಲ..ಅಯ್ಯೋ..ಪಾಪ ಎನ್ನುವವರೂ ಇಲ್ಲವಾಗಿರುವುದು ಮಾತ್ರ ಧಾರುಣ.

Spread the love
Leave A Reply

Your email address will not be published.

Flash News