ಬೆಂಗಳೂರು/ ಶಿವಮೊಗ್ಗ/ದಾವಣಗೆರೆ:ಪತ್ರಕರ್ತರಲ್ಲಿ ಹೋರಾಟ ಮನೋಭಾವವೇ ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಹೋರಾಟವನ್ನೇ ಉಸಿರಾಗಿಸಿಕೊಂಡ ಶಿವಮೊಗ್ಗ ಮೂಲದ ಪತ್ರಕರ್ತೆ  ಅನಿತಾ ಅವರಿಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಮೊದಲ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಪ್ರಜಾವಾಣಿ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿರುವ ಅನಿತಾ ಅವರ ಹೋರಾಟದ ಹಿನ್ನಲೆ ಹಾಗೂ ಮಹಿಳಾ ಪತ್ರಕರ್ತೆಯಾಗಿ ಮಾದರಿ ಸೇವೆ ಸಲ್ಲಿಸುತ್ತಿರುವ ಸಂಗತಿಗಳನ್ನು ಪರಿಗಣಿಸಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೂಲತಃ ಶಿವಮೊಗ್ಗದವರಾದ ಅನಿತಾ ವಿದ್ಯಾರ್ಥಿದಿಸೆಯಲ್ಲಿ ಸಾಮಾಜಿಕ ಬದ್ಧತೆಯ ಚಳುವಳಿ ಹಾಗೂ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.ಮಹಿಳಾಪರವಾದ ಅನೇಕ ಚಳುವಳಿಗಳಲ್ಲಿ ಭಾಗವಹಿಸಿ ಅನೇಕ ಬದಲಾವಣೆಗಳಿಗೆ ಕಾರಣವಾದವರು.ಬರವಣಿಗೆಯ ಹವ್ಯಾಸ ಇದ್ದುದ್ದರಿಂದ ಪ್ರಜಾವಾಣಿ ಪತ್ರಿಕೆ ಅವರನ್ನು ಕೈ ಬೀಸಿ ಕರೆಯಿತು.ಬೆಂಗಳೂರು ಕೇಂದ್ರ ಕಚೇರಿಯಿಂದ ತಮ್ಮ ವೃತ್ತಿಯನ್ನು ಆರಂಭಿಸಿ ದಶಕಗಳೇ ಕಳೆದಿವೆ.ಪ್ರಸ್ತುತ ಶಿವಮೊಗ್ಗ ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅನಿತಾ ಅವರು ಪತ್ರಕರ್ತೆಗಿಂತ ಒಬ್ಬ ಹೋರಾಟಗಾರ್ತಿಯಾಗಿ ಹೆಚ್ಚು ಗುರುತಿಸಿಕೊಂಡವರು.ದುಡಿಸಿಕೊಂಡವರು.ಮಹಿಳಾಪರವಾದ ಅವರ ಹೋರಾಟಗಳು ಇವತ್ತಿಗೂ ಶಿವಮೊಗ್ಗದಲ್ಲಿ ಹೆಸರುವಾಸಿ.ಮಹಿಳೆಯರಿಗೆ ಸಿಗಬೇಕಾದ ಸಾಮಾಜಿಕ ಹಾಗೂ ಇತರೆ ಸ್ಥಾನಮಾನಗಳಿಗೆ ಹೋರಾಡಿ ಹೆಸರಾದವರು.ಪತ್ರಕರ್ತೆಯಾದ ಮೇಲೂ ತಮ್ಮ ಬರಹವನ್ನೇ ವೇದಿಕೆಯಾಗಿಸಿಕೊಂಡು ಮಹಿಳಾಪರವಾದ ನಿಲುವನ್ನು ಪ್ರತಿಪಾದಿಸುತ್ತಲೇ ಬಂದವರು.

ಅವರ ಸೇವೆಯನ್ನು ಗುರುತಿಸಿ  ಕರ್ನಾಟಕ ಪತ್ರಕರ್ತೆಯರ ಸಂಘ  ಅಸ್ಥಿತ್ವಕ್ಕೆ ಬಂದ ಆರಂಭದಲ್ಲೇ   ಮೊದಲ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಪ್ರಶಸ್ತಿಯ ಘನತೆ ಹೆಚ್ಚಿಸಿದೆ.ಅನಿತಾ ಅವರಿಗೆ ಪ್ರಶಸ್ತಿ ಸಂದಾಯವಾಗಿರುವುದಕ್ಕೆ ಶಿವಮೊಗ್ಗದ ಪತ್ರಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.ಅವರ ಸೇವೆ ಇನ್ನಷ್ಟು ಬದಲಾವಣೆಗಳಿಗೆ ಕಾರಣವಾಗುವಂತಾಗಲಿ ಎಂದು ಹಾರೈಸಿದ್ದಾರೆ.ಕನ್ನಡ ಫ್ಲ್ಯಾಶ್‌  ನ್ಯೂಸ್‌ ಕೂಡ ಅನಿತಾ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ.

Spread the love

Leave a Reply

Your email address will not be published. Required fields are marked *