ಧೋನಿ ಕ್ಯಾಪ್ಟನ್​ ಶಿಪ್ ನಲ್ಲಿ ಸಿಎಸ್‌ಕೆ ತಂಡದ ತಾಲೀಮು ಶುರು..!

0

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಏಪ್ರಿಲ್ 9ರಿಂದ ಆರಂಭಗೊಳ್ಳಲಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ನಗದು ಶ್ರೀಮಂತ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿವೆ. ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ಅಭ್ಯಾಸ ಆರಂಭಿಸಿದೆ.ಮೂರು ಬಾರಿ ಐಪಿಎಲ್ ಚಾಂಪಿಯನ್ಸ್ ಎನಿಸಿರುವ, ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಮಾರ್ಚ್ 9ರ ಮಂಗಳವಾರದಿಂದ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿವೆ. ವರದಿಯ ಪ್ರಕಾರ, ಕ್ವಾರಂಟೈನ್‌ನಲ್ಲಿದ್ದ ಆಟಗಾರರ ಕೊರೊನಾ ಪರೀಕ್ಷೆ ಪಾಸ್ ಎನಿಸಿದ ಬಳಿಕ ಸಿಎಸ್‌ಕೆ ನೆಟ್ ಅಭ್ಯಾಸ ಶುರು ಮಾಡಿದೆ.

ಧೋನಿ ಸೇರಿಸಿ ಸಿಎಸ್‌ಕೆ ಇತರ ಪ್ರಮುಖ ಆಟಗಾರರಾದ ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಎನ್‌ ಜಗದೀಶನ್, ಆರ್‌ ಸಾಯ್‌ ಕಿಶೋರ್, ಸಿ ಹರಿ ನಿಶಾಂತ್, ಹರಿಶಂಕರ್ ರೆಡ್ಡಿ ಅಭ್ಯಾಸದ ವೇಳೆ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.ಸಿಎಸ್‌ಕೆ ತನ್ನ ಕ್ವಾರಂಟೈನ್‌ ಅಗತ್ಯತೆಗಳನ್ನು ಪೂರೈಸಿದೆ. ನೆನ್ನೆಯಿಂದ ತಂಡದ ಅಭ್ಯಾಸ ಆರಂಭಗೊಂಡಿದೆ. ಕ್ವಾರಂಟೈನ್ ಅವಧಿ ಪೂರ್ಣಗೊಂಡ ಬಳಿಕ ಉಳಿದ ಇನ್ನೊಂದಿಷ್ಟು ಆಟಗಾರರು ಕ್ಯಾಂಪ್‌ ಸೇರಿಕೊಳ್ಳಲಿದ್ದಾರೆ,’ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ. ಈ ಬಾರಿ ಭಾರತದ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಕೂಡ ಸಿಎಸ್‌ಕೆ ಪರ ಆಡುತ್ತಿದ್ದಾರೆ.

Spread the love
Leave A Reply

Your email address will not be published.

Flash News