ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು ಗೊತ್ತಾ..?

0

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ನಂತರ ಯಾವ ಸಿನಿಮಾ ಮಾಡ್ತಿದ್ದಾರೆ ಗೊತ್ತಾ..? ಯಶ್ ಹೊಸ ಸಿನಿಮಾವನ್ನು ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನ ಮಾಡುತ್ತಿದ್ದು, ಇದನ್ನು ಖುದ್ದು ನರ್ತನ್ ಸ್ಪಷ್ಟಪಡಿಸಿದ್ದಾರೆ. ‘ಸದ್ಯ ಯಶ್ ಜೊತೆಗಿನ ಹೊಸ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ  ಬ್ಯುಸಿಯಾಗಿದ್ದೇನೆ. ನನ್ನ ಮುಂದಿನ ಸಿನಿಮಾ ಶಿವಣ್ಣ ಜೊತೆಗೆ ಭೈರತಿ ರಣಗಲ್’ ಎನ್ನುತ್ತಾರೆ ನಿರ್ದೇಶಕ ನರ್ತನ್. ನರ್ತನ್ ನಿರ್ದೇಶನದ ಯಶ್ ಹೊಸ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿವೆ. ಎರಡೆರಡು ಬಿಗ್ ಬಜೆಟ್ ಸಿನಿಮಾಗಳನ್ನು  ಒಟ್ಟೊಟ್ಟಿಗೆ ನಿರ್ವಹಿಸುವುದು ಕಷ್ಟಎಂಬ ಕಾರಣಕ್ಕೆ ನರ್ತನ್ ಈಗ ಮೊದಲೇ ಒಪ್ಪಿಕೊಂಡಿರುವ ಯಶ್ ಸಿನಿಮಾದ ಕೆಲಸ ಮುಂದುವರಿಸಲು ಯೋಜಿಸಿದ್ದಾರೆ. ಈ ಸಿನಿಮಾದ ನಂತರ ಡಾ. ಶಿವರಾಜ್ ಕುಮಾರ್ ಸಿನಿಮಾ ಹೊರಬರಲಿದೆ. ಯಶ್ ಅವರ ಜತೆಗಿನ ಹೊಸ ಪಕ್ಕಾ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಹೆಸರು ಜಟಾಕ್ಷ ಎಂಬ ರೂಮರ್ ಹಬ್ಬಿತ್ತು. ನಾಯಕಿ ತಮನ್ನಾ ಆಗ್ತಾರೆ ಎಂಬ ಮಾತೂ ಇದೆ. ಆದರೆ ಇದೆಲ್ಲ ಸತ್ಯಕ್ಕೆ ದೂರವಾದ ವಿಚಾರ. ಸಿನಿಮಾದ ಟೈಟಲ್ ಇನ್ನೂ ನಿರ್ಧರಿಸಿಲ್ಲ. ನಾಯಕಿ ಪಾತ್ರ ಕೊನೆಯಲ್ಲಿ ಬರುವ ಕಾರಣ ನಾನಿನ್ನೂ ಆ ಭಾಗವನ್ನು ಬರೆದೇ ಇಲ್ಲ. ಮುಂದಿನ ತಿಂಗಳು ಯಶ್ ಅವರ ಪಾತ್ರದ ಬಗ್ಗೆ ಕಥೆಯ ಬಗ್ಗೆ, ಶೂಟಿಂಗ್ ವಿವರಗಳ ಬಗ್ಗೆ ಅಪ್ಡೇಟ್ಸ್ ಹೇಳುತ್ತೇನೆ ಎಂದಿದ್ದಾರೆ .

Spread the love
Leave A Reply

Your email address will not be published.

Flash News