ಸಿಲಿಕಾನ್ ಸಿಟಿಯಲ್ಲಿ ರಾತ್ರೋರಾತ್ರಿ ಅಡುಗೆಗಾಗಿ ಮರ್ಡರ್..!

0

ಬೆಂಗಳೂರು: ಕೋಪದ ಕೈಗೆ ಬುದ್ದಿ ಕೊಡಬಾರದು ಎಂಬ ಮಾತು ಅದೆಷ್ಟು ಸತ್ಯ ಅನ್ನೋದು ಈ ಭೀಕರ ಘಟನೆಯಿಂದ ಸಾಭೀತಾಗಿದೆ. ಕೇವಲ ಒಂದು ಅಡುಗೆ ವಿಚಾರವಾಕ್ಕೆ ಬಾಣಸಿಗರಿಬ್ಬರ ನಡುವೆ ಮಾರಾಮಾರಿಯೇ ನಡೆದುಹೋಯ್ತು. ಬೆಂಗಳೂರಿನ ವಾಲ್ ಸ್ಟ್ರೀಟ್ ಪಬ್ ನಲ್ಲಿ ಸಾಗರ್ ಮತ್ತು ಮೌಸಿಕ್ ಶೆಫ್ ಗಳಾಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ 20 ರ ತಡರಾತ್ರಿ ಅಡುಗೆ ವಿಚಾರವಾಗಿ ಇಬ್ಬರ ಮಧ್ಯೆ ಶುರುವಾದ ಜಗಳ ಸಾಗರ್ ನ ಕೊಲೆಯಲ್ಲಿ ಅಂತ್ಯವಾಗಿದೆ. ಸಾಗರ್ ಹಾಗೂ ಮೌಸಿಕ್ ನಡುವೆ ಅಡುಗೆ ತಯಾರಿಸುವ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಕೋಪಗೊಡ ಮೌಸಿಕ್, ಅಲ್ಲೇ ಇದ್ದ ಚಾಕು ತಗೊಂಡು ಸಾಗರ್ ನ ಹೊಟ್ಟೆ ಹಾಗೂ ಎದೆಯ ಭಾಗವನ್ನು ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಸಾಗರ್ ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಂತೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾಗರ್ ಕೊನೆಯುಸಿರೆಳೆದಿದ್ದಾನೆ. ಘಟನೆಯ ಬಳಿಕ ಮೌಸಿಕ್ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮೌಸಿಕ್ ಗಾಗಿ ಹುಡುಕಾಡುತ್ತಿದ್ದು ಜೆಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಛೇ ಆಫ್ಟ್ರಾಲ್ ಒಂದು ಅಡುಗೆ ವಿಷಯಕ್ಕೆ ಕೊಲೆಯಾದ ಸಾಗರನ ಸಾವು ನ್ಯಾಯಾನ?

Spread the love
Leave A Reply

Your email address will not be published.

Flash News