IPL 2021 ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಟ್ ಸೆಟ್ ರೆಡಿ..

0

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಪ್ರಿಲ್ 1ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳಲಿದ್ದಾರೆ. ಚೆನ್ನೈನಲ್ಲಿ ಆರ್‌ಸಿಬಿ ಅಭ್ಯಾಸ ಆರಂಭಿಸಿದ ಎರಡು ದಿನಗಳ ಬಳಿಕ ಕೊಹ್ಲಿ ಆರ್‌ಸಿಬಿ ಸೇರಿಕೊಳ್ಳಲಿದ್ದಾರೆ.
2021ರ ಐಪಿಎಲ್ ಟೂರ್ನಿ ಆರಂಭದೊಂದಿಗೇ ಆರ್‌ಸಿಬಿ ಸ್ಪರ್ಧೆಗಳು ಶುರುವಾಗಲಿವೆ. ಟೂರ್ನಿ ಉದ್ಘಾಟನೆ ಪಂದ್ಯ ನಡೆಯುವ ಏಪ್ರಿಲ್ 9ರಂದು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯ ಚೆನ್ನೈನಲ್ಲಿ ನಡೆಯಲಿವೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ತೃತೀಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ 7 ರನ್‌ಗಳ ರೋಚಕ ಜಯ ದಾಖಲಿಸಿತ್ತು.
ಅಂತಾರಾಷ್ಟ್ರೀಯ ಸರಣಿ ಮುಗಿದು ವಿಶ್ರಮಿಸಲು ಟೀಮ್ ಇಂಡಿಯಾ ಆಟಗಾರರಿಗೆ ಸಾಧ್ಯವಾಗುತ್ತಿಲ್ಲ. ಬಿಡುವೇ ಇಲ್ಲದೆ ಐಪಿಎಲ್‌ಗೆ ಸಿದ್ಧತೆ ಮಾಡಬೇಕಾಗಿದೆ. ಇಂಗ್ಲೆಂಡ್, ಇನ್ನಿತರ ಕೆಲ ದೇಶಗಳ ಆಟಗಾರರಿಗೂ ಇದೇ ಪಾಡು.
ಇಂಗ್ಲೆಂಡ್ ಸರಣಿ ಮುಗಿದಿದ್ದರಿಂದ ಪುಣೆ ಬಯೋಬಬಲ್ ತೊರೆದಿರುವ ಕೊಹ್ಲಿ, ಐಪಿಎಲ್ ಬಯೋಬಬಲ್ ಪ್ರವೇಶಿಸಿದ್ದಾರೆ. ಕಳೆದ ಜನವರಿ ಕೊನೆಯಿಂದಲೂ ಕೊಹ್ಲಿ ಬಯೋಬಬಲ್ ಒಳಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸುದೀರ್ಘ ಸರಣಿಯಿಂದಾಗಿ ಕೊಹ್ಲಿ ಬಯೋಬಬಲ್ ಒಳಗಿರಬೇಕಾಗಿ ಬಂದಿತ್ತು. ಇನ್ನು ಸುಮಾರು ಒಂದೂವರೆ ತಿಂಗಳ ಕಾಲ ಐಪಿಎಲ್ ಹಬ್ಬ ನಡೆಯಲಿದೆ.

Spread the love
Leave A Reply

Your email address will not be published.

Flash News