ಅಪ್ಪು ಬಾಲಿವುಡ್ ಗೆ ಎಂಟ್ರಿ..! ಯಾವಾಗ?

0

ದಕ್ಷಿಣ ಭಾರತದ ನಟ-ನಟಿಯರು ಬೇರೆ ಭಾಷೆ ಸಿನಿಮಾಗಳಿಗೆ ಹೋಗಿ ನಟಿಸೋದು ಇದೇ ಮೊದಲೇನೆಲ್ಲ. ಕನ್ನಡದ ಅನೇಕ ನಟ-ನಟಿಯರು ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ತಮ್ಮ ಛಾಪು ಮೂಡಿಸಿ ಬಂದಿದ್ದಾರೆ. ಕನ್ನಡದಲ್ಲಿ ಫ್ಯಾಮಿಲಿ ಆಡಿಯನ್ಸ್​ನ ಮೆಚ್ಚಿನ ನಾಯಕ ಪುನೀತ್​ ರಾಜ್​ಕುಮಾರ್​ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸೋದು ಯಾವಾಗ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪುನೀತ್ ರಾಜ್​ಕುಮಾರ್​ ಅವರೇ​ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆಜಾನ್​ ಪ್ರೈಮ್​ ನಡೆಸಿದ ವರ್ಚುವಲ್ ಮೀಟಿಂಗ್​​ನಲ್ಲಿ ಯುವರತ್ನ ಟೀಮ್ ಮಾತನಾಡಿದೆ. ಈ ವೇಳೆ ಬಾಲಿವುಡ್ ಹಾಗು ಪ್ಯಾನ್ ಇಂಡಿಯಾದಲ್ಲಿ ನಟಿಸುವ ಬಗ್ಗೆ ಪುನೀತ್ ರಾಜ್​​ಕುಮಾರ್ ಕೂಡ ಮಾತನಾಡಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪುನೀತ್​, ಒಂದೊಮ್ಮೆ ಮುಂದಿನ ದಿನಗಳಲ್ಲಿ ಪ್ಯಾನ್​ ಇಂಡಿಯಾ ಅಥವಾ ಬಾಲಿವುಡ್​ನಿಂದ ಆಫರ್​ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ ಎಂದಿದ್ದಾರೆ. ಬೇರೇ ಭಾಷೆಗಳಿಂದ ಬರುವ ಪಾತ್ರ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡಿರುವ ಪುನೀತ್​, ಲೀಡ್​ ರೋಲ್​ನಲ್ಲೇ ನಟಿಸಬೇಕು ಎಂದೇನೂ ಇಲ್ಲ. ಪಾತ್ರ ತೂಕದ್ದಾಗಿದ್ದರೆ ಸಾಕು ಎಂದು ಹೇಳಿದ್ದಾರೆ. ಈ ಮೂಲಕ ಅವರು ಪಾತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.

Spread the love
Leave A Reply

Your email address will not be published.

Flash News