IPL 2021: ಡೆಲ್ಲಿ ಗೆಲುವಿನ ಶುಭಾರಂಭ; ಹಳಿ ತಪ್ಪಿದ ಚೆನ್ನೈ..

0

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ನಾಯಕರಾದ ಪದಾರ್ಪಣೆ ಪಂದ್ಯದಲ್ಲಿ ರಿಷಭ್ ಪಂತ್ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ ಗುರು ಮಹೇಂದ್ರ ಸಿಂಗ್ ಧೋನಿಗೆ ಮೊದಲ ಪಂದ್ಯದಲ್ಲೇ ಸೋಲಿನ ರುಚಿ ತೋರಿಸಿದ್ದಾರೆ. 189 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ನೆರವಾದರು. ಪರಿಣಾಮ ಬೃಹತ್ ಗುರಿಯನ್ನು ಇನ್ನು ಎಂಟು ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಚೆನ್ನೈ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಪರಿಣಾಮ ಪವರ್ ಪ್ಲೇನಲ್ಲಿ 65 ರನ್‌ಗಳು ಹರಿದು ಬಂದಿದ್ದವು. ಇಲ್ಲಿಗೂ ಧವನ್-ಪೃಥ್ವಿ ಅಬ್ಬರ ಮುಗಿಯಲಿಲ್ಲ. ವಾಂಖೆಡೆ ಮೈದಾನದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ನೋಡ ನೋಡುತ್ತಿರುವಂತೆಯೇ ತಂಡದ ಮೊತ್ತವು 10 ಓವರ್‌ಗಳಲ್ಲಿ 99 ರನ್ ತಲುಪಿದ್ದವು. ಪೃಥ್ವಿ ಕೇವಲ 27 ಎಸೆತಗಳಲ್ಲಿ ಹಾಗೂ ಧವನ್ 35 ಎಸೆತಗಳಲ್ಲಿ ಅರ್ಧಶತಕಗಳನ್ನು ಪೂರ್ಣಗೊಳಿಸಿದರು. ಅತ್ತ ನಾಯಕ ಧೋನಿ ಯೋಜನೆಗಳೆಲ್ಲ ತಲೆಕೆಳಗಾದವು. ಧವನ್ ಹಾಗೂ ಪೃಥ್ವಿ ಜೋಡಿ ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದರು. ಕೊನೆಗೂ ಈ ಜೊತೆಯಾಟ ಮುರಿಯುವಲ್ಲಿ ಡ್ವೇನ್ ಬ್ರಾವೋ ಯಶಸ್ವಿಯಾದರು. ಆಗಲೇ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 138 ರನ್ ಪೇರಿಸಿದ್ದರು. 38 ಎಸೆತಗಳನ್ನು ಎದುರಿಸಿದ ಪೃಥ್ವಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು.

 

Spread the love
Leave A Reply

Your email address will not be published.

Flash News