IPL 2021: ರಸ್ಸೆಲ್ ಸಖತ್ ಬೌಲಿಂಗ್, ಮುಂಬೈ ಬ್ಯಾಟ್ಸ್​ಮನ್​ಗಳ ಪೆವಿಲಿಯನ್ ಪರೇಡ್; ಕೋಲ್ಕತ್ತಾಗೆ 153 ಟಾರ್ಗೆಟ್

0

ಚೆನ್ನೈ: ಮುಂಬೈ ಇಂಡಿಯನ್ಸ್ ತಂಡ 20 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್​ಗೆ 153 ಮೊತ್ತದ ಟಾರ್ಗೆಟ್ ನೀಡಿದೆ. ಕೋಲ್ಕತ್ತಾ ಪರ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ರಸ್ಸೆಲ್ 2 ಓವರ್ ಬೌಲ್ ಮಾಡಿ 15 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದ್ದಾರೆ. ಕಮಿನ್ಸ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದಾರೆ.

ಮುಂಬೈ ಪರ ಸೂರ್ಯಕುಮಾರ್ ಯಾದವ್ 56 (36) ಹಾಗೂ ನಾಯಕ ರೋಹಿತ್ ಶರ್ಮಾ 43 (32) ಹೊರತುಪಡಿಸಿ ಉಳಿದೆಲ್ಲರೂ ಎರಡಂಕಿ ದಾಟಲು ಪರದಾಡಿದ್ದಾರೆ. ಜಾನ್ಸೆನ್, ಬುಮ್ರಾ, ಬೋಲ್ಟ್ ಡಕ್​ಗೆ ಔಟ್ ಆಗಿದ್ದಾರೆ. ಮುಂಬೈ ದಾಂಡಿಗ ಸಮೂಹ ಪೆವಿಲಿಯನ್ ಪರೇಡ್ ನಡೆಸಿ ಕೋಲ್ಕತ್ತಾಗೆ ಕಡಿಮೆ ಮೊತ್ತದ ಟಾರ್ಗೆಟ್ ನೀಡಿದೆ.

Spread the love
Leave A Reply

Your email address will not be published.

Flash News