ಪುಟ್ಟೇನಹಳ್ಳಿ ಡಬಲ್ ಮರ್ಡರ್ ಕೇಸ್… ಆರೋಪಿಗೆ ಗುಂಡು ಹಾರಿಸಿ ಬಂಧನ.. ಪುಟ್ಟೇನಹಳ್ಳಿ ಪೊಲಿಸರಿಂದ ಅರೆಸ್ಟ್..

0

ಪುಟ್ಟೇನಹಳ್ಳಿಯಲ್ಲಿ ದಾಖಲಾಗಿದ್ದ ಡಬಲ್ ಮರ್ಡರ್ ಕೇಸ್ ನ ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿಯನ್ನು ಗುಂಡು ಹಾರಿಸಿ ಬಂಧಿಸಲಾಗಿದೆ. ಮಂಜುನಾಥ್ ಈ ಹಿಂದೆ ಮನೆಯಲ್ಲಿದ್ದ ಹಣ, ಮೊಬೈಲ್, ಚಿನ್ನವನ್ನು ದೋಚುವ ಸಲುವಾಗಿ ಎರಡು ಕೊಲೆ ಮಾಡಿದ್ದ, ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸ್ ಇವೆಯಂತೆ. ಏಪ್ರಿಲ್ 8 ರಂದು ಜೆಪಿ ನಗರದ ಸಂತೃಪ್ತಿ ನಗರದ ಮಮತಾ ಬಸು (25), ದೇವಮೃತ(45) ರನ್ನು ಮಂಜುನಾಥ್ ಹತ್ಯೆಗೈದಿದ್ದ. ಮೃತ ಮಮತಾ ಬಸು ಬೆಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿದ್ದರು. ಮಮತಾ ಬಸು ರವರ ಮಗ ದೀಪ್ ದೇವ್ ಬಸು ಬೇರೆ ಮನೆಯಲ್ಲಿ ವಾಸವಿದ್ದ, ಮೃತ ದೇವಮೃತ ಮಮತಾ ಬಸು ಅವರಮಗ ದೀಪ್ ದೇವ್ ಸ್ನೇಹಿತ. ದೇವ ಮೃತ ತನ್ನ ಸ್ನೇಹಿತ ದೀಪ್ ದೇವ್ ನ ತಾಯಿ ಮಮತಾರ ಮನೆಯಲ್ಲಿ ವಾಸವಿರುತ್ತಾನೆ, ಘಟನೆಯ ದಿನ ರಾತ್ರಿ 8. 30 ರ ವರೆಗೂ ತಾಯಿ ಮನೆಯಲ್ಲೇ ಇದ್ದ ದೀಪ್ ದೇವ್ ಬಸು ಊಟ ಮುಗಿಸಿಕೊಂಡು

ತನ್ನ ಮನೆಗೆ ತೆರಳುತ್ತಾನೆ. ಅದೇ ದಿನ ತಡರಾತ್ರಿ 1.30 ರ ಆಸುಪಾಸಿನಲ್ಲಿ ಡಬಲ್  ಮರ್ಡರ್ ನಡೆದಿದ್ದು, ಏಪ್ರಿಲ್ 8 ರ ಬೆಳಿಗ್ಗೆ ಮನೆಕೆಲಸದಾಕೆ ಬಂದಾಗ ಕೊಲೆ ಕೇಸ್ ಬೆಳಕಿಗೆ ಬಂದಿತ್ತು. ಕೊಲೆಗೈದ ಬಳಿಕ ಮಂಜುನಾಥ್ ಮನೆಯಲ್ಲಿದ್ದ ಸಿಸಿ ಟಿವಿಯ ಡಿವಿಆರ್ ನ್ನು ಕದ್ದೊಯ್ದಿದ್ದಲ್ಲದೇ ಬೆಳೆಬಾಳುವ ವಸ್ತುಗಳು, ಹಾಗೂ ಎಲೆಕ್ಟ್ರಾನಿಕ್ ಐಟಂಗಳನ್ನ ಹೊತ್ತೊಯ್ದಿದ್ದ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಮಂಜುನಾಥ್ ನನ್ನು ಇನ್ಸ್ಪೆಕ್ಟರ್ ಕಿಶೋರ್ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ

Spread the love
Leave A Reply

Your email address will not be published.

Flash News