ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ನಡೀತಿದ್ಯಾ ಗೋಲ್ಮಾಲ್..?

0

ಬೆಂಗಳೂರಿನ ಪ್ರತಿಷ್ಟಿತ ಕಾಲೇಜ್ ನಲ್ಲಿ ಗೋಲ್ಮಾಲ್ ನಡೀತಿದ್ಯಾ ಎಂಬ ಸುದ್ದಿ ಹರಿದಾಡುತ್ತಿದ್ದು, ಬಿಎಂಎಸ್ ಕಾಲೇಜ್ ಸೀಟ್ ಬ್ಲಾಕಿಂಗ್ ದಂಧೆ ನಡೆಸುತ್ತಿದೆಯಾ ಎಂಬ ಆರೋಪ ಕೇಳಿಬರುತ್ತಿದೆ. ಹೈಕೋರ್ಟ್ ನ ನಿವೃತ್ತ ನ್ಯಾಯಾಮೂರ್ತಿಗಳಾದ ಬಿ.ಮನೋಹರ್ ರವರ ಪರಿಶೀಲನೆಯಲ್ಲಿ ಮಾಹಿತಿ ಬಹಿರಂಗವಾಗಿದೆಯಂತೆ.
ಪ್ರವೇಶಾ ಮೇಲ್ವಿಚಾರಣಾ ಸಮಿತಿಯ ನೇತೃತ್ವ ವಹಿಸಿರುವ ನಿವೃತ್ತ ಜಡ್ಜ್
ಪರಿಶೀಲನೆಯಲ್ಲಿ ಅಕ್ರಮಗಳು ಮತ್ತು ಕಾನೂನು ಬಾಹಿರ ಪ್ರಕ್ರಿಯೆಗಳು ಪತ್ತೆಯಾಗಿವೆಯಂತೆ. ಹಾಗೂ ಬಿಎಂಎಸ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಎರಡು ಕಾಲೇಜುಗಳು, ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಬಿಎಂಎಸ್ಐಟಿ
ಕಾಮೆಡ್ ಕೆ ನಲ್ಲಿ ಪ್ರತಿ ಕಾಲೇಜ್ ಗಳಿಗೆ ವಿದ್ಯಾರ್ಥಿಗಳ ಸೀಟ್ ನೀಡಿದ್ದರಂತೆ.
2020 – 21 ನೇ ಸಾಲಿಗೆ ಸೆಲೆಕ್ಟ್ ಆಗಿರುವ ವಿದ್ಯಾರ್ಥಿಗಳು ಹಾಜರಿಲ್ಲ
ಬಿಎಂಎಸ್ ಶಿಕ್ಷಣ ಸಂಸ್ಥೆಗಳು ಸೀಟ್ ಬ್ಲಾಕಿಂಗ್ ಮಾಡಿರುವ ಶಂಕೆ ಇದ್ದು,
ಅಕ್ರಮವಾಗಿ ಸಂಸ್ಥೆಗಳು ಸೀಟ್ ಬ್ಲಾಕಿಂಗ್ ನಲ್ಲಿ ಭಾಗಿ ಆರೋಪವಿದೆ. ಕಳೆದ ಮೂರು ವರ್ಷಗಳಿಂದ ಅಕ್ರಮ ನಡೆದಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದ್ದು
3 ವರ್ಷಗಳಿಂದ ಅನೇಕ ಆಯ್ಕೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ,
ಆದರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದಾಖಲಾದ ಸಂಖ್ಯೆ ಹೆಚ್ಚು ಪತ್ತೆಯಾಗಿದೆ.
2018-19, 2019-20 ರಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದರು
ಈ ಬಗ್ಗೆ 20-21 ಪ್ರವೇಶದ ವೇಳೆಯೇ ಕಾಮೆಡ್ -ಕೆ ಸೂಚಿಸಿತ್ತಂತೆ.
ಆದ್ರೂ ಈ ಬಾರಿಯೂ ಸಹ ಅದೇ ಕೆಲಸ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಸೆಲೆಕ್ಟ್ ಆಗಿದ್ದ ವಿದ್ಯಾರ್ಥಿಗಳಿಗೆ ಬ್ಲಾಕ್ ಮಾಡಿ ಪುಲ್ ಅಂತ ಹೇಳುವುದು, ಬಳಿೈಕ
ಸೀಟ್ ಬ್ಲಾಕಿಂಗ್ ಮಾಡಿ ನಂತರ ಮ್ಯಾನೆಜ್ಮೆಂಟ್ ಕೋಟಾ ಬಳಕೆ ಮಾಡಿರುವ ಶಂಕೆ ಇದೆ.
ಈ ಬಗ್ಗೆ ವರದಿಯಲ್ಲಿ ಪ್ರವೇಶಾ ಮೇಲ್ವಿಚಾರಣಾ ಸಮಿತಿ ಉಲ್ಲೇಖವಾಗಿದ್ದು,
ಯುಜಿಸಿ & ಎಐಸಿಟಿಇ ನಿಯಮಗಳ ಉಲ್ಲಂಘನೆ ಮಾಡಿದ ಆರೋಪ ಕೇಳಿ ಬರುತ್ತಿದೆ.
ತ್ರಿಪಲ್ ಟೆಸ್ಟ್ ಇಲ್ಲದೇ ಮ್ಯಾನೆಜ್ನೆಂಟ್ ಕೋಟಾದಡಿ ಆಡ್ಮಿಷನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಎಂಎಸ್ಐಟಿ:
2018 ರಲ್ಲಿ 216 ಸೀಟ್ ಅಲಾಟ್ ಆಗಿದ್ರೆ, 173 ರಿಪೋರ್ಟ್ ಆಗಿದ್ದು
ಅದರಲ್ಲಿ ಸುಮಾರು 43 ಸೀಟ್ ಗಳು ವಿದ್ಯಾರ್ಥಿಗಳು ರಿಪೋರ್ಟ್ ಆಗಿಲ್ಲ
2019 ರಲ್ಲಿ 243 ಸೀಟ್ ಅಲಾಟ್ ಆಗಿದ್ರೆ, 150 ಮಾತ್ರ ರಿಪೋರ್ಟ್ ಆಗಿವೆ.
ಅದರಲ್ಲಿ ಸುಮಾರು 93 ಸೀಟ್ ಗಳು ವಿದ್ಯಾರ್ಥಿಗಳು ರಿಪೋರ್ಟ್ ಆಗಿಲ್ಲ.
2020 ರಲ್ಲಿ 180 ಸೀಟ್ ಅಲಾಟ್ ಆಗಿದ್ರೆ, 101 ರಿಪೋರ್ಟ್ ಆಗಿದ್ದು
ಅದರಲ್ಲಿ ಸುಮಾರು 79 ಸೀಟ್ ಗಳು ವಿದ್ಯಾರ್ಥಿಗಳು ರಿಪೋರ್ಟ್ ಆಗಿಲ್ಲ.

ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್:
2018 ರಲ್ಲಿ 288 ಸೀಟ್ ಅಲಾಟ್ ಆಗಿದ್ರೆ, 196 ರಿಪೋರ್ಟ್ ಆಗಿದ್ದು,
ಅದರಲ್ಲಿ ಸುಮಾರು 92ಸೀಟ್ ಗಳು ವಿದ್ಯಾರ್ಥಿಗಳು ರಿಪೋರ್ಟ್ ಆಗಿಲ್ಲ.
2019 ರಲ್ಲಿ 324 ಸೀಟ್ ಅಲಾಟ್ ಆಗಿದ್ರೆ, 163 ರಿಪೋರ್ಟ್ ಆಗಿದ್ದು,
ಅದರಲ್ಲಿ ಸುಮಾರು 161ಸೀಟ್ ಗಳು ವಿದ್ಯಾರ್ಥಿಗಳು ರಿಪೋರ್ಟ್ ಆಗಿಲ್ಲ.
2020 ರಲ್ಲಿ 277 ಸೀಟ್ ಅಲಾಟ್ ಆಗಿದ್ರೆ, 125 ರಿಪೋರ್ಟ್ ಆಗಿದ್ದು
ಅದರಲ್ಲಿ ಸುಮಾರು 152 ಸೀಟ್ ಗಳು ವಿದ್ಯಾರ್ಥಿಗಳು ರಿಪೋರ್ಟ್ ಆಗಿಲ್ಲ.

ಇನ್ನೂ ಕರ್ನಾಟಕ ಎಕ್ಸಾಮಿನೇಷ್ ಅಥಾರಿಟಿ ಪರಿಶೀಲನೆಯಲ್ಲಿಯೂ ಪತ್ತೆಯಾಗಿದ್ದು,
2020 ರಲ್ಲಿ 18 ಮಂದಿ ರಿಪೋರ್ಟ್ ಮಾಡಿಕೊಂಡಿಲ್ಲ. 7 ಮಂದಿ ಕ್ಯಾನ್ಸಲ್ ಆಗಿದೆ
ಮತ್ತೊಂದು ಕಾಲೇಜ್ ನಲ್ಲಿ 6 ಮಂದಿ ರಿಪೋರ್ಟ್ ಆಗಿಲ್ಲ 1 ಕ್ಯಾನ್ಸಲ್ ಆಗಿದೆ. ಸರ್ಕಾರದ ಪ್ರವೇಶ ಮೇಲ್ವಿಚಾರಣಾ ಸಮಿತಿಯಿಂದ ಕಾಲೇಜಿಗಿರುವ ಪ್ರವೇಶ ರದ್ದು ಶಿಫಾರಸ್ಸು ಮಾಡುವ ಖಡಕ್ ಎಚ್ಚರಿಕೆ ನೀಡಲಾಗಿದೆಯಂತೆ. ಬಿ.ಎಂ.ಎಸ್ ಎಜುಕೇಷನ್ ಟ್ರಸ್ಟ್ ಗೆ ತನಿಖೆಯಲ್ಲಿ ಪತ್ತೆಯಾದ ಅಕ್ರಮಗಳಿಗೆ ಉತ್ತರ ನೀಡುವಂತೆ ಸಮಿತಿ ವಾರ್ನಿಂಗ್ ನೀಡಿದೆ.
ಏ. 17 ರ ಒಳಗೆ ಉತ್ತರ ನೀಡುವಂತೆ ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. 17 ನೇ ತಾರೀಕು ಬಿಎಂಎಸ್ ಕಾಲೇಜ್ ದಾಖಲೆ ಸಮೇತ ಹಾಜರಾಗಬೇಕು.
ಮ್ಯಾನೆಜ್ಮೆಂಟ್ ಕೋಟಾ ಅಡಿಯಲ್ಲಿ ಸೇರಿರುವ ವಿದ್ಯಾರ್ಥಿಗಳ ಸಂಖ್ಯೆ
ಅವರ ಕಾಮನ್ ಎಂಟ್ರೇನ್ಸ್ ಟೆಸ್ಟ್ ರಾಕಿಂಗ್ ಎಷ್ಟು ಇದೆ,ಹಾಗೂ
ಆ ವಿದ್ಯಾರ್ಥಿಗಳಿಂದ ಕಲೇಕ್ಟ್ ಮಾಡಿಕೊಂಡಿರುವ ಫೀ ವಿವರ ನೀಡಬೇಕು.
2018-19, 2019-20- 2020-21ರ ಸಾಲಿನ ದಾಖಲೆಗಳ ನೀಡಬೇಕು. ರಿಪೋರ್ಟ್ ಮಾಡಿಕೊಳ್ಳದ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು.?
ಅವರಿಂದ ಎಷ್ಟು ಹಣ ಕಟ್ಟಿಸಿಕೊಳ್ಳಲಾಗಿದೆ ಅದಕ್ಕೆ ಸಂಬಂಧಿಸಿ ದಾಖಲೆಗಳು
2018-19, 2019-20- 2020-21ರ ಸಾಲಿನ ದಾಖಲೆಗಳ ನೀಡಬೇಕು.
ಇಷ್ಟು ದಾಖಲೆಗಳನ್ನು ಪ್ರವೇಶ ಮೇಲ್ವಿಚಾರಣಾ ಸಮಿತಿ ಮುಂದೆ ನೀಡಬೇಕಿದೆ

Spread the love
Leave A Reply

Your email address will not be published.

Flash News