ಫೇಸ್ಬುಕ್ ಲೈವ್ ನಲ್ಲಿ ಕಮಲ್ ಪಂತ್ ಹೇಳಿಕೆ..

0

ಇಂದು ಫೇಸ್ ಬಕ್ ಲೈವ್ ಬಂದ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ. “ಜನರ ಜೊತೆ ನಾವು ಹತ್ತಿರದ ಸಂಪರ್ಕ ಇಟ್ಟುಕೊಳ್ಳಬೇಕಾಗತ್ತೆ.
ಜನಪರವಾಗಿ ಕೆಲಸ ಮಾಡಬೇಕಾಗತ್ತೆ. ನಾವು ಬೇರೆ ತರಹದ ಸುಮಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇವೆ. ಹೀಗಾಗಿ ಜನ ಸಂಪರ್ಕ ಸಭೆ ಎಲ್ಲಾ ಠಾಣೆಗಳಲ್ಲೂ ಮಾಡ್ತಿದ್ದೇವೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನ ನಮ್ಮ ಬಳಿ ಹೇಳ್ತಾರೆ. ಅಲ್ಲದೇ ಯಾರು ಪೊಲೀಸ್ ಠಾಣೆ ಗೆ ಬರಲಿಕ್ಕಾಗಲ್ಲ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನರ ಜೊತೆ ಸಂಪರ್ಕದಲ್ಲಿ ಇದ್ದೀವಿ. ಪೊಲೀಸರು ಜನರ ಜೊತೆ ಇದ್ದೀವಿ, ಸಹನೆಯಿಂದ ವರ್ತಿಸ್ತೀವಿ. ಈ ಸಮಯದಲ್ಲಿ ಜನರ ಸಹಕಾರ ಅಗತ್ಯ. ಜನ ಪೊಲೀಸರಿಗೆ ಸಹಕಾರ ನೀಡುತ್ತ ಬಂದಿದ್ದಾರೆ.
ಇಂತಹ ಸಮಯದಲ್ಲಿ ನಾನು ಜನರ ಸಹಕಾರವನ್ನ ಕೋರುತ್ತೇನೆ.
ಹಲವರು ಲಾಕ್ ಡೌನ್ ಬಗ್ಗೆ ಕೇಳ್ತಿದ್ದಾರೆ. ಲಾಕ್ ಡೌನ್ ಬಗ್ಗೆ ಆತಂಕ ಬೇಡ. ನೈಟ್ ಕರ್ಪ್ಯೂ ತುಂಬಾ ಸ್ಟ್ರಿಕ್ ಆಗಿ ಫಾಲೋ ಆಗ್ತಿದೆ. ಕೋವಿಡ್ ನಿಯಮಗಳನ್ನ ಫಾಲೋ ಮಾಡ್ಬೇಕು. ಜನ ಭಯಪಡುವ ಅಗತ್ಯವಿಲ್ಲ.
ಲಾಕ್ ಡೌನ್ ಬಗ್ಗೆ ಆತಂಕ ಪಡುವ ಅವಕಾಶವಿಲ್ಲ. ಅದರ ಬಗ್ಗೆ ತೀರ್ಮಾನ ಮಾಡಲಿಕ್ಕೆ ಹೈ ಪವರ್ ಕಮಿಟಿ ಇದೆ. ನಾವು ನಮ್ಮ ಜವಾಬ್ದಾರಿ ಯಬ್ನ ಸರಿಯಾಗಿ ಮಾಡಬೇಕು. ಬಾಂಬೆ ದೆಹಲಿ ಯುಪಿ ಲಕ್ನೋಗಳಲ್ಲೂ ಸಮಸ್ಯೆಗಳಿದೆ.
ಎಲ್ಲಾ ಕಡೆ ಕೋವಿಡ್ ನಿಯಂತ್ರಣದ ಬಗ್ಗ್ರ್ ಚರ್ಚೆ ಆಗ್ತಿದೆ. ಜನ ಯಾವುದೇ ರೂಮರ್ಸ್ ಗೆ ಕಿವಿಗೊಡದೇ ವ್ಯಾಕ್ಸಿನೇಷನ್ ಪಡಿಬೇಕು ಹೋಮ್ ಡೆಲಿವರಿಯವರಿಗೆ ಯಾವುದೇ ಅಡಚಣೆಯಿಲ್ಲ.ನೈಟ್ ಕರ್ಪ್ಯೂ ಸಿಸ್ಟಂ ಈಗಾಗಲೇ ಸೆಟಲ್ಡ್ ಆಗಿದೆ. ಎಂದರು.

Spread the love
Leave A Reply

Your email address will not be published.

Flash News