ಪಾಶ್ವವಾಯು ವಿದ್ಯಾರ್ಥಿನಿಯ ಚಿನ್ನದ ಸಾಧನೆ.
ಹುಟ್ಟುವುದು ಸಹಜ ಸಾಯುವುದು ಸಹಜ ಈ ಹುಟ್ಟು ಸಾವುಗಳ ನಡುವೆ ಏನನ್ನಾದರೂ ಸಾಧಿಸಿ ಹೋಗುವವನೇ ನಿಜವಾದ ಮನುಜ. ಸಾಧನೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯೊಂದಿದ್ದರೆ ಯಾರು ಏನ್ನನ್ನ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಈ ವಿದ್ಯಾರ್ಥಿನಿಯೇ ಸಾಕ್ಷಿ. ಹೌದು. ಬ್ರೈನ್ ಸ್ಟ್ರೋಕ್ ಆಗಿದ್ದ ವಿದ್ಯಾರ್ಥಿನಿ ಹಾಸಿಗೆಯಲ್ಲಿ ಮಲಗಿದ್ದರೂ ಛಲ ಬಿಡದೇ ಓದಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ದಾವಣಗೆರೆ ವಿದ್ಯಾನಗರದ ಸಿವಿಲ್ ಕಂಟ್ರಾಕ್ಟರ್ ಪಂಚಾಕ್ಷರಿ-ಬಸಮ್ಮ ದಂಪತಿಯ ಮಗಳಾದ ನಿಸರ್ಗ ಅವರಿಗೆ 2020ರ ಏಪ್ರಿಲ್ನಲ್ಲಿ ಬ್ರೈನ್ ಸ್ಟ್ರೋಕ್ ಆಗಿತ್ತು. ಈಕೆ ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಕಾರಣದಿಂದ ತಡವಾಗಿ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಘೊಷಣೆಯಾಗಿದ್ದ ಪರೀಕ್ಷೆಯನ್ನು ಆಸ್ಪತ್ರೆಯ ಬೆಡ್ ನಲ್ಲಿ ಮಲಗಿಕೊಂಡೇ ಮೊಬೈಲ್, ಹಾಗೂ ಲ್ಯಾಪ್ ಟಾಪ್ ನಲ್ಲಿ ಅಧ್ಯಯನ ಮಾಡಿ, ಪರೀಕ್ಷೆ ಬರೆದು ಇದೀಗ ಮೂರು ಚಿನ್ನದ ಪದಕಗಳನ್ನು ಗಳಿಸಿರುವ ನಿಸರ್ಗ ರ ಸಾಧನೆಗೊಂದು ಸಲಾಂ..