ನಿರ್ದೇಶಕ ಮಠ ಗುರುಪ್ರಸಾದ್ ಗೆ ಕೊರೋನಾ ಪಾಸಿಟಿವ್.. ಫೇಸ್ಬುಕ್ ಲೈವ್ ನಲ್ಲಿ ಗುರುಪ್ರಸಾದ್ ರುದ್ರತಾಂಡವ..!

0

ನಿರ್ದೇಶಕ ಮಠ ಗುರುಪ್ರಸಾಸ್ ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಗುರುಪ್ರಸಾದ್ ಅವರು ಫೇಸ್ ಬುಕ್ ಲೈವ್ ಬಂದು ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ಸೋಂಕು ತಗುಲಿದ್ದಕ್ಕೆ ಡಿಸ್ಟರ್ಬ್ ಆಗಿರುವ ಗುರುಪ್ರಸಾದ್ “ಕೊರೊನಾ ತಂದುಕೊಟ್ಟ ಸಿ.ಎಂ ಯಡಿಯೂರಪ್ಪಗೆ ಧನ್ಯವಾದಗಳು. ಇದು ನನ್ನ ಕೊನೆ ಕ್ಷಣದ ಕೊನೆ ಮಾತುಗಳು. ಸಾಯೋಕಿಂತ ಮುಂಚೆ ಕೆಲವು ಮಾತುಗಳನ್ನ ಹೇಳ್ಬೇಕು. ಕೊರೊನಾ ಹರಡೋಕೆ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಕೆ.ಸುಧಾಕರ್ ಅವರೇ ಕಾರಣ. ಕರ್ನಾಟಕದಲ್ಲಿ ಆದ ಪ್ರತಿ ಸಾವಿಗೂ ಆರೋಗ್ಯ ಸಚಿವ ಕೆ.ಸುಧಾಕರ್ ರವರೇ ಕಾರಣ. ಇಲ್ಲಿ ಯಾವ ರಾಜಕಾರಣಿಯೂ ಸಾಚ ಅಲ್ಲ. ಈ ಟೈಮ್ ನಲ್ಲಿ ನಿಮಗೆ ರಮೇಶ್ ಜಾರಕಿಹೊಳಿ ಸಿಡಿ ಬೇಕಾ? ಕೋಟಿಗಟ್ಟಲೆ ಲೂಟಿ ಮಾಡಿ ಆರಾಮಾಗಿದ್ದೀರಾ? ನಿಮ್ ಹತ್ರ ದುಡ್ಡಿದ್ರೆ ನಿಮಗೆ ಕೊರೊನಾ ಬರೋದೇ ಇಲ್ವಾ?” ಹೀಗೆ ಸರ್ಕಾರದ ವೈಫಲ್ಯಗಳು ಹಾಗೂ ಅವ್ಯವಸ್ಥೆಗಳ ಬಗ್ಗೆ ಗುರುಪ್ರಸಾದ್ ವಿಡಿಯೋ ಬಾಣ ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ.

Spread the love
Leave A Reply

Your email address will not be published.

Flash News