ಸಾವಿನೂರಾಗಿ ಬದಲಾದ ಬೆಂಗಳೂರು.. ದಿನದಿನಕ್ಕೂ ಕೊರೊನಾ ಸಾವಿನ ಪ್ರಕರಣ ಹೆಚ್ಚು..!

0

ದಿನದಿನಕ್ಕೂ ಕೊರೊನಾ ಸಾವಿನ ಪ್ರಕರಣ ಹೆಚ್ಚುತ್ತಿದ್ದು, ಕೊರೊನಾದಿಂದ ಸಾವಿನ ಸರಣಿ ಮುದುವರೆದಿದೆ. ನಿನ್ನೆ ಸುಮನಹಳ್ಳಿಯ ಚಿತಾಗಾರದಲ್ಲಿ ಮೂವತ್ತೊಂದು ಕೋವಿಡ್ ಮೃತದೇಹಗಳ ದಹನವಾಗಿದ್ದು, ಬೆಳಗ್ಗೆಯಿಂದ ತಡರಾತ್ರಿವರೆಗೂ ಮೃತದೇಹ ಸುಟ್ಟು ಸಿಬ್ಬಂದಿಗಳು ಸುಸ್ತಾಗಿದ್ದಾರೆ. ಸುಮನಹಳ್ಳಿಯಲ್ಲಿ ಇಂದು ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಮೃತದೇಹಗಳ ದಹನ ಮಾಡಿದ್ದಾರೆ. ಮತ್ತೆ ಇಂದು 9 ಗಂಟೆಯಿಂದ ದಹನ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಚಿತಾಗಾರದ ಮುಂದೆ ಶವ ಹೊತ್ತ ಆಂಬ್ಯುಲೆನ್ಸ್ ಗಳು ಕ್ಯೂ ನಿಂತಿವೆ.
ಇನ್ನು ಆ್ಯಂಬುಲೆನ್ಸ್ ನಲ್ಲೇ ಕೊರೊನಾ ಸೋಂಕಿತರು ಸಾಯುತ್ತಿದ್ದು, ನಿನ್ನೆ ರಾತ್ರಿ ಆ್ಯಂಬುಲೆನ್ಸ್ನಲ್ಲಿ ಸಾಗಿಸುವಾಗಲೇ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕೊರೊನಾದಿಂದ ಸತ್ತ ಮೇಲೆ ಸಂಬಂಧಿಕರು ಹತ್ತಿರ ಕೂಡ ಬರ್ತಿಲ್ಲ. ನಿನ್ನೆ ಸುಮನಹಳ್ಳಿಯ ಚಿತಾಗಾರಕ್ಕೆ ಬಂದಿದ್ದ ಅನಾಥ ಶವವನ್ನು ಚಿತಾಗಾರದ ಸಿಬ್ಬಂಧಿಯೇ ಅಂತಿಮ ವಿಧಿವಿಧಾನ ಮುಗಿಸಿದ್ದರು. ನಿನ್ನೆ ಸುಮನಹಳ್ಳಿ 31, ಪೀಣ್ಯ 24, ಮೇಡಿ ಅಗ್ರಹಾರ 27, ಬನಶಂಕರಿ 24, ಬೊಮ್ಮನಹಳ್ಳಿ 18, ಕೆಂಗೇರಿ 22, ಪಣತ್ತೂರು 17, ಮೃತದೇಹಗಳ ದಹನವಾಗಿವೆ. “ಹೀಗೆ ಆದರೆ ತುಂಬ ಕಷ್ಟ ಆಗುತ್ತೆ… ನಮಗೂ ಸಾಕಷ್ಟು ಸುಸ್ತಾಗಿ ಬಿಡತ್ತೆ. ಜನ ಎಚ್ಚೆತ್ತುಕೊಳ್ಳಬೇಕೆಂದು ಚಿತಾಗಾರ ಸಿಬ್ಬಂದಿ ರವಿ ಮನವಿ ಮಾಡಿಕೊಂಡರು.

Spread the love
Leave A Reply

Your email address will not be published.

Flash News