ಕೊರೊನಾ ನಿರ್ವಹಣೆಯಲ್ಲಿ ಗೌರವ್ ಗುಪ್ತಾ ವೈಫಲ್ಯ..! ಎಸಿ ಚೇಂಬರ್ ನಲ್ಲೇ ಹೆಚ್ಚು ವಾಸ್ತವ್ಯ..ಫೀಲ್ಡ್ ಗಿಳಿದಿದ್ದೇ ಕಡ್ಮೆ…! :ಮಂಜುನಾಥ ಪ್ರಸಾದ್-ಅನಿಲ್ ಕುಮಾರ್ ಅನುಪಸ್ಥಿತಿ ಕಾಡ್ತಿರೋದಂತೂ ಸತ್ಯ..!?

0

ಬೆಂಗಳೂರು:ಬಿಬಿಎಂಪಿ ನೌಕರ ಸಿಬ್ಬಂದಿಗೆ ಬೇಕಿರುವುದು ಆತ್ಮಸ್ಥೈರ್ಯ ತುಂಬಬಲ್ಲ ಆಯುಕ್ತರೇ ಹೊರತು, ಎಸಿ ಚೇಂಬರ್ ನಲ್ಲಿ ಕುತ್ಕೊಂಡು ದರ್ಬಾರ್ ಮಾಡುವಂತವರಲ್ಲ..ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಬಿಬಿಎಂಪಿ ನೌಕರ ಸಿಬ್ಬಂದಿ ಅಕ್ಷರಶಃ ಆತ್ಮಸ್ಥೈರ್ಯ ಕಳಕೊಂಡಿದ್ದಾರೆ.ಅದಕ್ಕೆ ಕಾರಣ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಂತೆ.ತಮಗೆ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡಬೇಕಾದವ್ರೇ ಎಸಿ ಕಚೇರಿಯಲ್ಲಿ ಕುತ್ಕೊಂಡು ದರ್ಬಾರ್ ಮಾಡ್ತಿರೋದ್ರಿಂದ ನಮ್ಮನ್ನು ಹುರಿದುಂಬಿಸುವವರೇ ಇಲ್ಲವಾಗಿದೆ ಎನ್ನೋದು ಅವರ ಕೊರಗಂತೆ.

ಹೌದು..ಬಿಬಿಎಂಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೂಡ ಅಂತದ್ದೇ ಶಂಕೆ ಮೂಡಿಸುತ್ತವೆ.ಕರೊನಾ ಮೊದಲ ಅಲೆ ಸೃಷ್ಟಿಯಾದಾಗ ಬಿಬಿಎಂಪಿಯನ್ನು ಮುನ್ನಡೆಸಿದ ಇಬ್ಬರು ಆಯುಕ್ತರುಗಳು ಕಚೇರಿಯನ್ನು ಬಿಟ್ಟು ರಸ್ತೆ ಬೀದಿಗಳನ್ನು ಅಲೆದು ಪರಿಸ್ತಿತಿಯನ್ನು ನಿಯಂತ್ರಣಕ್ಕೆ ತರೋ ಕೆಲಸ ಮಾಡಿದ್ದನ್ನು ಇಡೀ ಬೆಂಗಳೂರೇ ನೋಡಿದೆ.ಅದೆಷ್ಟೋ ಸನ್ನಿವೇಶಗಳಲ್ಲಿ ಅನಿಲ್ ಕುಮಾರ್ ಮತ್ತು ಮಂಜುನಾಥ ಪ್ರಸಾದ್ ಅವರನ್ನು ಇವರೇನು ಮನುಷ್ಯರಾ..ಇವರಿಗೆ ಕೊರೊನಾದ ಬಗ್ಗೆ ಭಯವೇ ಇಲ್ಲವಾ ಎನ್ನುವ ರೀತಿಯಲ್ಲೂ ಬೆಂಗಳೂರಿಗರು ಪ್ರಶ್ನಿಸಿದ್ದಿದೆ.

ಆ ಪರಿ ಕರೊನಾ ಸನ್ನಿವೇಶದಲ್ಲಿ ಮೈ ಚಳಿ ಬಿಟ್ಟು ತಮ್ಮ  ಆರೋಗ್ಯದ ಕಾಳಜಿ ಮರೆತು ಕೆಲಸ ಮಾಡಿದ್ದ ಅನಿಲ್ ಕುಮಾರ್ ಹಾಗೂ ಗೌರವ್ ಗುಪ್ತಾ ಅವರ ಅನುಪಸ್ತಿತಿ ಬೆಂಗಳೂರಿಗೆ ಕಾಡುತ್ತಿದೆ.ಏಕೆಂದ್ರೆ ಈಗಿರುವ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇದ್ದರೂ ಇಲ್ಲದಂತಾಗಿದ್ದಾರೆ.ಕೆಲವೊಮ್ಮೆ ಬಿಬಿಎಂಪಿಗೂ ಒಬ್ಬ ಕಮಿಷನರ್ ಎನ್ನೋರು ಇದ್ದಾರಾ ಎನ್ನುವಷ್ಟರ ಮಟ್ಟಿಗಿನ ಶಂಕೆ ಕಾಡುತ್ತದೆ.ಅಂತದ್ದೊಂದು ಸನ್ನಿವೇಶಕ್ಕೆ ಕಾರಣವಾಗಿರುವುದು ಇದೇ ಗೌರವ್ ಗುಪ್ತಾ.

ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಗೌರವ್ ಗುಪ್ತಾ ಒಂದೇ ಒಂದು ನೆನಪಿಸಿಕೊಳ್ಳುವಂಥ ಕೆಲಸವನ್ನೇನಾದ್ರೂ ಮಾಡಿದ್ದಾರಾ..? ಉತ್ತರಕ್ಕೆ ತಡಬಡಾಯಿಸಬೇಕಾಗುತ್ತದೇನೋ..! ಕೊರೊನಾ ಸನ್ನಿವೇಶದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದ್ದರೂ ಅದ್ಹೇಕೆ ಅಂತದ್ದೊಂದು ಆಸಕ್ತಿಯನ್ನು ಅವರು ತೋರುತ್ತಿಲ್ಲವೋ ಗೊತ್ತಾಗ್ತಿಲ್ಲ.ಅಧಿಕಾರ ಕೇವಲ ಅನುಭವಿಸಲಿಕ್ಕೆ ಇರೋದು..ಜನರಿಗೆ ಪ್ರಯೋಜನಕ್ಕೆ ಬರುವಂಥ ಕೆಲಸ ಮಾಡುವುದಕ್ಕಲ್ಲ ಎನ್ನುವ ಭಾವನೆ ಗೌರವ್ ಗುಪ್ತಾ ಅವರಲ್ಲಿದ್ದಂತಿದೆ ಎನಿಸುತ್ತದೆ.

ಆದ್ರೆ ಇಂತದ್ದೊಂದು ಆಲೋಚನೆಯಲ್ಲಿದ್ದರೆ ಅದು ಗೌರವ್ ಗುಪ್ತಾರಿಗೆ ಮುಳುವಾದ್ರೂ ಆಶ್ಚರ್ಯವಿಲ್ಲ..ಏಕೆಂದ್ರೆ ಯಾರೋ ಪ್ರಭಾವಿ ಸಚಿವರ ಕೃಪಕಟಾಕ್ಷವಿದ್ದಾಕ್ಷಣ ತಾನು ಏನೇ ಮಾಡಿದ್ರೂ ನಡೆದೋಗ್ತದೆ ಎಂದೇನಾದ್ರೂ ಗೌರವ್ ಗುಪ್ತಾ ಭಾವಿಸಿದ್ದರೆ ಅದು ಕೇವಲ ಅವರ ಭ್ರಮೆ..ಏಕೆಂದ್ರೆ ಬಿಬಿಎಂಪಿಯಂಥ ಸ್ಥಳೀಯ ಆಡಳಿತದಲ್ಲಿ ಉತ್ತಮವಾಗಿ,ಜನಪರವಾಗಿ ಕೆಲಸ ಮಾಡದ ಯಾವೊಬ್ಬ ಕಮಿಷನರ್ ಎಷ್ಟೇ ಪ್ರಭಾವಿ..ಬಲಶಾಲಿಯಾಗಿದ್ರು ಉಳಿದ ಇತಿಹಾಸವಿಲ್ಲ..ಇದನ್ನು ಗೌರ್ ಗುಪ್ತಾ ಅವರು ಅರ್ಥ ಮಾಡಿಕೊಂಡ್ರೆ ಸಾಕೆನಿಸುತ್ತದೆ.

ಗೌರವ್ ಗುಪ್ತಾ ಸಾಹೇಬ್ರು, ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ್ಮೇಲೆ ಜನಪರವಾಗಿ ಎಷ್ಟು ಕೆಲಸ ಮಾಡಿದ್ದಾರೆನ್ನೋದನ್ನು ಬದಿಗೊತ್ತಿಬಿಡೋಣ,ಕೊರೊನಾ ವಕ್ಕರಿಸುವ  ಹಾಗು ವಕ್ಕರಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟೊಂದು ಆಕ್ಟೀವ್ ಆಗಿದ್ದಾರೆನ್ನುವುದರ ಬಗ್ಗೆಯೇ ಆಲೋಚಿಸೋಣ.

ಕೇವಲ ಮೀಟಿಂಗ್ಸ್, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರೋದನ್ನು ಬಿಟ್ಟು ಸಮಸ್ಯೆ ಇರುವ ಕಡೆಗಳಲ್ಲಿ ಸಂಚರಿಸಿದ್ದಾರಾ..ಜನರ ಸಮಸ್ಯೆ ಕೇಳಿದ್ದಾರಾ..ಪರಿಸ್ಥಿತಿ ಅವಲೋಕಿಸಿದ್ದಾರಾ..ಏನೂ ಬೇಡ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ತಮ್ಮದೇ ಸಿಬ್ಬಂದಿಯನ್ನು ಭೇಟಿಯಾಗಿದ್ದಾರಾ..? ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರಾ..? ಇದಕ್ಕೆ ಅವರೇ ಉತ್ತರ ಕೊಟ್ಟರೆ ಒಳ್ಳೇದಾಗುತ್ತದೇನೋ..

ಕೊರೊನಾ ಸನ್ನಿವೇಶದಲ್ಲಿ ಅನಿಲ್ ಕುಮಾರ್, ಮಂಜುನಾಥ್ ಪ್ರಸಾದ್ ಅವರಿಗೆ ಸಾಧ್ಯವಾದಂಥದ್ದು ಅದ್ಹೇಕೆ ಗೌರವ್ ಗುಪ್ತಾರಿಗೆ ಸಾಧ್ಯವಾಗುತ್ತಿಲ್ಲ.. ಗೊತ್ತಾಗುತ್ತಿಲ್ಲ..ಏಕೆ ಅವರಿಬ್ಬರಿಗೆ ಇವರಂತೆ ಕೊರೊನಾ ಭಯವಿರಲಿಲ್ಲವೇ..?ಅವರಿಗೆ ಹೆಂಡತಿ-ಮಕ್ಕಳು-ಸಂಸಾರದ ಬಗ್ಗೆ ಕಾಳಜಿ ಇರಲಿಲ್ಲವೇ?

ಯಾಕಿರಲಿಲ್ಲ..ಖಂಡಿತಾ ಇತ್ತು..ಆದ್ರೆ ಕೊರೊನಾದಂಥ ಪ್ರಾಕೃತಿಕ ವಿಕೋಪ ಹಾಗೂ ಜೈವಿಕ ಯುದ್ಧದ ಸನ್ನಿವೇಶವನ್ನು ಎದುರಿಸುವ ಚಾಲೆಂಜನ್ನು ಸಮಗ್ರವಾಗಿ ಎದುರಿಸಲು ತಮ್ಮನ್ನು ತೊಡಗಿಸಿಕೊಂಡು ಅದರಲ್ಲಿ ಯಶಸ್ವಿಯೂ ಆದ್ರು..ಆದ್ರೆ ಇಂತದ್ದೊಂದು ಸವಾಲನ್ನು ಸ್ವೀಕರಿಸಲು ಗೌರವ್ ಗುಪ್ತ ಸಿದ್ಧವಾಗಿಲ್ಲವೇನೋ ಎನ್ನೋದು ಅವರ ವರ್ತನೆ-ಧೋರಣೆ-ಕಾರ್ಯವೈಖರಿಯಲ್ಲೇ ಗೊತ್ತಾಗುತ್ತೆ.

ಬಿಬಿಎಂಪಿ ಕಮಿಷನರ್ ಹುದ್ದೆಗೆ ಗೌರವ್ ಗುಪ್ತಾ ಮಾಡಿದ ಪ್ರಯತ್ನ-ಲಾಬಿ ಎಂತದ್ದೆನ್ನೋದು ಎಲ್ಲರಿಗೂ ಗೊತ್ತಿದೆ.ಆದ್ರೆ ಆ ಹುದ್ದೆ ಸಿಕ್ಕ ಮೇಲೆ ಅದಕ್ಕೆ ಯಾವ್ ರೀತಿ ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕಿತ್ತೋ ಆ ರೀತಿ ಸಿದ್ದಪಡಿಸಿಕೊಳ್ಳದಿರೋದು ಮಾತ್ರ ವಿಪರ್ಯಾಸ.ಈ ಕಾರಣದಿಂದಲೇ ಬೆಂಗಳೂರಿನ 28 ಕ್ಷೇತ್ರಗಳಲ್ಲಿರುವ ಬಹುತೇಕ ಶಾಸಕರಿಗೆ ಗೌರವ್ ಗುಪ್ತಾ ಕಾರ್ಯವೈಖರಿ ಸಮಾಧಾನವನ್ನೇ ತಂದಿಲ್ಲ..

ಹಾಗಾಗಿ ಅವರನ್ನು ಬದಲಿಸಬೇಕೆನ್ನುವ ಕೂಗು ಸರ್ಕಾರದ ಮಟ್ಟದಲ್ಲಿ ಬಲವಾಗಿ ಕೇಳಿಬರುತ್ತಿದೆ.ಹಾಗೇನಾದ್ರು ಇಂಥದ್ದೊಂದು ಸನ್ನಿವೇಶದಲ್ಲಿ ಅಂಥದ್ದೊಂದು ಬದಲಾವಣೆಯಾಗಿದ್ದೇ ಆದಲ್ಲಿ,ಅದಕ್ಕಿಂತ ದೊಡ್ಡ ಅವಮಾನ-ಮುಖಭಂಗ ಮತ್ತೊಂದಿರಲಿಕ್ಕಿಲ್ಲವೇನೋ..?

Spread the love
Leave A Reply

Your email address will not be published.

Flash News