ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

0

ಬೆಂಗಳೂರು: ಕೊರೊನಾ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸೋಂಕು ತಗುಲಿದ್ದು ಖಚಿತವಾದರೆ ಮೊದಲು ಏನು ಮಾಡಬೇಕು? ಆಸ್ಪತ್ರೆಗಳನ್ನು ಹೇಗೆ ಸಂಪರ್ಕಿಸಬೇಕು? ಅಥವಾ ಆ್ಯಂಬುಲೆನ್ಸ್​ಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆಗಳು ಹಲವರಲ್ಲಿವೆ. ಬೆಂಗಳೂರು ವ್ಯಾಪ್ತಿಯ ನಾಗರಿಕರ ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ತುರ್ತು ಆ್ಯಂಬುಲೆನ್ಸ್ ಅಗತ್ಯ ಬಿದ್ದಲ್ಲಿ ಸಾರ್ವಜನಿಕರು 1912 ಮತ್ತು 108ಕ್ಕೆ ಕರೆ ಮಾಡಬಹುದು. ಈ ಮೂಲಕ ಯಾವುದೇ ಗಾಬರಿಗೂ ಒಳಗಾಗದೇ ಆ್ಯಂಬುಲೆನ್ಸ್ ಸೇವೆಯನ್ನು ಪಡೆಯಬಹುದು. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್​ಡೆಸಿವಿರ್ ಔಷಧ ಪಡೆಯಲು 7019861430 ಕ್ಕೆ ಕರೆ ಮಾಡಬಹುದು. ಆಸ್ಪತ್ರೆಗಳಲ್ಲಿ ಬೆಡ್ ದೊರೆಯದಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು. ರೋಗಿಗಳಿಗೆ ಅಥವಾ ಸೋಂಕಿತರಿಗೆ ಆಕ್ಸಿಜನ್​ಗಾಗಿ 1912 ಅಥವಾ 108ಕ್ಕೆ ಕರೆ ಮಾಡುವ ಮೂಲಕ ಸೌಲಭ್ಯ ದೊರಕಿಸಿಕೊಳ್ಳಬಹುದು.
ಕೊರೊನಾಗೆ ಸಂಬಂಧಿಸಿದ ಇತರ ಯಾವುದೇ ಅಗತ್ಯ ಮಾಹಿತಿ ಅಥವಾ ಸೇವೆಗಳ ಕುರಿತು ತಿಳಿಯಲು ಬಿಬಿಎಂಪಿ ವ್ಯಾಪ್ತಿಯ ನಾಗರಿಕರು 1912 ಕ್ಕೆ ಮತ್ತು ರಾಜ್ಯದ ಇತರ ಭಾಗಗಳ ನಾಗರಿಕರು 14410 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Spread the love
Leave A Reply

Your email address will not be published.

Flash News