ಕೊರೊನಾ ಕಷ್ಟಕಾಲದಲ್ಲಿ ನೆರವಿಗೆ ನಿಂತ ಗ್ರೀನ್ ಆರ್ಮಿ ಫೋರ್ಸ್..

0

ಸತತ ಒಂದೂವರೆ ವರ್ಷದಿಂದ ಇಡೀ ಮಾನವಸಂಕುಲವನ್ನೇ ರಣಹದ್ದಿನಂತೆ ಕಿತ್ತು ತಿನ್ನುತ್ತಿರುವ ಕೊರೊನಾ ಮಹಾಮಾರಿ ಇದೀಗ ಎರಡನೇ ಅಲೆಯ ರೂಪ ತಾಳಿ ಮತ್ತೆ ತನ್ನ ಆರ್ಭಟವನ್ನು ಶುರು ಮಾಡಿಕೊಂಡಿದೆ. ಜೀವಗಳ ಜೊತೆಗೆ ಚೆಲ್ಲಾಟವಾಡುತ್ತಿರುವ ಈ ಸಂಕಷ್ಟದ ಕಾಲದಲ್ಲಿ ಇಲ್ಲೊಂದು ಉತ್ಸಾಹಿ ಯುವಕರ ತಂಡ ಸಮಾಜಮುಖಿ ಕೆಲಸಕ್ಕೆ ಮುಂದಾಗಿದೆ. ದಿನೇ ದಿನೇ ಕೊರೊನಾದ ಆರ್ಭಟ ಹೆಚ್ಚುತ್ತಿದ್ದು ಜನರು ಕೂಡ ಭಯಭೀತರಾಗಿದ್ದಾರೆ. ಅದೆಷ್ಟೋ ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಸರಿಯಾದ ಚಿಕಿತ್ಸೆ ಇಲ್ಲದೇ, ಸರಿಯಾದ ಆಹಾರ ಸಿಗದೇ, ಆಕ್ಸಿಜನ್ ಇಲ್ಲದೇ ಒದ್ದಾಡುತ್ತಿದ್ದಾರೆ. ಇನ್ನು ಅದೆಷ್ಟೋ ಸಂಪರ್ಕಿತರಿಗೆ ಮೆಡಿಕಲ್ ಸೌಲಭ್ಯವೇ ಸಿಗ್ತಿಲ್ಲ.  ಇತಂಹದ್ದೊಂದು ಸಂಕಷ್ಟಕರ ಸನ್ನಿವೇಶದಲ್ಲಿ ಇಲ್ಲೊಂದು ಯುವಕರ ತಂಡ ಸಂಕಷ್ಟದಲ್ಲಿರುವವರ ನೆರವಿಗೆ ನಿಂತಿದೆ. ಕೊರೊನಾ ಸೊಂಕಿಗೆ ತುತ್ತಾಗಿ ಹೋಮ್ ಐಸೋಲೇಷನ್ ನಲ್ಲಿರುವ ಬಡವರಿಗೆ ಟ್ಯಾಬ್ಲೆಟ್ಸ್ ಗಳಿರುವ ಮೆಡಿಕಲ್ ಕಿಟ್ ಗಳನ್ನು ಉಚಿತವಾಗಿ ಮನೆ ಮನೆಗೆ ತಲುಪಿಸುವ ಕೆಲಸವನ್ನು ಗ್ರೀನ್ ಆರ್ಮಿ ಫೋರ್ಸ್ ತಂಡ. ಕೊರೊನಾ ಪ್ರಂಟ್ ಲೈನ್ ವಾರಿಯರ್ಸ್ ಗಳಾದ ಪೊಲೀಸರಿಗೂಮೆಡಿಕಲ್ ಕಿಟ್ ಗಳನ್ನು ಈ ತಂಡ ಪ್ರಾಯೋಗಿಕವಾಗಿ ವಿತರಿಸುತ್ತಿದ್ದಾರೆ. ಅಲ್ಲದೇ ಯಾವುದೇ ಸಿಬ್ಬಂದಿಗೆ ಮಾತ್ರೆಗಳ ಅವಶ್ಯಕತೆ ಇದ್ದಲ್ಲಿ ತಮ್ಮನ್ನು ಸಂಪರ್ಕಿಸಿದರೆ ನೆರವಿನ ಹಸ್ತ ನೀಡುವುದಾಗಿ ಗ್ರೀನ್ ಆರ್ಮಿ ಫೋರ್ಸ್ ತಂಡ ಹೇಳಿದೆ.  ಕೊರೊನಾದಿಂದ ಹೋಂ

ಐಸೋಲೇಷನ್ ಅದವರಿಗೆ ಡೋಲೋ 650, ಜಿಂಕ್, ಅಜಿತ್ರಾಲ್ , ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಗಳನ್ನ ಒಳಗೊಂಡ 350 ರೂಪಾಯಿ ಮೌಲ್ಯದ ಕಿಟ್ ಗಳನ್ನ ಉಚಿತವಾಗಿ ಸಂಘಟನೆ ಕಾರ್ಯಕರ್ತರು ನೀಡುತ್ತಿದ್ದಾರೆ. ಕೊರೊನಾಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಬಡವರು ಈಸಂಘಟನೆ ಕಾರ್ಯಕರ್ತರಿಗೆ ಕರೆ ಮಾಡಿದ್ರೆ ಅವರ ಮನೆಗೆ ತೆರಳಿ ಕಿಟ್ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.ಪ್ರಸ್ತುತ ಬೆಂಗಳೂರಿನಲ್ಲಿ ಕಿಟ್ ಗಳನ್ನ ಹಂಚಲಾಗುತ್ತಿದ್ದು ಒಂದು ದಿನಕ್ಕೆ ನೂರು ಕಿಟ್ಗಳನ್ನ ಹಂಚುವ ಗುರಿಯನ್ನ ಇಟ್ಟು ಕೊಂಡಿದ್ದೇವೆ ಎಂದು ಸಂಘಟನೆ ಕಾರ್ಯಕರ್ತ ಕಿರಣ್ ಹೇಳಿದ್ದಾರೆ. ಸಾಕಷ್ಟು ಜನ ದಾನಿಗಳು ಈಗಾಗಲೇ ಈ ಕಾರ್ಯಕ್ಕೆ ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಕಿಟ್ ವಿತರಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲಿ ಮನೆಯಿಂದ

ಹೊರಬರುವುದೂ ಕೂಡ ಕಷ್ಟವಾಗಿದೆ. ಈ ಸಮಯದಲ್ಲಿ ಕೊರೊನಾ ಭಾಧಿತರಿಗೆ ನೆರವು ನೀಡುತ್ತಿರುವ ಯುವ ಸಂಘಟನೆ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Spread the love
Leave A Reply

Your email address will not be published.

Flash News