CORONA VIRUSMoreScroll

ಕೊರೊನಾದಿಂದ ಬಲಿಯಾದ ಅನಾಥ ಮೃತ ಶವಗಳಿಗೆ ಸರ್ಕಾರದಿಂದ ಮೋಕ್ಷ

ಮಹಾಮಾರಿ ಕೊರೊನಾ ಸೋಂಕು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಕೊರೊನಾಗೆ ಬಲಿಯಾಗುವವರ ಮೃತ ದೇಹಗಳನ್ನು, ಅಸ್ಥಿಗಳನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರು ಮುಂದಾಗುತ್ತಿಲ್ಲ. ನಮಗೂ ಸೋಂಕು ತಗುಲಬಹುದು ಎಂದು ತಮ್ಮವರ ಶವಗಳ ಬಳಿಯೂ ಕುಟುಂಬಸ್ಥರು ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾದ ಅನಾಥ ಶವಗಳಿಗೆ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಯುತ್ತಿದೆ. ಸಚಿವ ಆರ್.ಅಶೋಕ್ ಅನಾಥ ಶವಗಳ ಅಸ್ಥಿ ವಿಸರ್ಜಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಬಳಿಯ ಶ್ರೀ ಕಾಶಿವಿಶ್ವನಾಥ ದೇವಾಲಯ ಸಮೀಪದ ಕಾವೇರಿ, ಕಪಿಲಾ ನದಿ ಬಳಿ ಶವಗಳ ಮುಕ್ತಿ ಕಾರ್ಯ ನಡೆಯಿತು. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ವಿಧಿವಿಧಾನ ಜರುಗಿತು. ಕೊವಿಡ್ ಅನಾಥ ಶವಗಳ ಅಸ್ಥಿ ವಿಸರ್ಜನೆಯನ್ನು ಕಂದಾಯ ಸಚಿವ ಆರ್.ಅಶೋಕ್ ನೆರವೇರಿಸಿದರು.

 ಇಂದು ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಅಸ್ಥಿ ವಿಸರ್ಜನೆ ಮಾಡಲಾಯಿತು. ಬೆಂಗಳೂರಿನ ವಿವಿಧೆಡೆ ಕೊವಿಡ್ ಮೃತರ ಅಂತ್ಯಕ್ರಿಯೆ ನಡೆದಿದೆ. ಆದರೆ ಅಂತ್ಯಕ್ರಿಯೆ ನಡೆದ ಬಳಿಕ ಸಂಬಂಧಿಕರು ಅಸ್ಥಿ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದಲೇ ಅಸ್ಥಿ ವಿಸರ್ಜನೆಗೆ ನಿರ್ಧರಿಸಿತ್ತು 12 ಪುರೋಹಿತರಿಂದ ಮಹಾಗಣಪತಿ ಪೂಜೆ, ನಾರಾಯಣ ಬಲಿ, ಅಕಾಲ ಮರಣ ಪ್ರಾಯಶ್ಚಿತ್ತ, ತಿಲಹೋಮ, ಪಿಂಡ ಪ್ರದಾನ, ಅಸ್ಥಿ ನಾರಾಯಣ ಪೂಜೆ ನಡೆಯಿತು.

Spread the love

Related Articles

Leave a Reply

Your email address will not be published.

Back to top button
Flash News