CORONA VIRUSTop Newsಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)

ಬಿಬಿಎಂಪಿ ಆಡಳಿತದ ಯೋಗ್ಯತೆನೇ ಇಷ್ಟು..! ಇಲ್ಲಿ ಇರೋ ಬೇಜವಾಬ್ದಾರಿತನದ ಅಧಿಕಾರಿಗಳು ಇನ್ನೆಲ್ಲೂ ಸಿಗಲ್ಲ..

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಗೆ ಸಿಲುಕಿ ಜನ ಅಕ್ಷರಸಃ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್, ಬೆಡ್, ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಎಷ್ಟೋ ಕೊರೊನಾ ಸೋಂಕಿತರು ಬೀದಿಬೀದಿಯಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಂತೂ ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ, ಚಿಕಿತ್ಸೆಗಾಗಿ, ಆಕ್ಸಿಜನ್‌ಗಾಗಿ ಎಂತಹ ಹಾಹಾಕಾರ ಸೃಷ್ಠಿಯಾಗಿತ್ತೆಂಬುದನ್ನು ಇನ್ನೂ ಯಾರೂ ಮರೆತಿಲ್ಲ. ಇಂತಹ ಸಂಕಷ್ಟ ಸಮಯದ ಮಧ್ಯೆ ಆಕ್ಸಿಜನ್ ಕಾಳಸಂತೆಯಲ್ಲಿ ಮಾರಟ, ಬೆಡ್ ಬ್ಲಾಕಿಂಗ್ ದಂಧೆ ಬೇರೆ ನಡೀತಿದ್ದದ್ದು ಬೆಳಕಿಗೆ ಬಂದಿತ್ತು. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅದೆಷ್ಟು ಅಮಾಯಕ ಜನರು ಬಲಿಯಾಗಿದ್ದಾರೋ ಗೊತ್ತಿಲ್ಲ.

ಬಿಬಿಎಂಪಿ ಆಡಳಿತದ ಯೋಗ್ಯತೆನೇ ಇಷ್ಟು ಅನಿಸುತ್ತೆ…ಇಲ್ಲಿ ಇರುವಷ್ಟು ಉಡಾಳತನ ಹಾಗೂ ಬೇಜವಾಬ್ದಾರಿತನದ ಅಧಿಕಾರಿಗಳು ನಿಮಗೆ ಇನ್ನೆಲ್ಲೂ ಸಿಗಲಿಕ್ಕಿಲ್ಲವೇನೋ. ಕೊವಿಡ್ ಸನ್ನಿವೇಶದಲ್ಲೂ ಮುಂದುವರೆದಿರುವ ಅವರ ನಿರ್ಲಕ್ಷ್ಯ ಇವತ್ತು ಜನರನ್ನು ಆತಂಕಕ್ಕೆ ದೂಡಿದೆ.

ಕೊರೊನಾ ಶವಗಳ ಅಂತ್ಯಸಂಸ್ಕಾರ ನಡೆದ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಬಳಸಲಾದ ಅಪಾಯಕಾರಿ ಕಸವನ್ನು ವಿಲೇವಾರಿ ಮಾಡದೆ ಇರೋದ್ರಿಂದ ಸುತ್ತಮುತ್ತಲಿನ ಜನ ಆತಂಕದಲ್ಲಿ ದಿನ ದೂಡುವಂತಾಗಿದೆ. ಕೊರೊನಾದಿಂದ ಸತ್ತವರ ಶವ ಸುಡುವ ತಲೆನೋವು ಕೊನೆಯಾಯಿತಾದರೂ ಶವಸಂಸ್ಕಾರಕ್ಕೆ ಬಳಸಲಾದ ವಸ್ತುಗಳ ವಿಲೇವಾರಿಗೆ ಮುಕ್ತಿ ಸಿಗದಿರುವುದು ಮಾತ್ರ ದುರಾದೃಷ್ಟಕರ.

ಲಾಟ್ ಗಟ್ಟಲೇ ಬಿದ್ದಿರುವ ಕಸವನ್ನು ತೆರವು ಮಾಡೊಕೆ ಬಿಬಿಎಂಪಿ ತಲೆನೇ ಕೆಡಿಸಿಕೊಳ್ಳದಿರುವುದರಿಂದ ಸುತ್ತಮುತ್ತಲಿನ ಜನ ಆತಂಕದಲ್ಲಿ ದಿನ ದೂಡುವಂತಾಗಿದೆ. ಚಾಮರಾಜಪೇಟೆಯ ಚಿತಾಗಾರದಲ್ಲಿ ಕೊರೊನಾ ಶವಗಳನ್ನು ತಂದು ಸುಡುತ್ತಿದ್ದುದು ಎಲ್ಲರಿಗೂ ಗೊತ್ತಿರೋದೇ. ಶವ ಸುಡುವುದಕ್ಕೂ ಕಿಲೋಮೀಟರ್ ವರೆಗೆ ಕ್ಯೂ ನಿಲ್ಲುತ್ತಿದ್ದ ಸನ್ನಿವೇಶ ಇವತ್ತು ಇಲ್ಲ ಅನ್ನೋದು ಸಮಾಧಾನಕರ ಸಂಗತಿಯಾದರೂ,ಕೊರೊನಾ ಶವಗಳ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿದ್ದ ನೂರಾರು ಟನ್ ಗಳಷ್ಟು ಕಸವನ್ನು ಎತ್ತುವುದಕ್ಕೆ ಬಿಬಿಎಂಪಿಯವರು ಬಾರದೇ ಇರೋದು ನಾಗರಿಕರಲ್ಲಿ ಆತಂಕವನ್ನಷ್ಟೇ ಅಲ್ಲ, ಆಕ್ರೋಶವನ್ನೂ ಮೂಡಿಸಿದೆ.

ಕೊರೊನಾ ಶವಗಳನ್ನು ವಿಧಿವತ್ತಾಗಿ ಸಂಸ್ಕಾರ ಮಾಡಿದ ಮೇಲೆ ಶವಸಂಸ್ಕಾರಕ್ಕೆ ಬಳಸಲ್ಪಟ್ಟ ವಸ್ತುಗಳನ್ನು ವಿಲೇವಾರಿ ಮಾಡಿಯೇ ಇಲ್ಲ. ಇದನ್ನು ಕೊವಿಡ್ ಕಸವೆಂದು ಪರಿಗಣಿಸಿರುವುದರಿಂದ ಹೆಚ್ಚಿನ ಸುರಕ್ಷತೆ ಕ್ರಮ ಅನುಸರಿಸಬೇಕಿತ್ತು. ಆದರೆ ಬಿಬಿಎಂಪಿ ಸಿಬ್ಬಂದಿ ಆ ಕೆಲಸ ಮಾಡೋ ಮಾತು ಹಾಳಾಗಿ ಹೋಗಲಿ, ಕೊವಿಡ್ ಶವಸಂಸ್ಕಾರಕ್ಕೆ ಬ್ರೇಕ್ ಬಿದ್ದ ಮೇಲೆ ಪರಿಸ್ಥಿತಿ ಏನಾಗಿದೆ ಎಂದು ಅವಲೋಕಿಸುವ ಕೆಲಸಕ್ಕೂ ಮುಂದಾಗಿಲ್ಲ.

ಕಸ ತೆಗೆಯಿರಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಕೊರೊನಾ ಡ್ಯೂಟಿ ಇರುವುದರಿಂದ ಆಗೋದಿಲ್ಲ ಎಂಬ ಉಡಾಫೆ ಉತ್ತರ ನೀಡ್ತಿದ್ದಾರಂತೆ.
ಮಾಮೂಲು ಕಸವಾಗಿದ್ದರೆ ಜನ ಹೇಗೋ ಅದನ್ನು ವಿಲೇವಾರಿ ಮಾಡುತ್ತಿದ್ದರೇನೋ. ಆದರೆ ಕೊರೊನಾ ಕಸವಾಗಿರುವುದರಿಂದ ಅದರಿಂದ ಅಪಾಯ ಎದುರಾಗಬಹುದೆನ್ನುವ ಆತಂಕದಿಂದ ಅದರ ಬಳಿ ಹೋಗುತ್ತಿಲ್ಲ. ಇದರಿಂದ ಕೊಳೆಯುತ್ತಲೇ ಇದೆ. ಇದು ಇನ್ನಷ್ಟು ಅಪಾಯಕ್ಕೆ ಎಡೆ ಮಾಡಿಕೊಡುವ ಅಪಾಯವಿದೆ. ಈಗಲೂ ಬಿಬಿಎಂಪಿ ನಿರ್ಲಕ್ಷ್ಯ ತೋರಿದರೆ ಮುಂದೆ ಅನಾಹುತಗಳು ಸಂಭವಿಸಬಹುದು

Spread the love

Related Articles

Leave a Reply

Your email address will not be published.

Back to top button
Flash News