CORONA VIRUSlock downMoreScrollTop NewsUncategorizedರಾಜ್ಯ-ರಾಜಧಾನಿ

ದ್ವಿತೀಯ ಪಿಯುಸಿ ಎಕ್ಸಾಮ್ ಕ್ಯಾನ್ಸಲ್ ಆದ್ರೂ ರಿಪೀಟರ್ಸ್ಗೆ ತಪ್ಪಲಿಲ್ಲ ಟೆನ್ಷನ್.. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣಾ ಎಂಬಂತಾಗಿದೆ ಶಿಕ್ಷಣ ಇಲಾಖೆಯ‌ ನಿರ್ಧಾರ..

ಮಹಾಮಾರಿ ಕೊರೊನಾ ಸೋಂಕು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರಿದ್ದು, ಸಿಬಿಎಸ್‌ಸಿ ಹಾಗೂ ಐಪಿಎಸ್‌ಸಿಯ 12ನೇ ತರಗತಿಯ ಪರೀಕ್ಷೆಗಳು ರದ್ದುಗೊಳಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಕರ್ನಾಟಕದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ. ಹಾಗೂ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಇದ್ದರೂ ಫೇಲ್ ಮಾಡುವುದಿಲ್ಲವೆಂಬ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಆದರೆ ಶಿಕ್ಷಣ ಇಲಾಖೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣಾ ಎಂಬಂತೆ ಮತ್ತೊಂದು ಎಡವಟ್ಟಿನ ನಿರ್ಧಾರಕ್ಕೆ ಮುಂದಾಗಿದೆ. ಹೌದು ದ್ವಿತೀಯ ಪಿಯುಸಿ ಫ್ರೆಶರ್ಸ್ಗೊಂದು ನ್ಯಾಯ ರಿಪಿಟರ್ಸ್ಗೆ ಮತ್ತೊಂದು ನ್ಯಾಯವೆಂಬಂತೆ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಫ್ರೆಶರ್ಸ್ಗೆ ಪರೀಕ್ಷೆ ಕ್ಯಾನ್ಸಲ್ ಆದ್ರೆ ರಿಪಿಟರ್ಸ್ ಪರೀಕ್ಷೆ ಬರೆಯೋದಕ್ಕೆ ರೆಡಿಯಾಗಬೇಕಿದೆ.

ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ರಿಪೀಟರ್ಸ್ಗೆ ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ಪರೀಕ್ಷೆ ನಡೆಯಲಿದೆ. ಕೊರೊನಾ 3ನೇ ಅಲೆ ಆಗಸ್ಟ್, ಸೆಪ್ಟೆಂಬರ್ನಲ್ಲಿ ಬರುವ ಸಾಧ್ಯತೆ ಇದ್ರೂ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಮುಂದಾಗಿದೆ. 93 ಸಾವಿರ ವಿದ್ಯಾರ್ಥಿಗಳ ಜೀವದ ಜೊತೆ ಪಿಯು ಬೋರ್ಡ್ ಚೆಲ್ಲಾಟವಾಡುತ್ತಿದೆ. ಈ ವರ್ಷ 76,387 ಪುನರಾವರ್ತಿತ ಹಾಗೂ 17,477 ಖಾಸಗಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯು ಪರೀಕ್ಷೆಗೆ ನೊಂದಣಿ ಮಾಡಲಾಗಿದೆ. ಸೋಂಕು ಹೆಚ್ಚಾದ್ರೆ ಪರೀಕ್ಷೆ ಹೇಗೆ ನಡೆಸಬೇಕು ಎಂಬ ಬಗ್ಗೆ ಪಿಯು ಬೋರ್ಡ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

ಮತ್ತೊಂದೆಡೆ ರಿಪೀಟರ್ಸ್‌ಗೆ ದ್ವಿತೀಯ ಪಿಯು ಪರೀಕ್ಷೆಗೆ ವಿರೋಧಿಸಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ರಿಪೀಟರ್ಸ್ ಆಕ್ರೋಶ ಹೊರ ಹಾಕಿದ್ದಾರೆ. ನಮಗೊಂದು ನ್ಯಾಯ, ಫ್ರೆಶರ್ಸ್‌ಗೊಂದು ನ್ಯಾಯಾನಾ? ಎಲ್ಲರದ್ದೂ ಜೀವವೇ ಅಲ್ಲವಾ ಶಿಕ್ಷಣ ಸಚಿವರೇ? ಕೊರೊನಾ ಇದ್ದರೂ ಕಳೆದ ವರ್ಷ ಪರೀಕ್ಷೆ ಬರೆದಿದ್ದೇವೆ. ಒಂದೋ ಎರಡೋ ವಿಷಯಗಳು ಪಾಸ್ ಆಗಿಲ್ಲ. ಹಾಗಂತ ಪರೀಕ್ಷೆ ಮಾಡಿ ನಮ್ಮ ಪ್ರಾಣ ತೆಗೆಯಬೇಡಿ ಎಂದು ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

18 ವರ್ಷದವರು ಮಾತ್ರ ನಿಮಗೆ ವೋಟ್ ಹಾಕುತ್ತಾರಾ? ಫಸ್ಟ್ ಟೈಂ ವೋಟರ್ಸ್ ಟ್ರ್ಯಾಕ್ ಮಾಡಲು ಈ ನಿರ್ಧಾರ ಹೀಗಾಗಿ ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿದ್ದೀರಾ? ಮನೆಯಲ್ಲಿ ವಯಸ್ಸಾದವರು ಇರ್ತಾರೆ, ಮನೆ ಮನೆಗೆ ಕೊರೊನಾ ಹಬ್ಬುವಂತೆ ಮಾಡ್ಬೇಡಿ. ವ್ಯಾಕ್ಸಿನ್ ಇಲ್ಲ ನಿಮ್ಗೂ ಗೊತ್ತು, ಆದ್ರೂ ಈಗ ಪರೀಕ್ಷೆ ಯಾಕೆ ಬೇಕು? ಪ್ರಾಣ ಹೋದ್ರೆ ನೀವು ಜವಾಬ್ದಾರಿ ಹೊತ್ತಿಕೊಳ್ತೀರಾ ಸಾರ್? ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರದ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಗರಂ ಆಗಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News