CORONA LOCKDOWN HEROESCORONA VIRUSlock downMoreScrollUncategorizedಸಿನೆಮಾ ಹಂಗಾಮ

ದಚ್ಚು ಮನವಿಗೆ ಓಗೊಟ್ಟ ಜನತೆ: ಮೃಗಾಲಯ ಪ್ರಾಧಿಕಾರದ ಖಾತೆಗೆ ಒಂದೇ ವಾರದಲ್ಲಿ ಸಂದಾಯವಾದ ಹಣ ಎಷ್ಟು ಗೊತ್ತಾ..?

ಲಾಕ್‌ಡೌನ್‌ನಿಂದಾಗಿ ರಾಜ್ಯದ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಇದರಿಂದಾಗಿ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿದೆ. ಹೀಗಾಗಿ ಮೃಗಾಲಯದ ಸಂಕಷ್ಟಕ್ಕೆ ನೆರವಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನಟ ದರ್ಶನ್ ಅವರಿಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ನಟ ದರ್ಶನ್ ವಿಡಿಯೋ ಮೂಲಕ ನೆರವಿಗೆ ಮನವಿ ಮಾಡಿದ್ದರು.

ಕೊರೊನಾ ಸಂಕಷ್ಟದಲ್ಲಿ ಮಾನವ ಮಾತ್ರ ಅಲ್ಲ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ರಾಜ್ಯದ ಮೃಗಾಲಯಗಳಿಗೆ ಪ್ರವಾಸಿಗರಿಲ್ಲದೆ ಯಾವುದೇ ರೀತಿಯ ಆದಾಯ ಸಿಗುತ್ತಿಲ್ಲ. ಹೀಗಾಗಿ ಪ್ರಾಣಿಗಳ ನಿರ್ವಹಣೆ ಕಷ್ಟವಾಗಿತ್ತು. ಇದನ್ನರಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಮೃಗಾಲಯಕ್ಕೆ ನೆರವಾಗಿ ಎಂದು ವೀಡಿಯೋ ಮಾಡಿ ಮನವಿ ಮಾಡಿದ್ದರು. ಇದೀಗ ಆ ವೀಡಿಯೋಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಒಂದು ಕೋಟಿ ಹಣ ಸಂಗ್ರಹವಾಗಿದೆ.

ನಟ ದರ್ಶನ್ ಅವರು ಮನವಿ‌ ಮಾಡಿದ ಆರು ದಿನಗಳಲ್ಲೇ ಒಂದು‌ ಕೋಟಿಯಷ್ಟು ಹಣ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯವಾಗಿದೆ. ದರ್ಶನ್ ಅವರ ಅಭಿಮಾನಿಗಳು ಹಾಗೂ ವನ್ಯಜೀವಿ ಪ್ರಿಯರು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ನೆರವಿಗೆ ಮುಂದಾಗಿದ್ದಾರೆ. 50 ರೂಪಾಯಿಂದ ಒಂದೂವರೆ ಲಕ್ಷದವರೆಗೂ ಸಾಕಷ್ಟು ಜನರು ನೆರವನ್ನು ನೀಡಿದ್ದಾರೆ.

ನಟ ದರ್ಶನ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಮತ್ತಷ್ಟು ಚುರುಕಾಗಿದ್ದು ಅದರಲ್ಲಿ 9 ಮೃಗಾಲಯಕ್ಕೆ ಹಣ ಸಂಗ್ರಹವಾಗಿದೆ. ಅದರಂತೆ ಮೈಸೂರು ಮೃಗಾಲಯಕ್ಕೆ 51,76,700 ರೂಪಾಯಿ, ಬನ್ನೇರುಘಟ್ಟ ಮೃಗಾಲಯಕ್ಕೆ 29,83,000 ರೂಪಾಯಿ, ಶಿವಮೊಗ್ಗ ಮೃಗಾಲಯಕ್ಕೆ 7,24,800 ರೂಪಾಯಿ, ಗದಗ ಮೃಗಾಲಯಕ್ಕೆ 2,66,400 ರೂಪಾಯಿ, ಹಂಪಿ ಮೃಗಾಲಯಕ್ಕೆ 2,42,200 ರೂಪಾಯಿ, ಬೆಳಗಾವಿ ಮೃಗಾಲಯಕ್ಕೆ 2,22,300 ರೂಪಾಯಿ, ದಾವಣಗೆರೆ ಮೃಗಾಲಯಕ್ಕೆ 1,94,900 ರೂಪಾಯಿ, ಚಿತ್ರದುರ್ಗ ಮೃಗಾಲಯಕ್ಕೆ 1,49,300 ರೂಪಾಯಿ, ಕಲಬುರ್ಗಿ ಮೃಗಾಲಯಕ್ಕೆ 83,300 ರೂಪಾಯಿ ಸಂದಾಯವಾಗಿದ್ದು ಒಟ್ಟು 1,00,47,900 ರೂಪಾಯಿ ಮೃಗಾಲಯದ ನೆರವಿಗೆ ದೊರೆತಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದಲ್ಲಿ ದಶಕಗಳಿಂದಲೂ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಜಾರಿಯಲ್ಲಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಮೃಗಾಲಯ ತೀರ ಸಂಕಷ್ಟಕ್ಕೆ ಸಿಲುಕಿದ್ದರಿಂದ ಇದೀಗ ದಾನಿಗಳು ಹೆಚ್ಚಾಗಿ‌ ಮುಂದೆ ಬರುತ್ತಿದ್ದಾರೆ. ಮುಂದೆಯು ಮತ್ತಷ್ಟು ಜನರು ಮೃಗಾಲಯಕ್ಕೆ ನೆರವು ನೀಡುವುದು ಅವಶ್ಯಕವಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News