MoreScrollTop NewsUncategorizedಸಿನೆಮಾ ಹಂಗಾಮ

“ವಿಜಯ್ ನನಗಿಂತ ದೊಡ್ಡ ನಟ, ನಾನು ಅವರ ಆ ಚಿತ್ರಕ್ಕೆ ಫಿದಾ ಆಗೋದೇ” ಎಂದ ಆ ಸೂಪರ್ ಸ್ಟಾರ್ ಯಾರು..?ವಿಜಯ್ ಅವರ ಆ ಚಿತ್ರ ಯಾವುದು..?

ನಟ ಸಂಚಾರಿ ವಿಜಯ್​ ಅವರ ದುರಂತ ಅಂತ್ಯವನ್ನು ಯಾರೂ ಊಹಿಸಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಕಲಾವಿದನಾಗಿದ್ದ ಅವರು ರಸ್ತೆ ಅಪಘಾತದಿಂದ ನಿಧನರಾಗಿದ್ದು, ತೀವ್ರ ನೋವಿನ ಸಂಗತಿ. ನಿಜಕ್ಕೂ ಸ್ಯಾಂಡಲ್​ವುಡ್​ಗೆ ಇದು ದೊಡ್ಡ ನಷ್ಟ. ‘ನಾನು ಅವನಲ್ಲ ಅವಳು’, ‘ಹರಿವು’ ಮುಂತಾದ ಸಿನಿಮಾಗಳ ಮೂಲಕ ಸಂಚಾರಿ ವಿಜಯ್​ ಅವರು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಪಡಿಸಿದ್ದರು. ಆದರೆ ಅಂಥ ಕಲಾವಿದನಿಗೆ ಕನ್ನಡಿಗರು ಸೂಕ್ತ ಮನ್ನಣೆ ನೀಡಲಿಲ್ಲ ಎಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಕೂಡ ಹೇಳಿದ್ದರು.

ಅದು ಕನ್ನಡದ ‘ಜೆಂಟಲ್​ ಮನ್​’ ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮದ ವೇದಿಕೆ. ಅಂದು ದರ್ಶನ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪ್ರಜ್ವಲ್​ ದೇವರಾಜ್​ ನಟನೆಯ ಆ ಸಿನಿಮಾದಲ್ಲಿ ಸಂಚಾರಿ ವಿಜಯ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದರು. ಅಂದಿನ ವೇದಿಕೆಯಲ್ಲಿ ವಿಜಯ್​ ಅವರನ್ನು ದರ್ಶನ್​ ಮನಸಾರೆ ಹೊರಗಳಿದ್ದರು. ಅಲ್ಲದೆ, ಕರ್ನಾಟಕದಲ್ಲಿ ವಿಜಯ್​ ಅವರ ಪ್ರತಿಭೆಯನ್ನು ಜನರು ಪ್ರೋತ್ಸಾಹಿಸಿಲ್ಲ ಎಂಬುದನ್ನು ತುಂಬ ಬೇಸರಿಂದ ದರ್ಶನ್​ ಹೇಳಿದ್ದರು.

ದಯವಿಟ್ಟು ನಮ್ಮ ಕನ್ನಡದ ಜನರು ಸ್ವಲ್ಪ ಎದ್ದೇಳಿ ಎಂದು ನಾನು ಕೇಳಿಕೊಳ್ಳುತ್ತೇನೆ. ಸಂಚಾರಿ ವಿಜಯ್​ ಅವರಿಂದ ನಾನು ಮಾತು ಆರಂಭಿಸುತ್ತೇನೆ. ಅವರು ಬಹಳ ದೊಡ್ಡ ನಟ. ಯಾಕೆಂದರೆ, ‘ನಾನು ಅವನಲ್ಲ ಅವಳು’ ಸಿನಿಮಾ ನೋಡಿದ ಮೇಲೆ ಅವರ ನಟನೆಗೆ ನಾನು ಫಿದಾ ಆಗಿಹೋದೆ. ತುಂಬ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಇದೇ ಸಿನಿಮಾ ಪರಭಾಷೆಯಲ್ಲಿ ಬಂದಿದ್ದರೆ ಬೆನ್ನು ತಟ್ಟಿ, ಚಪ್ಪಾಳೆ ಹೊಡೆದು, ದುಡ್ಡು ಕೊಟ್ಟು ಕಳಿಸುತ್ತೇವೆ. ನಿಜವಾಗಿಯೂ ಅಸಹ್ಯ ಎನಿಸುತ್ತದೆ. ಅಕ್ಕಪಕ್ಕದವರನ್ನು ಚೆನ್ನಾಗಿ ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟುಬಿಡುತ್ತೇವೆ. ತಮಿಳಲ್ಲಿ ಅದು ನೋಡಿದೆ, ತೆಲುಗುನಲ್ಲಿ ಇದು ನೋಡಿದೆ ಎನ್ನುತ್ತಾರೆ ನಮ್ಮ ಜನ. ಕನ್ನಡದಲ್ಲಿ ಬಂದ ಇಂಥ ಒಳ್ಳೆಯ ಸಿನಿಮಾಗಳನ್ನೂ ನೋಡ್ರಯ್ಯ’ ಎಂದು ದರ್ಶನ್​ ಹೇಳಿದ್ದರು. ಖುದ್ದು ಸಂಚಾರಿ ವಿಜಯ್ ಅವರೇ ಸಂದರ್ಶನವೊಂದರಲ್ಲಿ ದರ್ಶನ್ ರವರು ಆ ವೇದಿಕೆಯಲ್ಲಿ ತನ್ನ ಬಗ್ಗೆ ಮಾತನಾಡ್ದಾಗ ನಾನು ಸರ್ ಪ್ರೈಸ್ ಆಗಿಹೋದೆ ಎಂದಿದ್ದರು.

 

Spread the love

Related Articles

Leave a Reply

Your email address will not be published.

Back to top button
Flash News