ಕರ್ನಾಟಕದಲ್ಲಿ ಇಂದು 4,517 ಜನರಿಗೆ ಕೊರೊನಾ ಸೋಂಕು ಪತ್ತೆ.. 120 ಸಾವು

0

ಬೆಂಗಳೂರು: ಕರ್ನಾಟಕದಲ್ಲಿ ಇಂದು 4,517 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 120 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು 8,456 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 1,26,813 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಈವರೆಗೆ ಸೋಂಕಿತರ ಪೈಕಿ 26,45,735 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 33,883 ಜನರು ನಿಧನರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು ಸಾವಿರಕ್ಕೂ ಕಡಿಮೆ ಕೊರೊನಾ ಪ್ರಕರಣಗಳ ದಾಖಲಾಗಿದ್ದು, ಇಂದು ಒಂದೇ ದಿನ 933 ಜನರಿಗೆ ಸೋಂಕು ದೃಢಪಟ್ಟಿದೆ, 12 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 71,282 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಮೈಸೂರು 545, ಮಂಡ್ಯ 131,  ಚಿಕ್ಕಮಗಳೂರು 183, ಬಳ್ಳಾರಿ 67,  ಹಾಸನ 346, ದಾವಣಗೆರೆ 136, ಬೆಂಗಳೂರು ಗ್ರಾಮಾಂತರ 111, ಬೆಂಗಳೂರು ನಗರ 933, ಬೀದರ್ 6, ಚಾಮರಾಜನಗರ 61, ಚಿಕ್ಕಬಳ್ಳಾಪುರ 123, ಚಿತ್ರದುರ್ಗ 74, ಉತ್ತರ ಕನ್ನಡ 146, ಬಾಗಲಕೋಟೆ 10, ದಕ್ಷಿಣ ಕನ್ನಡ 525,  ಧಾರವಾಡ 77, ಗದಗ 28 ,  ಹಾವೇರಿ 24, ಕಲಬುರಗಿ 9, ಕೊಡಗು 137, ಕೋಲಾರ 77, ಕೊಪ್ಪಳ 61, ಬೆಳಗಾವಿ 201, ರಾಯಚೂರು 19, , ಶಿವಮೊಗ್ಗ 141, ತುಮಕೂರು 144, ರಾಮನಗರ 12, ಉಡುಪಿ 167, ವಿಜಯಪುರ 7, ಯಾದಗಿರಿ ಜಿಲ್ಲೆಯಲ್ಲಿ 16 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯದಲ್ಲಿ ಇಂದು ಕೊವಿಡ್ ಸೋಂಕಿನಿಂದ 120 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ 12, ಮೈಸೂರು ಜಿಲ್ಲೆ 17, ಮಂಡ್ಯ ಜಿಲ್ಲೆ 8, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆ 11,  ದಾವಣಗೆರೆ ಜಿಲ್ಲೆ 7, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಹಾಸನ ಜಿಲ್ಲೆ 5, ಕೋಲಾರ ಜಿಲ್ಲೆ 4, ಚಿಕ್ಕಮಗಳೂರು ಜಿಲ್ಲೆ 3, ರಾಯಚೂರು ಜಿಲ್ಲೆ 2, ಚಿತ್ರದುರ್ಗ, ತುಮಕೂರು, ಉಡುಪಿ, ಕೊಡಗು ಚಾಮರಾಜನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲೆ ಬೀದರ್,  ಬೆಳಗಾವಿ, ಗದಗದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Spread the love
Leave A Reply

Your email address will not be published.

Flash News