ರಾಜ್ಯದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಘೋಷಿಸಿದ್ದ ಲಾಕ್ಡೌನ್ ನನ್ನು ಇದೀಗ ಹಂತಹಂತವಾಗಿ ತೆರವುಗೊಳಿಸುತ್ತಿದೆ. ಇಂದಿನಿಂದ ರಾಜ್ಯದಲ್ಲಿ ಎರಡನೇ ಹಂತದ ಅನ್ಲಾಕ್ ಜಾರಿಯಾಗಿದೆ. ರಾಜ್ ಅನ್ಲಾಕ್ ಆಗ್ತಿದ್ದಂತೆ ಪೊಲೀಸರು ರೌಡಿಶೀಟರ್ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಹೌದು. ಪೂರ್ವ ವಿಭಾಗದ ಬಾಣಸವಾಡಿ ಉಪ ವಿಭಾಗದ ಠಾಣಾ ಪೊಲೀಸರು ರೌಡಿಶೀಟರ್ಗಳ ಮನೆ ಮೇಲೆ ಏಕಾಏಕಿ ರೇಡ್ ಮಾಡಿದ್ದು, ಡಿಜೆಹಳ್ಳಿ, ಕೆಜೆಹಳ್ಳಿ, ಶಿವಾಜಿನಗರ, ಗೋವಿಂದಪುರ, ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿನರರ ಠಾಣಾ ವ್ಯಾಪ್ತಿಯಲ್ಲಿ ರೇಡ್ ನಡೆಸಲಾಗಿದ್ದು, ಡಿಜೆಹಳ್ಳಿ ಮಜರ್, ಚಪ್ಪಡಿ ನದೀಮ್, ಗೋವಿಂದಪುರ ಅಬ್ದುಲ್ ಸೇರಿದಂತೆ ನೂರಕ್ಕೂ ಹೆಚ್ಚು ರೌಡಿ ಶೀಟರ್ಗಳ ಮನೆ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.
ದಾಳಿ ವೇಳೆ ಗಾಂಜಾ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಏರಿಯಾದಲ್ಲಿ ಸೈಲೆಂಟ್ ಆಗಿರಬೇಕು, ಯಾವುದೇ ಹೊಸ ಕೇಸ್ ಮಾಡಬಾರದು ಎಂದು ರೌಡಿಶೀಟರ್ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನು ಪೊಲೀಸರು ಅನೇಕ ರೌಡಿ ಶೀಟರ್ಗಳನ್ನ ವಶಕ್ಕೆ ಪಡೆದು ಮೆಡಿಕಲ್ ಚೆಕಪ್ ಮಾಡಿಸುತ್ತಿದ್ದು, ಅವರೆನಾದ್ರೂ ಗಾಂಜಾ ಸೇವನೆ ಮಾಡಿರೋದು ಕನ್ಫಮ್ ಆದ್ರೆ IPC 27 B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗುತ್ತದೆ. ಒಟ್ಟಾರೆ ರಾಜ್ಯ ಅನ್ಲಾಕ್ ಆಗುತ್ತಿದ್ದಂತೆ ಪೊಲೀಸರು ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.