ಬೆಂಗಳೂರಲ್ಲಿ ಮರಗಳನ್ನು ಕತ್ತರಿಸುವ ಯೊಜನೆಯನ್ನು ವಿರೋಧಿಸಿ ಸಹಿ ಸಂಗ್ರಹಕ್ಕೆ ಮನವಿ ಮಾಡಿದ ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ರಮ್ಯಾ..

0

ಸ್ಯಾಂಡಲ್‌ವುಡ್ ನಟಿ ಮೋಹಕ ತಾರೆ ರಮ್ಯಾ ಸದ್ಯ ರಾಜಕೀಯದಿಂದಲೂ, ಸಿನಿಮಾ ರಂಗದಿಂದಲೂ ದೂರ ಉಳಿದಿದ್ದಾರೆ. ಮುಂದಿನ ದಿನಗಳಲ್ಲಿಯೂ ರಮ್ಯಾ ಚಿತ್ರರಂಗಕ್ಕಾಗಲಿ, ರಾಜಕೀಯಕ್ಕಾಗಲಿ ಬರುವ ಸೂಚನೆಯೂ ಇಲ್ಲ. ಆದರೆ ರಮ್ಯಾ ಈಗ ಸೋಶಿಯಲ್ ಮಿಡಿಯಾದಲ್ಲಂತೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ರಮ್ಯಾ ಬೆಂಗಳೂರಿನಲ್ಲಿ ಆರು ಸಾವಿರ ಮರಗಳ ಮಾರಣ ಹೋಮದ ಯೋಜನೆಯನ್ನ ವಿರೋಧಿಸಿ ಸಹಿ ಸಂಗ್ರಹಕ್ಕೆ ಮನವಿ ಮಾಡಿದ್ದಾರೆ.

ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಯೋಜನೆ ಅಡಿಯಲ್ಲಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಯೋಜನೆಗೆ 6 ಸಾವಿರಕ್ಕೂ ಅಧಿಕ ಮರಗಳನ್ನು ಕತ್ತರಿಸಲಾಗುತ್ತಿದೆ. ಇದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮರ ಕಡಿಯುವುದು ಏಕೆ ಇದರಿಂದ ಪರಿಸರ ಮತ್ತಷ್ಟು ಹಾಳಾಗಲಿದೆ ಎನ್ನುವ ಮಾತುಗಳನ್ನು ಪರಿಸರವಾದಿಗಳು ಹೇಳಿದ್ದಾರೆ. ಹೀಗಾಗಿ ನಟಿ ರಮ್ಯಾ ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಪರಿಸರ ಪರ ಕಾಳಜಿ ಹೊಂದಿರುವ ಅನೇಕರು ಮರವನ್ನು ಕತ್ತರಿಸುವುದಕ್ಕೆ ವಿರೋಧಿಸಿ ಸಹಿ ಸಂಗ್ರಹಿಸುತ್ತಿದ್ದಾರೆ. ಬೆಂಗಳೂರಿನ ಮರಗಳನ್ನು ಉಳಿಸುವ ಆಂದೋಲನವನ್ನು ರಮ್ಯಾ ಬೆಂಬಲಿಸಿದ್ದಾರೆ. ಹಾಗೆಯೇ ತಮ್ಮ ಅಭಿಮಾನಿಗಳ ಬಳಿಯೂ ಸಹಿ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ

Spread the love
Leave A Reply

Your email address will not be published.

Flash News