ಕರ್ನಾಟಕದಲ್ಲಿ ಇಂದು 4,867 ಜನರಿಗೆ ಕೊರೊನಾ ಸೋಂಕು ಪತ್ತೆ.. 142 ಸಾವು

0

ಕರ್ನಾಟಕದಲ್ಲಿ ಇಂದು 4867 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 142 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿಂದು 1034 ಮಂದಿಗೆ ಸೋಂಕು ಧೃಡಪಟ್ಟಿದ್ದು, 28 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 28,11,320ಕ್ಕೆ ಏರಿಕೆಯಾಗಿದ್ದು, 26,54,139 ಜನರು ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 34,025 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.  1,23,134 ಕೊರೊನಾ ಸೋಂಕಿತರಿಗೆ  ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಬೆಂಗಳೂರು ನಗರ 1034, ಬೆಂಗಳೂರು ಗ್ರಾಮಾಂತರ 134, ಮೈಸೂರು 546, ಮಂಡ್ಯ 154, ದಕ್ಷಿಣ ಕನ್ನಡ 542, ಚಿತ್ರದುರ್ಗ 138, ಹಾಸನ 364, ಉತ್ತರ ಕನ್ನಡ 119, ತುಮಕೂರು 182, ಶಿವಮೊಗ್ಗ 217, ಚಾಮರಾಜನಗರ 109, ಬಳ್ಳಾರಿ 106, ಕೊಡಗು 206, ಬಾಗಲಕೋಟೆ 23, ಉಡುಪಿ 117, ಬೆಳಗಾವಿ 93,  ಬೀದರ್ 12,  ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 152, ದಾವಣಗೆರೆ 176, ಧಾರವಾಡ 55, ಗದಗ 17, ಹಾವೇರಿ 18, ಕೋಲಾರ 90, ಕೊಪ್ಪಳ 26,  ರಾಯಚೂರು 20, ರಾಮನಗರ 21,   ವಿಜಯಪುರ 34, ಕಲಬುರಗಿ 26,  ಯಾದಗಿರಿ 8 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 28, ಬಳ್ಳಾರಿ 12, ಮೈಸೂರು 22, ದಕ್ಷಿಣ ಕನ್ನಡ 14,  ಧಾರವಾಡ 8, ಹಾವೇರಿ, ಉತ್ತರ ಕನ್ನಡ ಶಿವಮೊಗ್ಗದಲ್ಲಿ ತಲಾ ಐವರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು, ಹಾಸನ, ತುಮಕೂರು 3, ಬೆಂಗಳೂರು ಗ್ರಾಮಾಂತರ, ಕೋಲಾರ 4,  ಕೊಡಗು, ರಾಯಚೂರು, ಮಂಡ್ಯ ತಲಾ 2, ಚಿಕ್ಕಬಳ್ಳಾಪುರ, ವಿಜಯಪುರ, ಗದಗ,  ಚಾಮರಾಜನಗರ, ಬೀದರ್​​, ಉಡುಪಿ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

 

Spread the love
Leave A Reply

Your email address will not be published.

Flash News