ಸೋನು ಸೂದ್ ಬಳಿ ವಿಚಿತ್ರ ಬೇಡಿಕೆಯನ್ನಿಟ್ಟ ವ್ಯಕ್ತಿ: ಅದಕ್ಕೆ ರಿಯಲ್ ಹೀರೋ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ..?

0

ರಿಯಲ್ ಹೀರೋ ಸೋನು ಸೂದ್ ಮಾನವೀಯ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ, ಕೊರೊನಾ ಭೀಕರತೆಯ ಸಮಯದಲ್ಲಿ ಕಷ್ಟದಲ್ಲಿರೋರ ಸಹಾಯಕ್ಕೆ ನಿಂತು ಅನೇಕರ ಪ್ರಾಣ ಕಾಪಾಡಿದ ನಟ ಸೋನು ಸೂದ್.  ಬದುಕಲು ಕಷ್ಟಪಡುತ್ತಿರುವ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ.

ಸೋನು ಸೂದ್‌ಗೆ ಸಹಾಯ ಕೋರಿ ಸಾವಿರಾರು ಮೆಸೇಜ್‌ಗಳು ಬರುತ್ತವೆ. ಪ್ರತ್ಯೇಕ ಸಹಾಯವಾಣಿಯನ್ನು ತೆರೆದರು, ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಾವಿರಾರು ಮಂದಿ ಸಹಾಯ ಕೋರಿ ಸಂದೇಶ ಕಳುಹಿಸುತ್ತಿರುತ್ತಾರೆ. ಇದರಲ್ಲಿ ಸಾಧ್ಯವಾದಷ್ಟು ಮಂದಿಗೆ ಸೋನು ಸೂದ್ ಸಹಾಯ ಮಾಡುತ್ತಾರೆ.

ಇತ್ತೀಚಿಗೆ ನೆಟ್ಟಿಗನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸೋನು ಸೂದ್ ಬಳಿ “ಸಹೋದರ, ನನ್ನ ಗರ್ಲ್ ಫ್ರೆಂಡ್ ಐ ಫೋನ್ ಕೇಳುತ್ತಿದ್ದಾಳೆ. ನನಗೆ ಸಹಾಯ ಮಾಡುತ್ತೀರಾ?” ಎಂದು ಕೇಳಿದ್ದಾರೆ. ನೆಟ್ಟಿಗರ ಮನವಿಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, “ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ನನಗೆ ಗೊತ್ತಿಲ. ಒಂದು ವೇಳೆ ಅವಳಿಗೆ ಐ ಫೋನ್ ನೀಡಿದರೆ, ನಿಮಗೇನು ಪ್ರಯೋಜನ ವಾಗುವುದಿಲ್ವಲ್ಲಾ?,” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸೋನು ಸೂದ್ ಉತ್ತರ ಅಭಿಮಾನಿಗಳ ಮೆಚ್ಚಿಗೆ ಪಡೆದಿದೆ.

Spread the love
Leave A Reply

Your email address will not be published.

Flash News