ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಪೊಲೀಸರ ವಶಕ್ಕೆ..

0

ಕುಖ್ಯಾತ ಭೂಗತ ಪಾತಕಿ ಹಾಗೂ ದೇಶದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ, ತಮ್ಮ ಇಕ್ಬಾಲ್ ಕಸ್ಕರ್‌ನನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು  ಮಾದಕ ವಸ್ತು ನಿಯಂತ್ರಣ ಬ್ಯೂರೊ ಅಧಿಕಾರಿಗಳು ಬಂಧಿಸಿದ್ದಾರೆ.

2017ರಲ್ಲಿ ಮುಂಬೈನ ಥಾನೆಯಲ್ಲಿ ಬಿಲ್ಡರ್ಸ್‌ಗಳಿಂದ ಹಫ್ತಾ ವಸೂಲಿ ನಡೆಸುತ್ತಿದ್ದ ದಾವೂದ್‌ ತಮ್ಮ ಇಕ್ಬಾಲ್ ಕಸ್ಕರ್‌ನನ್ನು ಪೊಲೀಸರು ಬಂಧಿಸಿ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಹತ್ಯೆ ಪ್ರಕರಣವೊಂದರಲ್ಲಿ 2003ರಲ್ಲಿ ಅರಬ್​ ಕೊಲ್ಲಿ ರಾಷ್ಟ್ರಗಳಿಂದ ಇಕ್ಬಾಲ್ ಕಸ್ಕರ್‌ನನ್ನು ಗಡಿಪಾರು ಮಾಡಲಾಗಿತ್ತು.  ಆದರೆ 2007ರಲ್ಲಿ ಆ ಪ್ರಕರಣದಲ್ಲಿ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿತ್ತು.

ಇತ್ತೀಚೆಗೆ, ಎನ್‌ಸಿಬಿ ಸರಕುಗಳನ್ನ ಹಿಡಿದಿದ್ದು, ಅದನ್ನ ಪಂಜಾಬ್ ಜನರು ಕಾಶ್ಮೀರದಿಂದ ಮುಂಬೈಗೆ ಬೈಕ್‌ನಲ್ಲಿ ಸಾಗಿಸುತ್ತಿದ್ರು. ಈ ಪ್ರಕರಣದಲ್ಲಿ ಸುಮಾರು 25 ಕಿಲೋಗ್ರಾಂಗಳಷ್ಟು ಚರಕರು ಸಿಕ್ಕಿಬಿದ್ದಿವೆ. ಇನ್ನು ಈ ಪ್ರಕರಣದ ತನಿಖೆಯ ಸಮಯದಲ್ಲಿ, ಎನ್‌ಸಿಬಿಗೆ ಭೂಗತ ನಂಟು ಪತ್ತೆಯಾಗಿದೆ.

Spread the love
Leave A Reply

Your email address will not be published.

Flash News