ರೇಖಾ ಕೊಲೆಗೆ ಕಾರಣ ಶೋಭನ್ ಗ್ಯಾಂಗ್ ದ್ವೇಷನೋ…? ಕೌಟುಂಬಿಕ ಕಲಹನೋ.?..ಟೆಂಡರ್ ವ್ಯಾಜ್ಯನೋ..ರಿಯಲ್ ಎಸ್ಟೇಟ್ ವ್ಯವಹಾರನೋ..?

0

ಬೆಂಗಳೂರು:ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆಯಾಗಿ ಹೋಗಿದೆ.ಕೊಲೆಯ ಸುತ್ತ ಪೊಲೀಸ್ ತನಿಖೆ ಕೂಡ ಶುರುವಾಗಿದೆ. ಕೊಲೆಗೆ ಹಿನ್ನಲೆ ಏನು ಎನ್ನುವುದರ ಬಗ್ಗೆ ಪೊಲೀಸರು ಎಲ್ಲಾ ಆಂಗಲ್ ಗಳಲ್ಲೂ ಇನ್ ವೆಸ್ಟಿಗೇಷನ್ ಚುರುಕುಗೊಳಿಸಿದ್ದಾರೆ.ರೇಖಾ ಕದಿರೇಶ್ ಅವರ ಕೌಟುಂಬಿಕ ಹಿನ್ನಲೆ,ರಾಜಕೀಯ ಬೆಳವಣಿಗೆ ಹಾಗೂ ವೈಯುಕ್ತಿಕ ವೈರುದ್ಧ್ಯಗಳ ಸುತ್ತಲೂ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.ಕೊಲೆ ನಡೆದ ಬಳಿಯೇ ಸಿಸಿ ಟಿವಿ ಇರೋದ್ರಿಂದ ಕೊಲೆಗಾರರ ಮಾಹಿತಿ ಪಕ್ಕಾ ಸಿಕ್ಕಾಗಿದೆ ಎನ್ನುವ ಸಂಗತಿಗಳು ಕೇಳಿಬರುತ್ತಿವೆ.

ರೇಖಾ ಕದಿರೇಶ್ ಕೊಲೆಗೆ ಕಾರಣಗಳೇನು ಎನ್ನುವ ಹಿನ್ನಲೆಯಲ್ಲಿ ತನಿಖೆ ಪ್ರಾರಂಭಿಸಿರುವ ಪೊಲೀಸರಿಗೆ ಸಿಕ್ಕಿರುವ ಕೆಲವು ಪ್ರಾಥಮಿಕ ಮಾಹಿತಿ ಪ್ರಕಾರ ಮೊದಲ ಶಂಕೆ ಕೇಂದ್ರೀಕೃತವಾಗಿರೋದು ಶೋಭನ್ ಗ್ಯಾಂಗ್ ಮೇಲೆ..ಬಹುಷಃ ಇದೇ ಅಂತಿಮವಾಗುವ ಸಾಧ್ಯತೆಗಳೂ ಇವೆ.ಅಂದ್ಹಾಗೆ ಈ ಶೋಭನ್ ಗ್ಯಾಂಗ್ ಎನ್ನುವುದು ಯಾವುದು ಎನ್ನುವುದರ ಮೇಲೆ ಬೆಳಕು ಚೆಲ್ಲುವ ಯತ್ನ ನಡೆದರೆ ತೆರೆದುಕೊಳ್ಳೋದೇ 2018ರ ಫೆಬ್ರವರಿಯಲ್ಲಿ ನಡೆದ ಕದಿರೇಶ್ ಅವರ   ಮರ್ಡರ್ ಹಾಗೂ ಅದಕ್ಕಿರುವ ಕಾರಣ.

ಶೋಭನ್ ಗ್ಯಾಂಗ್ ಕದಿರೇಶ್ ವಾಸವಿದ್ದ ಚೆಲುವಾದಿಪಾಳ್ಯಕ್ಕೆ ಆತುಕೊಂಡಂತೆ ವಾಸವಿದ್ದ ಹುಡುಗರ ಪಡೆ.ಸಣ್ಣಪುಟ್ಟ ರೌಡಿಯಿಸಂ ಚಟುವಟಿಕೆಗಳಲ್ಲೂ ಆಕ್ಟೀವ್ ಆಗಿತ್ತೆನ್ನೋದು ಪೊಲೀಸ್ ಮಾಹಿತಿ.ಕದಿರೇಶ್ ಗೆ ಈ ಗ್ಯಾಂಗ್ ನೊಂದಿಗೆ ಠಕ್ಕರ್ ಶುರುವಾಗೊಕ್ಕೆ ಕಾರಣ ಹೆಣ್ಣು-ಹಣ ಎನ್ನೋ ಮಾಹಿತಿಗಳಿವೆ. ತಾನೂ ಕೂಡ ರೌಡಿಯಿಸಂ ಚಟುವಟಿಕೆಗಳಲ್ಲಿ ಇದ್ದುದ್ದರಿಂದ ಹಾಗೆಯೇ ತನ್ನ ಜತೆ ಬೆಂಲಿಗರ ಪಡೆ ಇತ್ತೆನ್ನುವ ಧೈರ್ಯದಿಂದ ಕದಿರೇಶ್ ಕೂಡ ನೇರವಾಗಿಯೇ ಶೋಭನ್ ಗ್ಯಾಂಗ್ ಜತೆ ನೇರವಾಗಿಯೇ ಸಂಘರ್ಷಕ್ಕಿಳಿದಿದ್ದರೆನ್ನಲಾಗಿದೆ.

ಆದ್ರೆ ಯಾವ್ದೋ ಒಂದು ಕೆಟ್ಟ ಗಳಿಗೆ ಎನಿಸುತ್ತೆ,ಇದೇ ಶೋಭನ್ ಗ್ಯಾಂಗ್ ಫೆಬ್ರವರಿ 7 ರಂದು ಕದಿರೇಶ್ ಅವರನ್ನು ಅವರ ಮನೆಯ ಬಳಿಯೇ ಸಿಗಿದುಹಾಕಿ ಕೊಂದುಬಿಡುತ್ತೆ.ಇದಕ್ಕೆ ಆ ಸನ್ನಿವೇಶದಲ್ಲಿ ನಾನಾ ಕಾರಣಗಳನ್ನು ನೀಡಲಾಗಿತ್ತು.ಈ ಕೊಲೆಯಿಂದ ಕುದಿಯತೊಡಗಿದ ಕದಿರೇಶ್ ಹುಡುಗರು ಪ್ರತೀಕಾರಕ್ಕೆ ಹೊಂಚಾಕುತ್ತಿರುವುದನ್ನು ಗಮನಿಸಿ ನವೀನ್ ಹಾಗೂ ವಿನಯ್ ಎನ್ನುವವರು ಕೋರ್ಟ್ ಗೆ ಶರಣಾಗಿದ್ದರು.ಆತನ ಶಿಷ್ಯರಾದ ಪೀಟರ್, ಸುರೇಶ್, ರಾಬರ್ಟ್ ಈ ಕೃತ್ಯದಲ್ಲಿ ಭಾಗಿಯಾಗಿದ್ದೂ ಖಾತ್ರಿಯಾಗಿತ್ತು.

ಆದ್ರೆ ದ್ವೇಷದ ಪ್ರತೀಕಾರ ಅಷ್ಟು ಸಲೀಸಾಗಿ ನಿಲ್ಲುತ್ತಾ,ಕದಿರೇಶ್ ಹುಡುಗರು ಶೋಭನ್ ಗ್ಯಾಂಗ್ ಹುಡುಗನೊಬ್ಬನನ್ನು ಸಿಗಿದು ಹಾಕಿ ಕೇಕೆ ಹಾಕಿದ್ದರು.ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಶೋಭನ್ ಗ್ಯಾಂಗ್ ಹುಡುಗರು ರಿವೇಂಜ್ ಗಾಗಿ ಹೊಂಚಾಕುತ್ತಿದ್ದರು.ಮೂರು ವರ್ಷ 4 ತಿಂಗಳಲ್ಲೇ ಕದಿರೇಶ್ ಪತ್ನಿ ರೇಖಾ ಅವರನ್ನು ಅವರ ವಾರ್ಡ್ ನಲ್ಲೇ ಫುಡ್ ಕಿಟ್ ಹಂಚುವ ವೇಳೆ ಜನರ ಸಮ್ಮುಖದಲ್ಲೇ ಮುಗಿಸಿ ಹಾಕಿದ್ದಾರೆ.

ಆದ್ರೆ ಈ ಕೊಲೆಯ ದ್ವೇಷ ಇಲ್ಲಿಗೆ ನಿಲ್ಲುವಂಗೆ ಕಾಣುತ್ತದೆಂದುಕೊಂಡ್ರೆ ಅದು ತಪ್ಪು,ಕದಿರೇಶ್ ಹುಡುಗರು ಶೋಭನ್ ಗ್ಯಾಂಗ್ ನ್ನೇ ಟಾರ್ಗೆಟ್ ಮಾಡಿಕೊಳ್ಳದೆ ಬಿಡ್ತಾರಾ..ಆ ಗ್ಯಾಂಗ್ ನ ಯಾರೋ ಒಬ್ಬ ಕ್ರಿಮಿನಲ್ ಸಧ್ಯವೇ ಪ್ರತೀಕಾರಕ್ಕೆ ಬಲಿಯಾಗೋದು ಗ್ಯಾರಂಟಿ ಎನ್ನಲಾಗ್ತಿದೆ.ಏಕಂದ್ರೆ ರೌಡಿಯಿಸಂ ಜಗತ್ತಿನ ದುರಂತವೇ ಅಂತದ್ದು.

ರೇಖಾ ಕೊಲೆಗೆ ಕಾರಣ ಎನ್ನಲಾಗುತ್ತಿರುವ ಪಾತಕಿ ಪೀಟರ್..!
ರೇಖಾ ಕೊಲೆಗೆ ಕಾರಣ ಎನ್ನಲಾಗುತ್ತಿರುವ ಪಾತಕಿ ಪೀಟರ್..!
ಗಾಂಜಾ ಮತ್ತಿನಲ್ಲಿ ಕೊಲೆ ಮಾಡಿದ್ನಾ ಪಾತಕಿ ಸೂರ್ಯ..!
ಗಾಂಜಾ ಮತ್ತಿನಲ್ಲಿ ಕೊಲೆ ಮಾಡಿದ್ನಾ ಪಾತಕಿ ಸೂರ್ಯ..!

ಇನ್ನೊಂದು ಕಾರಣವನ್ನೂ ನೀಡಲಾಗ್ತಿದೆ.ಕದಿರೇಶ್ ಅವರಿಗೆ ರೇಖಾ ಅವರಿಗೆ ಎರಡನೇ ಪತ್ನಿ ಎನ್ನಲಾಗ್ತಿದೆ.ತನ್ನ ಗಂಡನನ್ನು ಬುಟ್ಟಿಗೆ ಹಾಕ್ಕೊಂಡ್ಲು ಎಂದು ಮೊದಲ ಪತ್ನಿ ಸದಾ ರೇಖಾ ಜತೆ ಗಲಾಟೆಗಿಳಿಯುತ್ತಿದ್ದರು ಎನ್ನಲಾಗಿದೆ.ಇದೇ ವಿಷಯದಲ್ಲಿ ಮೊದಲ ಹಾಗೂ ಎರಡನೇ ಪತ್ನಿಗೂ ನಿರಂತರ ಗಲಾಟೆಗಳಾಗುತ್ತಿದ್ದವು.ಗಂಡ ಸತ್ತ ನಂತರ ಆಸ್ತಿ ಹಂಚಿಕೆ ವಿಚಾರದಲ್ಲೂ ಗಲಾಟೆಗಳಿದ್ದವಂತೆ.ಆಗಲೇ ಮೊದಲ ಪತ್ನಿ ನಿನ್ನನ್ನು ಮುಗಿಸಿಬಿಡ್ತೀನಿ ಎನ್ನುವ ಮಾತುಗಳನ್ನಾಡುತ್ತಿದ್ದರೆನ್ನುವ ಸುದ್ದಿಯಿದೆ.ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿದ್ದ ರೇಖಾ ತಾನಾಯ್ತು..ತನ್ನ ಪಾಡಾಯ್ತು..ತನ್ನ ವಾರ್ಡಾಯ್ತು ಎಂದುಕೊಂಡು ಸುಮ್ಮನಾಗಿದ್ರಂತೆ.ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರಂತೆ.

ಇದೆಲ್ಲದರ ನಡುವೆ ರೇಖಾ ಕದಿರೇಶ್ ಅವರ ಕುಟುಂಬದಲ್ಲೇ ಮುಂದಿನ ಚುನಾವಣೆಯಲ್ಲಿ ಯಾರು ನಿಲ್ಲಬೇಕೆನ್ನುವ ವಿಷಯದಲ್ಲಿ ಗಲಾಟೆಗಳಾಗುತ್ತಿದ್ದವೆನ್ನುವ ಸುದ್ದಿಯಿದೆ.ರೇಖಾ ಅವರಿಗೆ ಚುನಾವಣೆಯಲ್ಲಿ ನಿಲ್ಲದಂತೆ ಟಿಕೆಟ್ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದವಂತೆ.ಬಿಜೆಪಿ ವರಿಷ್ಠರನ್ನೂ ಕಳೆದ ಬಾರಿ ಸಂಪರ್ಕಿಸಿ ಈ ಬಗ್ಗೆ ಸಂಬಂಧಿಕರು-ಕುಟುಂಬದವರು ಮಾತನಾಡಿದ್ದರಂತೆ.ಆದ್ರೆ ಕದಿರೇಶ್ ತನ್ನ ಎರಡನೇ ಪತ್ನಿ ರೇಖಾ ಬಗ್ಗೆ ಒಲವು ತೋರಿಸಿದ್ದರಿಂದ ಎರಡನೇ ಬಾರಿಯೂ ಅವರಿಗೇನೆ ಟಿಕೆಟ್ ಕೊಡಲಾಗಿತ್ತಂತೆ.ಇದರಿಂದ ಅವರ ಕುಟುಂಬಸ್ಥರು ವಿಚಲಿತರಾಗಿದ್ದರಂತೆ.ಈ ಬಾರಿಯೂ ಗೆದ್ದುಬಿಟ್ಟರೆ ತಮ್ಮ ಕಥೆ ಮುಗೀತೆನ್ನುವ ಕಾರಣಕ್ಕೆ ರೇಖಾ ಅವರನ್ನು ಮುಗಿಸುವ ನಿರ್ದಾರಕ್ಕೆ ಬರಲಾಯ್ತಾ..? ಗೊತ್ತಿಲ್ಲ.

ಇನ್ನೊಂದೆಡೆ ಟೆಂಡರ್ ವಿಚಾರದಲ್ಲಿ ಕೊಲೆ ನಡೆದಿರಬಹುದೆನ್ನುವ ಶಂಕೆ ವ್ಯಕ್ತವಾಗ್ತಿದೆ.ವಾರ್ಡ್ ಗೆ ಸಂಬಂಧಿಸಿದ ಕೋಟ್ಯಾಂತರ ಮೊತ್ತದ ಟೆಂಡರ್ ವಿಚಾರದಲ್ಲಿ ರೇಖಾ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದರು  ಎನ್ನಲಾಗಿದೆ.ಕಾರ್ಪೊರೇಟರ್ ಗಳ ಪವರ್ ಇಲ್ಲದಿದ್ದರೂ ತಮಗೆ ಬೇಕಾದ ಕಾಂಟ್ರ್ಯಾಕ್ಟರ್ಸ್ ಗಳಿಗೆ ತಮ್ಮ ರಾಜಕೀಯ ಗುರುವಿನ ಮೂಲಕ ಹೇಳಿಸಿ ಕೊಡಿಸುವ ಕೆಲಸ ಮಾಡಿಸುತ್ತಿದ್ದರೆನ್ನುವ ಮಾತುಗಳಿವೆ.ಇದು ಅನೇಕ ಕಾಂಟ್ರ್ಯಾಕ್ಟರ್ಸ್ ಗಳನ್ನು ಕೊತ ಕೊತ ಕುದಿಯುವಂತೆ ಮಾಡಿತ್ತಂತೆ.ಪ್ರತಿಯೊಂದಕ್ಕು ಅಡ್ಡಗಾಲು ಹಾಕಿ ಕೆಲಸವನ್ನು ತಪ್ಪಿಸಿ ಕಮಿಷನ್ ಪಡೆಯುತ್ತಿದ್ದರೆನ್ನುವ ಕಾರಣಕ್ಕೇನಾದ್ರೂ ಈ ಮರ್ಡರ್ ನಡೆದಿರಬಹುದಾ? ಗೊತ್ತಾಗುತ್ತಿಲ್ಲ.

ರೇಖಾ ಅವರನ್ನು ಅಂದುಕೊಂಡಷ್ಟು ಸಲೀಸಾಗಿ ಮುಟ್ಟೊಕ್ಕೆ ಆಗೊಲ್ಲ..ಅವರ ಹಿಂದೆ ಇದ್ದಂತ ಬ್ಯಾಕಪ್ ಬಗ್ಗೆ ಹೆದರಿಕೆ ಎಲ್ಲರಿಗೂ ಇದ್ದೇ ಇತ್ತು.ಹಾಗಾಗಿ ಆ ಅನುಮಾನವನ್ನು ಬಲವಾಗಿ ವ್ಯಕ್ತಪಡಿಸಲಿಕ್ಕೆ ಆಗುತ್ತಿಲ್ಲ ಎನ್ನಲಾಗುತ್ತಿದೆಯಾದ್ರೂ, ಹಾಗೆ ನಡೆದಿರಲಿಕ್ಕಿಲ್ಲ ಎಂದು ಹೇಳಲು ಬರೊಲ್ಲ.ಇನ್ನೊಂದೆಡೆ ಅವರು ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದರೆನ್ನುವ ಮಾತುಗಳಿವೆ.ಅದರಲ್ಲಿನ ದ್ವೇಷವೂ ಕೊಲೆಗೆ ಕಾರಣವಿರಬಹುದು..ಹೀಗೆ ಹತ್ತಾರು ರೀತಿಯಲ್ಲಿ ವ್ಯಾಖ್ಯಾನಗಳನ್ನು ಮಾಡಲಾಗುತ್ತಿದೆ..ಆದ್ರೆ ಈ ಎಲ್ಲಾ ಶಂಕೆ-ಅನುಮಾನ-ಗೊಂದಲ-ಪ್ರಶ್ನೆಗಳಿಗೆ ಪೊಲೀಸ್ ತನಿಖೆ ಮಾತ್ರ ತೆರೆ ಎಳೆಯಬಲ್ಲದು.

Spread the love
Leave A Reply

Your email address will not be published.

Flash News