ಕರ್ನಾಟಕದಲ್ಲಿ ಎರಡು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆ; ಆರೋಗ್ಯ ಸಚಿವ ಡಾ.ಕೆ ಸುಧಾಕರ್..
ಕರ್ನಾಟಕದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದು, ನಿನ್ನೆ ಮೈಸೂರಿನಲ್ಲಿ ಒಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿತ್ತು, ಈಗ ಬೆಂಗಳೂರಿನಲ್ಲೂ ಒಂದು ಡೆಲ್ಟಾ ಪ್ಲಸ್ ಸೋಂಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಅವಶ್ಯಕ’ ಎಂದು ತಿಳಿಸಿದರು.
ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಯಾರು ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ. ಡೆಲ್ಟಾ ಪ್ಲಸ್ ಮತ್ತು ಡೆಲ್ಟಾ ವೈರಸ್ ಒಂದೇ ಗುಣಲಕ್ಷಣ ಹೊದಿದೆ. ಆದರೆ ಚಿಕಿತ್ಸೆ ವಿಧಾನ ಸ್ವಲ್ಪ ಬೇರೆ ಇದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಅಲ್ಲಿ ಶೇ.4-5 ರಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವ ಬಗ್ಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ಡೆಲ್ಟಾ ಪ್ಲಸ್ ವೈರಸ್ ಸೇರಿದಂತೆ ಎಲ್ಲಾ ರೂಪಾಂತರ ವೈರಸ್ ಗೆ ನಮ್ಮ ವ್ಯಾಕ್ಸಿನ್ ಗಳು ಪರಿಣಾಮಕಾರಿಯಾಗಿದೆ. ಈಗಾಗಲೇ 2 ಸಾವಿರ ಸ್ಯಾಂಪಲ್ ಗಳ ಟೆಸ್ಟ್ ಆಗಿದೆ, ಈಗಾಗಲೇ 6 ಜೀನೋಮ್ ಲ್ಯಾಬ್ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದ್ದು, ಮತ್ತಷ್ಟು ಸ್ಯಾಂಪಲ್ ಗಳನ್ನ ಹೆಚ್ಚಳ ಮಾಡುತ್ತೇವೆ ಎಂದರು.