“ಸಲಿಂಗಕಾಮಕ್ಕೆ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ”.. ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯ ಶಿಕ್ಷಕ ರಂಗನಾಥ್ ಅರೆಸ್ಟ್..!

0

ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮಾರ್ಗದರ್ಶನ ತೋರಬೇಕಿದ್ದ ಶಿಕ್ಷಕನೊಬ್ಬ ಯುವಕನಿಗೆ ನೀಲಿ ಚಿತ್ರ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಲಿಂಗಕಾಮಕ್ಕೆ ವಿದ್ಯಾರ್ಥಿಯನ್ನು ಬಳಸಿಕೊಂಡ ಆರೋಪದಡಿ ಕಾಮುಕ ಶಿಕ್ಷಕ ಎಸ್.ರಂಗನಾಥ್ ನನ್ನ ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ತಾಲೂಕಿನ ರಂಗನಾಥ್ 2009 ರಿಂದ 2010 ಶಾಲೆ ಮುಖ್ಯ ಶಿಕ್ಷಕನಾಗಿದ್ದ. 2017 ರಲ್ಲಿ ಮದುವೆಯಾಗಿದ್ದ ರಂಗನಾಥ್, ಶಾಲೆ ಆವರಣದಲ್ಲಿರುವ ವಸತಿ ಸಮುಚ್ಚಯದ ಮನೆಯಲ್ಲಿ ನೆಲೆಸಿದ್ದ. ಈತನಿಗೆ ಒಂದು ಹೆಣ್ಣು ಮಗುವಿದ್ದು, ಕೆಲ ತಿಂಗಳ ಹಿಂದಷ್ಟೆ ಪತ್ನಿ ಮಗುವಿನ ಸಮೇತ ತವರು ಮನೆಗೆ ಹೋಗಿದ್ದರು.

ಆರೋಪಿ ರಂಗನಾಥ್, ಶಾಲೆಯ 21 ವರ್ಷದ ವಿಶೇಷ ವಿದ್ಯಾರ್ಥಿಯ ಜೊತೆ  ಒಡನಾಟ ಬೆಳೆಸಿದ್ದ, ಸಲುಗೆಯಿಂದ ಮಾತನಾಡಿ ಮನೆಗೆ ಕರೆದುಕೊಂಡು ಹೋಗಿದ್ದ, ವಿದ್ಯಾರ್ಥಿಗೆ ನೀಲಿ ಚಿತ್ರಗಳನ್ನು ತೋರಿಸಿ, ನಂತರ ವಿದ್ಯಾರ್ಥಿಯ ಎಲ್ಲ ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿ ಲೈಂಗಿಕ ಕಿರುಕುಳ ನೀಡಿದ್ದ. ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿ, ಇತ್ತಿಚ್ಚೆಗಷ್ಟೆ ಊರಿಗೆ ಹೋದಾಗ ಘಟನೆ ಬಗ್ಗೆ ತಾಯಿಗೆ ತಿಳಿಸಿದ್ದ. ಬಳಿಕ ತಾಯಿ ಶಾಲಾ ಆಡಳಿತ ಮಂಡಳಿಗೆ ಹೇಳಿದ್ದರು. ವಿಚಾರಣೆ ಬಳಿಕ ತನಿಖೆ ನಡೆಸಿದ್ದ ಶಾಲಾ ಆಡಳಿತ ಮಂಡಳಿಗೆ ರಂಗನಾಥ್ನ ಸಲಿಂಗ ಕಾಮದ ಕೃತ್ಯ ಆರೋಪ ಸಾಬೀತಾಗಿತ್ತು.

ಈ ಬಗ್ಗೆ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿಕ್ಷಕ ರಂಗನಾಥ್, ಒತ್ತಾಯದ ಸಲಿಂಗಕಾಮ ಐಪಿಸಿ 377 ಹಾಗೂ ಜೀವ ಬೆದರಿಕೆ ಅಡಿ 506 ಆರೋಪದಡಿ ಎಫ್ ಐಆರ್  ದಾಖಲಾಗಿದ್ದು, ಕೋವಿಡ್ ನಿಂದಾಗಿ 7 ವಿಶೇಷ ಮಕ್ಕಳನ್ನು ಮಾತ್ರ ಶಾಲೆಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಉಳಿದವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಕಾರ್ಯದರ್ಶಿ ದೂರಿನಲ್ಲಿ ತಿಳಿಸಿದ್ದಾರೆ.

 

 

 

Spread the love
Leave A Reply

Your email address will not be published.

Flash News