ಕೈಯ್ಯಲ್ಲಿ ಅಧಿಕಾರ ಇದೆ ಅಂತ ಮೇಲಾಧಿಕಾರಿಗಳು ಬಡಪಾಯಿ ನೌಕರರ ಮೇಲೆ ದೌರ್ಜನ್ಯವೆಸಗುವುದು, ಕಿರುಕುಳ ನೀಡುವುದು ಹೊಸ ವಿಷಯವೇನಲ್ಲ. ಅದೆಷ್ಟೋ ನೌಕರರು ಅಧಿಕಾರಿಗಳ ಕಿರುಕುಳವನ್ನು ತಾಳಲಾರದೇ ಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಇವೆ.
ಅಂತೆಯೇ ಚನ್ನಗಿರಿ ವಲಯದ ವ್ಯಾಪ್ತಿಗೊಳಪಡುವ ಭದ್ರಾವತಿ ವಿಭಾಗದಲ್ಲಿ ಅರಣ್ಯ ದಿನಗೂಲಿ ನೌಕರ ತಿಮ್ಮಾಬೋವಿ ಎಂಬಾತ ಮೇಲಾಧಿಕಾರಿಯ ದೌರ್ಜನ್ಯ, ಕಿರುಕುಳದಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಭದ್ರಾವತಿ ವಲಯ ಕಚೇರಿಯ ಆರ್ಎಫ್ಒ ಆಗಿರುವ ಸತೀಶ್ ಬಳಿ ತಿಮ್ಮಾಬೋವಿ ಸಂಬಳ ಕೇಳಿದ್ದಕ್ಕೆ ಆತನನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದು, ನೌಕರ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ತಿಮ್ಮಾಬೋವಿ ಸ್ಥಿತಿ ಗಂಭಿರವಾಗಿದ್ದು, ಅರಣ್ಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗರಾಜ್ ಅವರು ಸತೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.