CORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedದೇಶ-ವಿದೇಶಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ನಿಜವಾಯ್ತು ಕನ್ನಡ ಫ್ಲ್ಯಾಶ್ ನ್ಯೂಸ್ ಭವಿಷ್ಯ..ಬಸವರಾಜ ಬೊಮ್ಮಾಯಿ ಆಯ್ಕೆ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ಕನ್ನಡ ಫ್ಲ್ಯಾಶ್ ನ್ಯೂಸ್..

ಜುಲೈ23 ರಂದು ಕನ್ನಡಫ್ಲಾಶ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿಯ ಪ್ರತಿ
ಜುಲೈ23 ರಂದು ಕನ್ನಡಫ್ಲಾಶ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿಯ ಪ್ರತಿ
ಜುಲೈ23 ರಂದು ಕನ್ನಡಫ್ಲಾಶ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿಯ ಪ್ರತಿ
ಜುಲೈ23 ರಂದು ಕನ್ನಡಫ್ಲಾಶ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿಯ ಪ್ರತಿ

ಕನ್ನಡ ಫ್ಲಾಶ್ ನ್ಯೂಸ್ ನುಡಿದ ಭವಿಷ್ಯ ಸತ್ಯವಾಗಿದೆ..ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಮುಂದಿನ ಸೂಕ್ತ ಅಭ್ಯರ್ಥಿ ಯಾರೆನ್ನುವ ಚರ್ಚೆ ಶುರುವಾಗಿದ್ದಾಗಲೇ ಕನ್ನಡ ಫ್ಲಾಶ್ ನ್ಯೂಸ್ ಪ್ರಸಕ್ತ ವಿದ್ಯಾಮಾನಗಳನ್ನು ಕ್ರೋಢೀಕರಿಸಿ ಜುಲೈ 23 ರಂದೇ ಬಸವರಾಜ ಬೊಮ್ಮಾಯಿ ಅವರ ಆಯ್ಕೆಗೆ ಕಾರಣಗಳೇನು ಆಗಬಹುದೆನ್ನುವುದನ್ನು ಸವಿಸ್ತಾರವಾಗಿ ವಿವರಿಸಿತ್ತು.ಅದರ ಸಾಕ್ಷ್ಯವನ್ನು ಕನ್ನಡ ಫ್ಲಾಶ್ ನ್ಯೂಸ್ ಈ ಮೂಲಕ ನೀಡುತ್ತಿದೆ.

(ಪತ್ರಿಕೆ ಜುಲೈ 23 ರಂದು ಪ್ರಕಟಿಸಿದ್ದ ವರದಿಯಲ್ಲಿ  ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರ ಹೆಸರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಯಾವೆಲ್ಲಾ ಕಾರಣಗಳಿಂದ ಸೂಚಿಸಬಹುದು ಎನ್ನುವುದಕ್ಕೆ ನೀಡಿದ್ದ ವಿಶ್ಲೇಷಣೆಯ ಆ ವಾಕ್ಯಗಳನ್ನು ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ..)

ಹಾಗಾದ್ರೆ ಯಡಿಯೂರಪ್ಪ ಸೂಚಿಸಿರುವ ಆ ಹೆಸರು ಯಾವುದು..? ಹೈಕಮಾಂಡ್ ಗೂ ಹೌದಲ್ವಾ..! ಎಂದೆನಿಸಿರುವ ಉತ್ತರಾಧಿಕಾರಿಯ ಹೆಸರೇ ಬಸವರಾಜ ಬೊಮ್ಮಾಯಿ ಎನ್ನಲಾಗುತ್ತಿದೆ.

ತನ್ನ ನಂಬಿಗಸ್ಥ, ತನ್ನದೇ ಜಾತಿ ಸಮುದಾಯದ ನಾಯಕ, ಪಕ್ಷದೊಳಗೆ ಅಷ್ಟೇನೂ ವಿರೋಧವಿಲ್ಲದೆ “ಎಲ್ಲರೂ ಪರ್ವಾಗಿಲ್ಲ..” ಎನ್ನುವ ರೀತಿಯ ಇಮೇಜ್ ಗಿಟ್ಟಿಸಿಕೊಂಡಿರುವ ನಾಯಕ ಬಸವರಾಜ ಬೊಮ್ಮಾಯಿ ಎನ್ನೋದನ್ನು ಹೈಕಮಾಂಡ್ ಗೆ ಯಡಿಯೂರಪ್ಪ ಮನದಟ್ಟು ಮಾಡಿಕೊಟ್ಟಿದ್ದಾರೆನ್ನಲಾಗಿದೆ. ಬೊಮ್ಮಾಯಿ ಸಿಎಂ ಆಗೋದ್ರಿಂದ ಪ್ರಬಲ ವೋಟ್ ಫ್ಯಾಕ್ಟರ್ ಆಗಿರುವ ಲಿಂಗಾಯಿತ ಸಮುದಾಯ ಪಕ್ಷದ ಬೆನ್ನಿಗೆ ನಿಲ್ಲುತ್ತೆ ಅಷ್ಟೇ ಅಲ್ಲ,ನನ್ನ ತಾಳ ಮೇಳ,ಮೈಂಡ್ ಸೆಟ್ ಬೊಮ್ಮಾಯಿ ಜತೆಗೆ ಚೆನ್ನಾಗಿ ಹೊಂದುವುದರಿಂದ ಪಕ್ಷ ಸಂಘಟನೆಯೂ ನಿರಾತಂಕವಾಗಿ ನಡೆಯುತ್ತಿದೆ.ಬಸವರಾಜ್ ಬೆನ್ನಿಗೆ ನಾನಿದ್ದು ಇತರೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದು ನನಗೇನು ಕಷ್ಟವಾಗಲಿಕ್ಕಿಲ್ಲ,ಇವರನ್ನು ಬಿಟ್ಟು ಇತರರನ್ನು ಆಯ್ಕೆ ಮಾಡಿದ್ರೆ ಪರಿಸ್ಥಿತಿ ನನಗೂ-ಪಕ್ಷ ಸಂಘಟನೆಗೂ ಅಷ್ಟೇನೂ ಅನುಕೂಲಕರವಾಗಲಿಕ್ಕಿಲ್ಲ ಎನ್ನುವುದನ್ನು ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟು ಬಂದಿದ್ದಾರಂತೆ.

ತಾನು ಹೇಳಿದ ಮಾತನ್ನು ಶಿರಾಸವಹಿಸಿ ಪಾಲಿಸುವಂಥ ಬಸವರಾಜ ಬೊಮ್ಮಾಯಿಯನ್ನು ಅಧಿಕಾರದ ಪೀಠದಲ್ಲಿ ಕುಳ್ಳರಿಸಿ ರಾಜ್ಯಭಾರವನ್ನು ತಾವು ಮಾಡಬಹುದು,ಬಸವರಾಜ ಬೊಮ್ಮಾಯಿ ತೋರಿಕೆಗೆ ಮುಖ್ಯಮಂತ್ರಿ ಅಷ್ಟೇ,ಆದ್ರೆ ಸೂಪರ್ ಸಿಎಂ ಆಗಿ ತಾವು ಮತ್ತೊಮ್ಮೆ ಅಧಿಕಾರ ನಡೆಸಬಹುದೆನ್ನುವ ಆಲೋಚನೆಯಲ್ಲೂ ಯಡಿಯೂರಪ್ಪ ಈ ರೀತಿಯ ಪ್ಲ್ಯಾನ್ ಮಾಡಿಕೊಂಡಿರಬಹುದೆನ್ನುವ ವಿಶ್ಲೇಷಣೆ ಕೇಳಿಬರುತ್ತಿರುವುದು ಸುಳ್ಳಲ್ಲ.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ರೆ ಸಾಕು, ಮಗ ವಿಜಯೇಂದ್ರನ ಆಟಾಟೋಪಕ್ಕೆ ಬ್ರೇಕ್ ಹಾಕಿದ್ರೆ ಸಾಕೆನ್ನುವ ಅವಸರಕ್ಕೆ ಬಿದ್ದಿರುವ ಹೈಕಮಾಂಡ್ ಬಿಎಸ್ ವೈ ಪ್ರಸ್ತಾಪಕ್ಕೆ ತಲೆಯಲ್ಲಾಡಿಸಿದೆಯಂತೆ.ಬೊಮ್ಮಾಯಿ ಅವರನ್ನು ಸಿಎಂಗಾದಿಗೆ ಕೂರಿಸಿ ಯಡಿಯೂರಪ್ಪ ಅವರನ್ನು ಕಾಲಾನುಕ್ರಮದಲ್ಲಿ ಡಮ್ಮಿ ಮಾಡಿ ಚುನಾವಣೆ ಹೊಸ್ತಿಲಲ್ಲಿ ಹೊಸ ಅಭ್ಯರ್ಥಿಯನ್ನು ಮುನ್ನಲೆಗೆ ತರುವುದು ಹೈಕಮಾಂಡ್ ಆಲೋಚನೆಯಾಗಿರಬಹುದೇನೊ..

Spread the love

Related Articles

Leave a Reply

Your email address will not be published.

Back to top button
Flash News