Top News

“ಕೆಂಗೇರಿ” ಮಾರ್ಗದ ಮೆಟ್ರೋ ಆರಂಭಕ್ಕೆ ಕ್ಷಣಗಣನೆ..ಸೇಫ್ಟಿ ಅಧಿಕಾರಿಗಳಿಂದ ಪರಿಶೀಲನೆ..

ಕೆಂಗೇರಿ ಮೆಟ್ರೋ ಮಾರ್ಗವನ್ನು ಪರಿಶೀಲಿಸಿದ ಕೇಂದ್ರ ಸುರಕ್ಷತಾ ತಂಡ..

ಬೆಂಗಳೂರು: ಮಹತ್ವಾಕಾಂಕ್ಷೆಯ ನಮ್ಮ ಮೆಟ್ರೋ ಕೆಂಗೇರಿ ಮಾರ್ಗದ ಆರಂಭಕ್ಕೆ ಅಗತ್ಯವಿರುವ ಸುರಕ್ಷತಾ ನಿರಪೇಕ್ಷಣಾ ಪತ್ರಕ್ಕೆ ಪೂರಕವಾಗಿ ಪರಿಶೀಲನೆ ಶುರುವಾಗಿದೆ. ಕೇಂದ್ರ ರೈಲ್ವೆ ಸೇಫ್ಟಿ ಆಯುಕ್ತ ಅಭಯ್ ಕುಮಾರ್ ರಾಯ್ ಹಾಗೂ ತಂಡದಿಂದ ಇಂದು ಪರಿಶೀಲನೆ ಆರಂಭವಾಗಿದೆ.

ಮೈಸೂರು ರಸ್ತೆ ಯಿಂದ ಕೆಂಗೇರಿ ವರೆಗೆ ನಿರ್ಮಾಣವಾಗಿರೋ ಮಾರ್ಗದಲ್ಲಿ ಕಳೆದ ಮೂರುತಿಂಗಳಿನಿಂದ ಟ್ರಯಲ್ ರನ್ ನಡೆಸಿದ್ದ ಬಿಎಂಆರ್ಸಿಎಲ್ ಆಹ್ವಾನದ ಮೇರೆಗೆ ಇಂದು ಪರಿಶೀಲನೆ ನಡೆಯಿತು.

ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ವಾಣಿಜ್ಯ ಸಂಚಾರಕ್ಕೆ ಸಿದ್ಧಗೊಂಡಿರೋ ಮಾರ್ಗವನ್ನು ರೈಲ್ವೆ ಸೇಫ್ಟಿ ಆಯುಕ್ತರು ಪರಿಶೀಲಿಸಿ, ಮೆಟ್ರೋ ಮಾರ್ಗದ ಕಾರ್ಯನಿರ್ವಹಣೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇಂದು ಮತ್ತು ನಾಳೆ ಎರಡು ದಿನ ಪರಿಶೀಲನೆ ನಡೆಯಲಿದೆ. ಅಂದ್ಹಾಗೆ ಒಟ್ಟು 7.53 ಕಿಮೀ ಉದ್ದದ 6 ನಿಲ್ದಾಣ ಇರೋ ಮಾರ್ಗವನ್ನು ಸುಮಾರು1560 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News